ನಾವು ಸೋಲಿನಿಂದ ಸುಮ್ಮನೆ ಕೂತಿಲ್ಲ ಮುಂದಿನ ದಿನಗಳಲ್ಲಿ ಪಕ್ಷವನ್ನು ಬಳಗೊಳಿಸಲು ಮುಂದಾಗಿದ್ದೇವೆ

ಬಿಜೆಪಿ ಪಕ್ಷದ ಪತ್ರಿಕಾಗೋಷ್ಠಿ ಖಾಸಗಿ ಹೋಟೆಲ್ ನಲ್ಲಿ ವಿಧಾನ ಪರಿಷತ್ ಸದಸ್ಯರಾದ ನವೀನ್ ಅವರು ನಡೆಸಿ ವಿಧಾನಸಭಾ ಚುನಾವಣೆ ನಂತರ ತಮ್ಮ ಸೋಲಿನ ಕಾರಣ ಮತ್ತು ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆ ಕುರಿತು ಮಾತನಾಡಿದರು.

 

 

 

ವಿಧಾನಸಭಾ ಚುನಾವಣೆಯ ಫಲಿತಾಂಶ ಕುರಿತು ಮಾತನಾಡಿದ ನವೀನ್ ರವರು ಪಕ್ಷದ ಸೋಲಿಗೆ ಕಾರಣಗಳು ಏನು ಮತ್ತು ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕ್ ಪಂಚಾಯತ್ ಚುನಾವಣೆಯಲ್ಲಿ ಹೇಗೆ ಕಾರ್ಯಕ್ರಮ ರೂಪಿಸಬೇಕು ಎಂಬುದರ ವಿಚಾರವಾಗಿ ಮಾತನಾಡಿದರು

 

 

ಮುಂದಿನ ದಿನಗಳಲ್ಲಿ ಯಾವ ರೀತಿಯಲ್ಲಿ ಸಂಘಟನೆ ಮತ್ತು ಕಾರ್ಯಕರ್ತರಲ್ಲಿ ಬಲ ತುಂಬುವ ಕೆಲಸ ಮಾಡುತ್ತಿದ್ದೇವೆ ಎಂದರು ಜೊತೆ ನಮ್ಮ ಸೋಲನ್ನು ಸಮರ್ಥನೆ ಮಾಡಿಕೊಂಡು ಮುಂದಿನ ದಿನಗಳಲ್ಲಿ ನಾವು ಹೆಚ್ಚಿನ ರೀತಿಯಲ್ಲಿ ಸಂಘಟನೆ ಮಾಡಿ ಗೆಲ್ಲುವಲ್ಲಿ ಶ್ರಮಿಸುತ್ತವೆ ಎಂದರು.

 

 

 

 

ಮತದಾರರು ಗ್ಯಾರಂಟಿ ಕಾರ್ಡ್ ಗಳಿಗೆ ಮನಃ ಸೋತಿದ್ದಾರೆ ಕಾಂಗ್ರೆಸ್ ಪಕ್ಷದವರು ಮನೆ ಮನೆಗೆ ಗ್ಯಾರಂಟಿ ಕಾರ್ಡ್ ತಲುಪಿಸುವುದರಲ್ಲಿ ಯಶಸ್ವಿಯಾಗಿದೆ ನಾವು ಕೋವಿಡ್ ಮತ್ತು ಇನ್ನಿತರ ಸಾಮಾಜಿಕ ಕಾರ್ಯಗಳನ್ನು ಮುಂದಿಟ್ಟು ಮತ ಕೇಳಿದ್ದೆವು ಆದರೆ ಜನ ಕಾಂಗ್ರೆಸ್ ನೀಡಿದ್ದ ಸುಳ್ಳಿನ ಗ್ಯಾರಂಟಿಗಳ ಕಡೆ ಒಲವು ತೋರಿದ್ದಾರೆ. ಇದು ವಾಸ್ತವಕ್ಕಿಂತ ದೂರದ ಮಾತಾಗಿದೆ ಜನರಿಗೆ ಮುಂದಿನ ದಿನಗಳಲ್ಲಿ ಈ ಕುರಿತು ಅರಿವಾಗುತ್ತದೆ ಎಂದರು.

 

 

 

 

ಇತ್ತೀಚಿಗೆ ಮುಖ್ಯಮಂತ್ರಿಗಳು ನಮ್ಮ ಸರ್ಕಾರದಲ್ಲಿ ಮಾಡಿರುವ ಜೊತೆಗೆ ಹಾಲಿ ನಡೆಯುತ್ತಿರುವ ಎಲ್ಲಾ ಕಾಮಗಾರಿಗಳಿಗೆ ತಡೆ ಹಿಡಿದ್ದಾರೆ ಇದು ಎಷ್ಟು ಮಾತ್ರ ಸರಿ ಎಂದರು ಇದರಿಂದ ಜನರಿಗೆ ಸಾಕಷ್ಟು ತೊಂದರೆಗಳು ಆಗುತ್ತವೆ ಎಂಬುದು ಅವರಿಗೆ ಅರಿವು ಆಗಲಿಲ್ಲವೇ ಎಂದರು.

 

 

 

 

ಇನ್ನು ನಮ್ಮ ಸರ್ಕಾರ 40% ಸರ್ಕಾರ ಎಂದು ಬಿಂಬಿಸಿದ್ದರು ಆದರೆ ಅದಕ್ಕೆ ಯಾವುದೇ ರೀತಿಯಾದ ಸ್ಪಷ್ಟ ಉದಾಹರಣೆ ಆಗಲಿ ನೀಡದೆ ವೃಥಾ ಸುಳ್ಳು ಆರೋಪ ಮಾಡಿ ನಮ್ಮ ಪಕ್ಷದ ಮೇಲೆ ದ್ವೇಷ ರಾಜಕಾರಣ ಮಾಡಲು ಹೊರಟಿದ್ದಾರೆ ಎಂದರು ಅದಕ್ಕೆ ನಿದರ್ಶನ ಎಂಬಂತೆ ಇತ್ತೀಚಿಗೆ ನಮ್ಮ ಕಾರ್ಯಕರ್ತರು ಪ್ರವೀಣ್ ನೆಟ್ಟರು ವಿಧಿವಶ ಆದ ಮೇಲೆ ಅವರ ಕುಟುಂಬದವರಿಗೆ ಅಂದರೆ ಅವರ ಪತ್ನಿಗೆ ಸರ್ಕಾರಿ ಕೆಲಸ ಕೊಟ್ಟಿದ್ದೆವು ಆದರೆ ಆ ಕೆಲಸವನ್ನು ಹಾಲಿ ಸರ್ಕಾರ ಹಿಂಪಡೆದಿದೆ ಈ ರೀತಿಯಾಗಿ ಒಂದಲ್ಲಾ ಒಂದು ರೀತಿ ದ್ವೇಷ ರಾಜಕಾರಣಕ್ಕೆ ಮುಂದಾಗಿದೆ ಎಂದು ಆರೋಪಿಸಿದರು.

 

 

 

ಮೊದಲು ನೀವೇ ಹೇಳಿರುವ ಉಚಿತ ಗ್ಯಾರಂಟಿಗಳನ್ನು ಜಾರಿಗೆ ತನ್ನಿ ಆಮೇಲೆ ದ್ವೇಷದ ರಾಜಕಾರಣ ಮಾಡಿರಂತೆ ಎಂದರು ಜೊತೆಗೆ ಚುನಾವಣೆ ಸಮಯದಲ್ಲಿ ಎಲ್ಲಾ ಕಡೆ ವೇದಿಕೆಗಳಲ್ಲಿ ಎಲ್ಲರಿಗೂ ಉಚಿತ ಮತ್ತು ಖಚಿತ ಎಂದು ಹೇಳುತ್ತಿದ್ದರು ಆದರೆ ಇವಾಗ ಕೆಲವೊಂದು ನಿಬಂದನೆಗಳನ್ನು ಹೇರಲು ಹೊರಟ್ಟಿದ್ದಾರೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!