ತುಮಕೂರಿನಲ್ಲಿ ಹೆಚ್ಚಾದ ಕೊಲೆ ಪ್ರಕರಣಗಳು : ಎಚ್ಚೆತ್ತ ಪೊಲೀಸ್‌ ಇಲಾಖೆ

ಖಾಸಗಿ ಕಂಪನಿಯ ಮಹಿಳಾ ಉದ್ಯೋಗಿಯನ್ನು ಕತ್ತು ಕೊಯ್ದು ಕೊಲೆ ತುಮಕೂರು ನಗರದಲ್ಲಿ ಘಟನೆ.

 

ತುಮಕೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಯುವತಿಯನ್ನು ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ತುಮಕೂರು ನಗರದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

 

ತುಮಕೂರಿನ ವಿದ್ಯಾನಗರದ ಬಾಡಿಗೆ ರೂಮಿನಲ್ಲಿ ತುರುವೇಕೆರೆ ಮೂಲದ ವೀಣಾ (21) ಕೊಲೆಯಾದ ದುರ್ದೈವಿಯಾಗಿದ್ದು ಆಕೆ ತನ್ನ ಸ್ನೇಹಿತೆಯೊಂದಿಗೆ  ವಾಸವಿದ್ದರು.

 

 

ತುಮಕೂರಿನ ಪಂಡಿತನಹಳ್ಳಿ ಬಳಿಯ ಖಾಸಗಿ ಕಂಪನಿಯಲ್ಲಿ ಟ್ರೈನಿ ಆಗಿ ಕೆಲಸ ನಿರ್ವಹಿಸುತ್ತಿದ್ದ ವೀಣಾ ನೆನ್ನೆ ಸಂಜೆ ಕೆಲಸ ಮುಗಿಸಿ ರೂಂಗೆ ವಾಪಸ್ ಆಗಿದ್ದಳು. ಶಿಫ್ಟ್‌ ವೈಸ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಆಕೆ ಸ್ನೇಹಿತೆ ಎಂದಿನಂತೆ ಕೆಲಸಕ್ಕೆ ತೆರಳಿದ್ದು ಆಕೆ ಕೆಲಸ ಮುಗಿಸಿ ಶುಕ್ರವಾರ ರಾತ್ರಿ ರೂಂಗೆ ವಾಪಸ್ ಆದಾಗ ‌ಈ ಘಟನೆ ಬೆಳಕಿಗೆ ಬಂದಿದೆ.

 

 

 

ಕೊಲೆ ಸಂಬಂಧ ಕೊಲೆಯಾದ ಯುವತಿ ವೀಣಾ ಸ್ನೇಹಿತೆ ಪುಷ್ಪ ತುಮಕೂರಿನ ಹೊಸ ಬಡಾವಣೆ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

 

 

ಹೊಸ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಪೊಲೀಸರು ತನಿಖೆ ಕೈಗೊಂಡಿದ್ದು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ತುಮಕೂರು ಜಿಲ್ಲೆಯಲ್ಲಿ ಕ್ರೈಂಗಳ ಸಂಖ್ಯೆ ಜಾಸ್ತಿಯಾಗಿದ್ದು, ಎಚ್ಚೆತ್ತಿರುವ ಪೊಲೀಸ್‌ ಇಲಾಖೆ ಇವೆಲ್ಲದಕ್ಕೂ ಕಡಿವಾಣವನ್ನು ಸೂಕ್ತ ಸಮಯದಲ್ಲಿ ಹಾಕಲಾಗುವುದೆಂದು ವರಿಷ್ಠರು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!