ತುಮಕೂರು: ಲಂಚ ಕೊಡದ ರೈತರ ವಿದ್ಯುತ್ ಪಂಪ್ ಗೆ ಅಳವಡಿಸಿದ ವಿದ್ಯುತ್ ಸಂಪರ್ಕವನ್ನು ಕಡಿತ ಮಾಡಿರುವ ಘಟನೆ ತುಮಕೂರು ಗ್ರಾಮಾಂತರದ ಬೆಳ್ಳಾವಿ ಬೆಸ್ಕಾಂ ಇಲಾಖೆಯಲ್ಲಿ ಕಂಡು ಬಂದಿದೆ.
ಬೆಳ್ಳಾವಿ ಹೋಬಳಿಯ ಹರಳ ಕಟ್ಟೆ ಗ್ರಾಮದ ಟ್ರಾರ್ನಸ್ ಫಾರ್ಮರ್ ದುರಸ್ತಿಯಾಗಿತ್ತು, ಈ ಟ್ರಾನ್ಸ್ ಫಾರ್ಮರ್ ಗೆ ಸಂಬಂಧಿಸಿದ ಐದು ಜನ ರೈತರು ಬೆಸ್ಕಾಂ ಇಲಾಖೆಯ ಗಮನಕ್ಕೆ ತಂದು ದರಸ್ತಿ ಮಾಡುವಂತೆ ಮನವಿ ಮಾಡಿದ್ದರು,ರೈತರ ಮನವಿ ಮೇರೆಗೆ ಸಿಬ್ಬಂಧಿಗಳು ದುರಸ್ತಿಯಾದ ಟ್ರಾನ್ಸ್ ಫಾರ್ಮರ್ ಪಡೆದು, ಬೇರೆ ಟ್ರಾನ್ಸ್ ಫಾರ್ಮರ್ ಅಳವಡಿಸಿದ್ದಾರೆ. ಆದರೆ ಇದರಲ್ಲಿ ಓರ್ವ ರೈತ ಮಹಿಳೆ ರತ್ನಮ್ಮ ಅವರು ಹಣ ಪಾವತಿ ಮಾಡದ ಕಾರಣ ಅವರ ಕೃಷಿ ಭೂಮಿಯಲ್ಲಿರುವ ವಿದ್ಯುತ್ ಪಂಪ್ ಗೆ ಹಾದು ಹೋಗಿದ್ದ ವಿದ್ಯುತ್ ಸಂಪರ್ಕವನ್ನು ಕಡಿತ ಮಾಡಿದ್ದಾರೆ.
ರೈತ ಮಹಿಳೆ ಮಗ ಲಿಂಗರಾಜು ಬೆಳ್ಳಾವಿಯ ಬೆಸ್ಕಾಂ ಇಲಾಖೆಯ ಶಾಖಾ ಅಧಿಕಾರಿಯಾದ ವೀಣಾ ಅವರ ಗಮನಕ್ಕೆ ತಂದಿದ್ದಾರೆ. ಆದರೆ ಅಧಿಕಾರಿ ವೀಣಾ ಹಾಗೂ ಲೈನ್ ಮೇನ್ ಚಿದಾನಂದ ಅವರು ಹಣ ಕೊಡದಿರುವ ಕಾರಣ ನಿಮ್ಮ ಜಮೀನಿನಲ್ಲಿರುವ ಪಂಪ್ ಸೆಟ್ ಗೆ ವಿದ್ಯುತ್ ಕೊಡಲಾಗುವುದಿಲ್ಲ ಎಂದು ಪ್ರತಿಕ್ರೀಯೆ ನೀಡಿದ್ದಾರೆ.
ಈಗಾಗಲೇ ರೈತರು ಸಂಕಷ್ಟದಲ್ಲಿದ್ದು, ರೈತರಿಗೆ ತೊಂದರೆ ಕೊಡುತ್ತಿರುವ ಅಧಿಕಾರಿಗಳ ವಿರುದ್ಧ ಮೇಲಿನ ಅಧಿಕಾರಿಗಳು ಗಮನ ವಹಿಸಿ ಶಿಸ್ತು ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.