ತುಮಕೂರು : ತುಮಕೂರು ನಗರ ಮತ್ತು ತಾಲ್ಲೂಕು ಸವಿತಾ ಸಮಾಜದ ವತಿಯಿಂದ ಸಲೂನ್ ಮಾಲೀಕರ ಸಭೆಯಲ್ಲಿ ಜಿಲ್ಲಾ ಸವಿತಾ ಸಮಾಜದ ಆವರಣದಲ್ಲಿ ಅಧ್ಯಕ್ಷರಾದ ಕಟ್‌ವೆಲ್ ರಂಗನಾಥ್‌ರವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಇತ್ತೀಚಿನ ದಿನಗಳಲ್ಲಿ ಅಂಗಡಿ ಮಳಿಗೆ ಬಾಡಿಗೆ ಧರ, ವಿದ್ಯುತ್‌ಚ್ಛಕ್ತಿ ಧರ, ದಿನನಿತ್ಯ ಬಳಕೆ ವಸ್ತುಗಳು, ಸಲೂನ್ ಸಾಮಾಗ್ರಿಗಳ ಧರ ಹೇರಳವಾಗಿ ಜಾಸ್ತಿಯಾಗಿರುವುದರಿಂದ ಸಲೂನ್ ಧರ ಪಟ್ಟಿಗಳನ್ನು ಪರಿಷ್ಕರಣೆ ಮಾಡುವುದರ ಮೂಲಕ ಧರ ಹೆಚ್ಚಳಕ್ಕೆ ಮುಂದಾಗುವುದರ ಬಗ್ಗೆ ಸಮಗ್ರ ಚರ್ಚೆಯನ್ನು ಸಲೂನ್ ಮಾಲೀಕರ ಸಭೆಯಲ್ಲಿ ನಡೆಸಲಾಯಿತು.
ಇತ್ತೀಚೆಗೆ ಹಾಲಿ ಸರ್ಕಾರ ಗ್ಯಾರಂಟಿಗಳನ್ನು ನೀಡುತ್ತಿದ್ದು, ಅದರಂತೆ ಹಿಂದುಳಿದಿರುವ ನಮ್ಮ ಸವಿತಾ ಸಮಾಜದ ಉನ್ನತೀಕರಣಕ್ಕಾಗಿ ನಮ್ಮ ಸಲೂನ್‌ಗಳಿಗೆ ಉಚಿತ್ ವಿದ್ಯುತ್ ನೀಡವುದರಿಂದ ನಮ್ಮ ಸಮುದಾಯದ ಸಬಲೀಕರಣಕ್ಕೆ ಮುಂದಾಗಬೇಕಾಗಿದೆ ಜೊತೆಗೆ ಸವಿತಾ ಸಮಾಜದ ಅಭಿವೃದ್ಧಿ ನಿಗಮವನ್ನು ಆದಷ್ಟು ಶೀಘ್ರವಾಗಿ ಚಾಲನೆ ನೀಡುವುದರೊಂದಿಗೆ ನಮ್ಮ ಸಮಾಜದ ಅಭಿವೃದ್ಧಿಯನ್ನು ಮಾಡಲು ಮುಂದಾಗಬೇಕೆಂದು ಸಮಾಜದ ಎಲ್ಲಾ ಬಂಧುಗಳು ಅಧ್ಯಕ್ಷರಿಗೆ ಮನವಿಯನ್ನು ಮಾಡಿಕೊಂಡರು. ಅದಕ್ಕೆ ಅಧ್ಯಕ್ಷರು ಸರ್ಕಾರದ ಗಮನ ಸೆಳೆದು ಈ ಕುರಿತು ಕ್ರಮಕೈಗೊಳ್ಳುವುದಾಗಿ ಆಶ್ವಾಸನೆಯನ್ನು ನೀಡಿದರು. ಅಲ್ಲದೇ ಇತ್ತೀಚೆಗೆ ಸರ್ಕಾರ ಚರ್ಮ ಕುಟೀರಗಳನ್ನು ನೀಡುತ್ತಿದ್ದು, ಅದರಂತೆ ನಮ್ಮ ಸವಿತಾ ಸಮಾಜದ ಬಡವರಿಗೆ ಕ್ಷೌರ ಕುಟೀರವನ್ನು ನೀಡಬೇಕೆಂದು ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆಂದರು.
ಈ ಸಬೆಯಲ್ಲಿ ಅಧ್ಯಕ್ಷರಾದ ಕಟ್‌ವೆಲ್ ರಂಗನಾಥ್, ಪ್ರತಿನಿಧಿ ಸುರೇಶ್ ಎ.ಎಸ್, ಉಪಾಧ್ಯಕ್ಷರಾದ ಪ್ರವೀಣ್, ಪ್ರಧಾನ ಕಾರ್ಯದರ್ಶಿ ಪುನೀತ್ ಟಿ.ಡಿ, ಕಾರ್ಯಧ್ಯಕ್ಷರಾದ ಉಮೇಶ್ ಕೆ, ರಾಜ್‌ಕುಮಾರ್, ಪವನ್, ಶ್ರೀಧರ್ ಹಾಗೂ ಇತರರು ಉಪಸ್ಥಿತರಿದ್ದರು.