ಭೂಮಿ ಮಾನವ ಹಕ್ಕಾಗಬೇಕು. ಭೂಮಿ ಅಸ್ಮಿತೆ ಘನತೆ ಮತ್ತು ಸುಭದ್ರತೆಯ ನೊವಗಿಸುತ್ತವೆ. ಆದ್ದರಿಂದ ಯುವಜನರು ಬಹು ರಾಷ್ಟ್ರೀಯ ಕಂಪನಿಗಳ ನೌಕರಿಗಾಗಿ ಹಂಬಲಿಸದೆ ಭೂ ವಂಚಿತರ ವಸತಿ ಹೀನರ ಪ್ರಾಥಮಿಕ ಅಗತ್ಯ ಪೂರೈಕೆ ಪರವಾಗಿ ನಿಂತು ಧ್ವನಿಯೆತ್ತ ಬೇಕೆಂದು ನಿವಿನೋ ಪ್ರಶಸ್ತಿ ವಿಜೇತ ಹಿರಿಯ ಗಾಂಧಿವಾದಿ ಪಿ.ವಿ ರಾಜ್‌ಗೋಪಾಲ್ ಕರೆ ನೀಡಿದರು. ಆರ್.ಕೆ.ಎಸ್ ನ ಸ್ವಾಮಿ ಮಾತನಾಡಿ ಎಲ್.ಎ.ಆರ್.ಆರ್ ಕಾಯ್ದೆಯ ಜಾರಿ ಜಿಲ್ಲೆಯಲ್ಲಿ ಸಮರ್ಪಕವಾಗಿ ನಡೆಯುತ್ತಿಲ್ಲವೆಂದರು. ಸ್ಲಂ ಜನಾಂದೋಳನ ಸಮಿತಿಯ ಮುಖಂಡರಾದ ನರಸಿಂಹಮೂರ್ತಿ ಮತ್ತು ಕೆ. ದೊರೈರಾಜು ವಸತಿ ಹೀನರಿಗೆ ವಸತಿ ನಿರ್ಮಾಣಕ್ಕೆ ಅಗತ್ಯ ಭೂಮಿಯನ್ನು ಮೀಸಲಿಟ್ಟು ಭೂ ಹಂಚಿಕೆ ಮಾಡಬೇಕೆಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರಾದ ಜೆ.ಸಿ ಶಂಕ್ರಪ್ಪ, ನಾದೂರು ಕೆಂಚಪ್ಪ ಮಾತನಾಡಿ ಬಗರ್ ಹುಕುಂ ರೈತರಿಗೆ ಹಕ್ಕುಪತ್ರ ಮಂಜೂರಾತಿ ನೂತನ ಸರ್ಕಾರದ ಪ್ರಥಮ ಆದ್ಯತೆಯಾಗಲೆಂದು ಒತ್ತಾಯಿಸಿದರು. ಸಹಜ ಬೇಸಾಯ ಶಾಲೆಯ ರವೀಶ್, ಡಾ|| ಹೆಚ್ ಮಂಜುನಾಥ್, ಮಲ್ಲಿಕಾರ್ಜುನ ಕೊರವರ್, ನಿಸರ್ಗಾ, ಸಿ ಯತಿರಾಜು ಮುಂತಾದವರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಪ್ರಶಸ್ತಿ ವಿಜೇತ ಪಿ.ವಿ ರಾಜ್‌ಗೋಪಾಲ್‌ರವರನ್ನು ಈ ಸಮಾರಂಭದಲ್ಲಿ ಆತ್ಮೀಯವಾಗಿ ಅಭಿನಂದಿಸಲಾಯಿತು. ಸಿ.ಪಿ.ಮಾಧವನ್, ಪ್ರಭು ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿ ಭೂಮಿಯ ಪ್ರಶ್ನೆಯ ಮೇಲೆ ಐಕ್ಯ ಹೋರಾಟ ರೂಪಿಸಲು ಒಂದು ತೆರೆದ ಸಮನ್ವಯ ಸಮಿತಿಯನ್ನು ರಚಿಸಲಾಯಿತು. ಈ ಸಮಿತಿ ಜಿಲ್ಲೆಯ ಇತರ ಹೋರಾಟಗಾರರನ್ನೊಳ ಗೊಂ ಡು ಸಮಗ್ರ ಸಮಲೋಚನೆ ನಡೆಸಿ ಐಕ್ಯ ಹೋರಾಟವನ್ನು ಭೂ ಪ್ರಶ್ನೆಯ ಮೇಲೆ ರೂಪಿಸಬೇಕೆಂದು ತೀರ್ಮಾನಿಸಲಾಯಿತು. ರವೀಶ್ ಸ್ವಾಗತಿಸಿದರು ಸಿ ಯತಿರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು. ಅನೇಕ ಯುವಜನರು ಯುವತಿಯರು ಅತ್ಯಂತ ಆಸಕ್ತಿಯಿಂದ ಚರ್ಚೆಯಲ್ಲಿ ಪಾಲ್ಗೊಂಡಿದ್ದರು ಡಾ|| ಹೆಚ್ ಮಂಜುನಾಥ್ ಎಲ್ಲರನ್ನು ವಂದಿಸಿದರು.