ತುಮಕೂರು ನಗರದ ಸ್ನೇಹ ಸಂಗಮ ಸಭಾಂಗಣದಲ್ಲಿ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದಿಸಿರುವ ಹಿನ್ನಲೆ ಮತ್ತು ಪ್ರಸಕ್ತ ಚುನಾವಣೆಯ ಕುರಿತು ಸೊಗಡು ಶಿವಣ್ಣ ಹಿತೈಷಿಗಳು ಹಾಗೂ ಪ್ರಮುಖರು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ವೀರಶೈವ ಬ್ಯಾಂಕ್ ಅಧ್ಯಕ್ಷರು ಶಿವಪ್ರಸಾದ್ ಮಾತನಾಡುತ್ತಾ ಶಿವಣ್ಣರವರು ಸರ್ವ ಜನಾಂಗದ ನಾಯಕರು ಅವರು ಇಂದಿನ ವರೆಗೂ ಯಾವುದೇ ಒಂದು ಪಕ್ಷಕ್ಕೆ ಸೀಮಿತವಾಗಿರದೆ ಸರ್ವರನ್ನು ಸಮಾನರಾನ್ನಾಗಿ ನೋಡುವ ವ್ಯಕ್ತಿ ಅವರ ಕೊಡುಗೆ ತೂನಕೂರಿಗೆ ಅಪಾರವೆಂದು ಹೇಳಿದರು. ಸೊಗಡು ಶಿವಣ್ಣರವರಿಗೆ ನಮ್ಮ ವೀರಶೈವ ಸಮಾಜ ಸಂಪೂರ್ಣ ಬೆಂಬಲ ಮಾಡುತ್ತಿದ್ದೇವೆ ಎಂದು ಈ ಸಂದರ್ಭದಲ್ಲಿ ಹೇಳಿದರು. ನಾವು ಮತ್ತು ನಮ್ಮುದಾಯದ (ವೀರಶೈವ ಲಿಂಗಾಯಿತ) ಈ ಭಾರಿ ಸೊಗಡು ಶಿವಣ್ಣರವರಿಗೆ ಸಂಪೂರ್ಣ ಬೆಂಬಲಕ್ಕೆ ನಿಂತಿದ್ದೇವೆ ಯಾವುದೇ ಕಾರಣಕ್ಕೂ ನಾವು ಹಿಂದಕ್ಕೆ ಸಾರಿಯುವುದಿಲ್ಲ, ಅವರನ್ನು ಈ ಭಾರಿ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸುತ್ತೇವೆಂದು ಹೇಳಿದರು.
ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ಪಕ್ಷೇತರ ಅಭ್ಯರ್ಥಿ ಸೊಗಡು ಶಿವಣ್ಣ ರವರು ಸಭೆಯಲ್ಲಿ ಭಾವುಕರಾದ ಘಟನೆಗೆ ಸಾಕ್ಷಿಯಾಗಿದೆ. ಇನ್ನು ತಮ್ಮ ಜೀವಮಾನದ ಕೊನೆ ಚುನಾವಣೆ ಯಾಗಿದ್ದು ಸ್ವಾಭಿಮಾನದ ಸಂಕೇತವಾಗಿ ಈ ಬಾರಿಯ ಚುನಾವಣೆಗೆ ಪಕ್ಷೇತರಾಗಿ ಸ್ಪರ್ಧಿಸಿದ್ದು ತಮ್ಮ ಸ್ಪರ್ಧೆಗೆ ಈ ಬಾರಿ ತುಮಕೂರು ನಗರದ ಆದ್ಯಂತ ವ್ಯಾಪಕ ಬೆಂಬಲ ವ್ಯರ್ಥವಾಗಿದ್ದು ಜಾತಿ ಮತ ಹೊರತುಪಡಿಸಿ ಎಂದು ಸಮುದಾಯದವರು ಪಕ್ಷೇತರರಾಗಿ ಸ್ಪರ್ಧಿಸುತ್ತಿರುವ ತನಗೆ ಎಲ್ಲಾ ಸಮುದಾಯದ ಬೆಂಬಲ ವ್ಯಕ್ತವಾಗುತ್ತಿರುವುದನ್ನ ಕಂಡು ಭಾವುಕರಾದ ಸೊಗಡು ಶಿವಣ್ಣರವರು ಸಮುದಾಯದ ಸಭೆಯಲ್ಲಿ ಕಣ್ಣೀರು ಹಾಕಿದ್ದಾರೆ.
ಮುಂದುವರೆದು ವೀರಶೈವ ಸಮುದಾಯದ ಮುಖಂಡರು ಈ ಬಾರಿ ಮಾಜಿ ಸಚಿವ ಸೊಗಡು ಶಿವಣ್ಣರವರನ್ನ ಬೆಂಬಲಿಸುವ ಮೂಲಕ ತುಮಕೂರು ನಗರದ ಸರ್ವತೋಮುಖ ಅಭಿವೃದ್ಧಿಗೆ ಸಗಡು ಶಿವಣ್ಣ ಅಗತ್ಯವಾಗಿದ್ದು ಈ ಬಾರಿ ಅವರಿಗೆ ಸಮುದಾಯದ ಪರವಾಗಿ ಎಲ್ಲರೂ ಬೆಂಬಲಿಸಲು ಮನವಿ ಮಾಡಿದ್ದಾರೆ.
ಇನ್ನು ಸಭೆಯಲ್ಲಿ ವೀರಶೈವ ಸಮುದಾಯದ ಮುಖಂಡರಾದ ಶಿವಪ್ರಸಾದ್ ರುದ್ರಪ್ಪ ಆಶಾ ಪ್ರಸನ್ನ ಕುಮಾರ್ ಸೇರಿದಂತೆ ಸುಮಾರು 400ಕ್ಕೂ ಹೆಚ್ಚು ಸಮುದಾಯದ ಮುಖಂಡರು ಹಾಗೂ ಶಿವಣ್ಣರವರ ಹಿತೈಷಿಗಳು ಸಭೆಯಲ್ಲಿ ಪಾಲ್ಗೊಂಡು ಓಮ್ಮತದ ನಿರ್ಣಯ ಕೈಗೊಂಡು ಈ ಬಾರಿಯ ಚುನಾವಣೆಗೆ ಸಚಿವ ಸೊಗಡು ಶಿವಣ್ಣರವರನ್ನ ಬೆಂಬಲಿಸಲು ನಿರ್ಣಯ ಕೈಗೊಂಡರು.
ರುದ್ರಪ್ಪ, ಶಿವಪ್ರಕಾಶ್, ಆಶಾ ಪ್ರಸನ್ನಕುಮಾರ್, ಬಾವಿಕಟ್ಟೆ ಮಂಜಣ್ಣ, ಜೆ ಕೆ ಅನಿಲ್, ಹಾಗೂ ಇತರರು ಭಾಗವಹಿಸಿದ್ದರು.