ತುಮಕೂರು : ವಿಶ್ವಕ್ಕೆ ಕೊಟ್ಟಂತಹ ನಮ್ಮ ಭಾರತೀಯ ಕೊಡುಗೆಗಳಲ್ಲಿ ಯೋಗವೂ ಅತ್ಯಂತ ಮಹತ್ವ ಪೂರ್ಣವಾಗಿದ್ದು, ಯೋಗ ಪ್ರತಿಯೊಬ್ಬರ ಜೀವನದ ಭಾಗವಾಗಬೇಕು ಎಂದು ಸಿದ್ದಗಂಗಾ ಮಠಾಧ್ಯಕ್ಷರಾದ ಸಿದ್ದಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.
ಇಂದು ಬೆಳಿಗ್ಗೆ ನಗರದ ಸಿದ್ದಗಂಗಾ ಮಠದ ಆವರಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಾಗೂ ಜಿಲ್ಲಾ ಆಯುಷ್ ಇಲಾಖೆ, ಇವರ ಸಹಯೋಗದಲ್ಲಿ ವಸುದೈವ ಕುಟುಂಬಕಮ್ ಪ್ರತಿ ಅಂಗಳದಲ್ಲಿ ಯೋಗ ಎಂಬ ಘೋಷ ವಾಕ್ಯದೊಂದಿಗೆ ಹಮ್ಮಿಕೊಂಡಿದ್ದ ೯ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ೯ ನೇ ಅಂತಾರಾಷ್ಟ್ರೀಯ ಯೋಗ ದಿನ. ಕಳೆದ ೯ ವರ್ಷಗಳ ಹಿಂದೆ ಪ್ರಧಾನ ಮಂತ್ರಿಗಳು ವಿಶ್ವ ಸಂಸ್ಥೆಗೆ ಮನವಿ ಮಾಡಿಕೊಂಡ ಮೇರೆಗೆ ಪ್ರತಿ ವರ್ಷವೂ ಜೂನ್ ೨೧ನ್ನು ಅಂತಾರಾಷ್ಟ್ರೀಯ ದಿನವನ್ನಾಗಿ ಆಚರಿಸಲಾಗುತ್ತಿದ್ದು, ವ್ಯಾಯಾಮ ಮಾಡಿದರೆ ದೇಹಕ್ಕೆ ಮಾತ್ರ ಪುಷ್ಟಿ ಸಿಗುತ್ತದೆ. ಆದರೆ ಯೋಗಾಸನದ ಮೂಲಕ ಮಾಡಿದರೆ ದೇಹ, ಮನಸ್ಸು, ಆತ್ಮ ಈ ಮೂರಕ್ಕೂ ಉಪಯೋಗವಾಗುತ್ತದೆ, ಕೆಲವರು ದೈಹಿಕವಾಗಿ ಚೆನ್ನಾಗಿದ್ದರೆ, ಮಾನಸಿಕವಾಗಿ ಕುಗ್ಗಿ ಹೋಗಿರುತ್ತಾರೆ, ಕೆಲವರು ಮಾನಸಿಕವಾಗಿ ಚೆನ್ನಾಗಿದ್ದರೆ, ದೈಹಿಕವಾಗಿ ಕುಗ್ಗಿ ಹೋಗಿರುತ್ತಾರೆ. ಇವೆರಡೂ ಆರೋಗ್ಯವಲ್ಲ ದೇಹ ಮತ್ತು , ಮಾನಸಿಕವಾಗಿ ಸಧೃಡವಾಗಿರುವುದೇ ನಿಜವಾದ ಆರೋಗ್ಯವಾಗಿದೆ, ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯ ಕಾಪಾಡಿಕೊಳ್ಳುಲು ಯೋಗಾಭ್ಯಾಸವು ಅವಶ್ಯ, ಅಂತಹವರ ಜೀವನ ಉತ್ತಮವಾಗಿರುತ್ತದೆ. ಹಾಗಾಗಿ ಯೋಗ ಪ್ರತಿಯೊಬ್ಬರ ಬದುಕಿನ ಭಾಗವಾಗಲಿ ಎಂದು ಆಶಿಸಿದರು.

ಉಪವಿಭಾಗಾಧಿಕಾರಿ ಹೋಟೆಲ್ ಶಿವಪ್ಪ, ತಹಶೀಲ್ದಾರ್ ಸಿದ್ದೇಶ್, ಸ್ಭೆರಿದಂತೆ, ಸಿದ್ದಗಂಗಾ ಮಠದ ಸಾವಿರಾರು ಮಕ್ಕಳು, ವಿವಿಧ ಇಲಾಖೆಗಳ ಇತರೆ ಅಧಿಕಾರಿ, ಸಿಬ್ಬಂದಿಗಳು, ಸಾಮೂಹಿಕ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು, ಡಾ.ಭವ್ಯ ಅವರು ಸಾಮೂಹಿಕ ಯೋಗಾಭ್ಯಾಸದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು.

ಈ ಸಂದರ್ಭದಲ್ಲಿ ಮೈದಾಳ ಗ್ರಾ.ಪಂ. ಅಧ್ಯಕ್ಷೆ ಮಾಲಾ ಮಂಜುನಾಥ್, ಟೂಡಾ ಆಯುಕ್ತ ಗೋಪಾಲ್ ಜಾಧವ್, ಡಿಡಿಪಿಐ ಸಿ. ನಂಜಯ್ಯ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಸಂಜೀವಮೂರ್ತಿ, ಕೌಶಲ್ಯಾಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ. ಶ್ರೀನಿವಾಸ್, ರಂಗಧಾಮಯ್ಯ, ಬ್ರಹ್ಮಕುಮಾರಿ ಸಂಸ್ಥೆಯ ಸುಜಾತಾ ಕುಮಾರಿ, ಅರ್ಚನಾ, ್ಷ ಮತ್ತಿತರರು ಭಾಗವಹಿಸಿದ್ದರು.