ತುಮಕೂರು ನಗರದ ಖಾಸಗಿ ಹೋಟೆಲ್ ಒಂದರಲ್ಲಿ ಬಿಜೆಪಿ ಪಕ್ಷದಿಂದ ಗೆಲವು ಸಾದಿಸಿದ ತುಮಕೂರು ಗ್ರಾಮಾಂತರ ಮತ್ತು ತುಮಕೂರು ನಗರದ ಅಭ್ಯರ್ಥಿಗಳಾದ ಬಿ ಸುರೇಶ್ ಗೌಡ ಮತ್ತು ಜಿ ಬಿ ಜ್ಯೋತಿ ಗಣೇಶ್ ಇವರುಗಳಿಗೆ ವಿಧಾನಪರಿಷತ್ ಶಾಸಕರಾದ ಚಿದಾನಂದ ಗೌಡ ಮತ್ತು ಬಿಜೆಪಿ ಕಾರ್ಯಕರ್ತರುಗಳಿಂದ ಅಭಿನಂದನಾ ಸಮಾರಂಭವನ್ನು ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್ ಪಿ ಚಿದಾನಂದ ಗೌಡ್ರು ಮಾತನಾಡುತ್ತಾ ಏ ಅಭಿನಂದನಾ ಸಮಾರಂಭ ಇವರುಗಳಿಗೆ ಅಲ್ಲ ಇಲ್ಲಿ ನೆರೆದಿರುವವರಿಗೆ ಮಾಡಬೇಕಾಗಿದೆ ಏಕೆಂದರೆ ನಿಮ್ಮಗಳ ಪರಿಶ್ರಮದಿಂದ ಗೆದ್ದಿರುವುದು ಜೊತೆಗೆ ಈ ಭಾರಿ ಚುನಾವಣೆಯಲ್ಲಿ ಭಾರಿ ಜಿದ್ದಾ ಜಿದ್ದಿ ಇಂದ ಕುದಿತ್ತು ಅದರಲ್ಲಿ ಈ ಇಬ್ಬರು ಕಳಶಗಳಂತೆ ಗೆದ್ದು ಬೀಗಿದ್ದು ನಮ್ಮ ವಿರೋಧ ಪಕ್ಷದವರು ಬಿಟ್ಟು ಮಾಡಿ ತೋರಿಸುವಂತೆ ಮಾಡಿದೆ ಎಂದರು ಜೊತೆಗೆ ಇವರ ಗೆಲುವಿನಿಂದ ನಮ್ಮ ಜಿಲ್ಲೆಯಲ್ಲಿ ಅಸ್ತಿತ್ವ ಉಳಿಸಿಕೊಳ್ಳುವ ಕೆಲಸ ಆಗಿದೆ ಎಂದರು.
ಇನ್ನು ಈ ಇಬ್ಬರು ಮಾಡಿರುವ ಜನಪರ ಕಾರ್ಯಗಳೇ ಇವರನ್ನು ಗೆಲ್ಲುವ ಹಾದಿಯನ್ನು ಮುಟ್ಟಿಸಿದೆ ಇದನ್ನು ನಾವು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ನಂತರ ಶಾಸಕರಾದ ಜ್ಯೋತಿ ಗಣೇಶ್ ಅವರು ಮಾತನಾಡಿ ನಾನು ಈ ಭಾರಿ ಅತ್ಯಂತ ಅಲ್ಪ ಮತಗಳಿಂದ ಗೆದ್ದಿದ್ದೇನೆ ನಮ್ಮ ಈ ಗೆಲವು ನಾವು ಮುಂದಿನ ದಿನಗಳಲ್ಲಿ ಯಾವ ರೀತಿಯಲ್ಲಿ ಜನಪರ ಕೆಲಸ ಮಾಡಬೇಕು ಎಂಬ ಪಾಠ ಕಳಿಸಿದೆ ಅಲ್ಲದೆ ನೀವುಗಳು ಮಾಡಿರುವ ಪ್ರಾಮಾಣಿಕ ಸಹಕಾರದಿಂದ ನಾವು ಗೆದ್ದಿದ್ದೇವೆ ಎಂದರು. ಜೊತೆಗೆ ನನ್ನೊಂದಿಗೆ ಸುರೇಶ್ ಗೌಡ್ರು ಗೆದ್ದಿರುವುದು ನನಗೆ ಮತ್ತಷ್ಟು ಭಲ ಕೊಟ್ಟಿದೆ ಇನ್ಮುಂದೆ ಅವರ ಕಚೇರಿ ನನ್ನ ಕಚೇರಿ ಅನ್ನದೆ ಕೆಲಸ ಕಾರ್ಯ ಗಳನ್ನು ಜನರು ಮುಕ್ತವಾಗಿ ಬಂದು ಮಾಡಿಸಿಕೊಳ್ಳಬಹುದು ಎಂದರು. ಒಟ್ಟಾರೆಯಾಗಿ ಮುಂದಿನ ದಿನಗಳಲ್ಲಿ ನಮ್ಮ ಪಕ್ಷವನ್ನು ಜಿಲ್ಲೆಯಲ್ಲಿ ಸಂಘಟಿಸಿ ಮತ್ತೊಮ್ಮೆ ಎಲ್ಲಾ ಕ್ಷೇತ್ರಗಳಲ್ಲಿ ಭಲ ಪಡಿಸುವ ಕಾರ್ಯ ಮಾಡುತ್ತೇವೆ ಎಂದರು.
ಮುಂದೆ ಸುರೇಶ್ ಗೌಡ್ರು ಮಾತನಾಡುತ್ತಾ ನಮ್ಮ ಪಕ್ಷದ ಈ ಭಾರಿ ಹಿನ್ನಡೆ ಸಾಧಿಸಿ ನಾವು ಸರ್ಕಾರ ರಚನೆ ಮಾಡಲು ಆಗಲಿಲ್ಲ ಹಾಗಂತ ಸುಮ್ಮನೆ ಕುರುವುದಿಲ್ಲ ಪಕ್ಷದ ಸಂಘಟನೆ ಮಾಡಿ ಸೋಲಿನ ಅವಲೋಕನ ಮಾಡಿ ಜಯದ ಕಡೆ ಸಾಗುತ್ತೇವೆ ಎಂದರು.
ಇನ್ನು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ತಿಳಿಸಿದ್ದ ಉಚಿತ ಸುಳ್ಳು ಆಶ್ವಾಸನೆಗಳಿಗೆ ಮನ ಸೋತು ಜನರು ಈ ಭಾರಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡಿದ್ದಾರೆ ಆದರೆ ಮುಂದಿನ ದಿನಗಳಲ್ಲಿ ಅವರಿಗೆ ಅರಿವಾಗುತ್ತದೆ ಏಕೆಂದರೆ ಆ ಗ್ಯಾರಂಟಿಗಳು ಯಾವುದು ಸಪಲ ಆಗುವುದಿಲ್ಲ ಎಂದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಪಕ್ಷದ ಸಂಘಟನೆ ಮಾಡಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂದರು. ಇನ್ನು ನಮ್ಮ ಗೆಲುವು ಸಹ ನಮಗೆ ಒಂದು ಹೊಸ ಪಾಠ ಕಳಿಸಿದೆ ನಾವು ಪಾಠ ಕಲಿತು ಮುಂದೆ ಸಾಗುತ್ತೇವೆ ಎಂದರು ಅಲ್ಲದೆ ನಾವು ನಮಗೆ ಸಹಕರಿಸಿದ ಎಲ್ಲಾ ಮತದಾರರಿಗೆ ನಿಶಪಕ್ಷದಿಂದ ಕೆಲಸ ಮಾಡಿಕೊಡುತ್ತೇವೆ ಎಂಬ ಭರವಸೆ ನೀಡುತ್ತೇನೆ ಎಂದರು ನಾವು ಸುಳ್ಳು ಮತ್ತು ಪುಕ್ಸಟೆ ಗ್ಯಾರಂಟಿ ನೀಡಲ್ಲ ನಾವು ಪ್ರಾಮಾಣಿಕವಾಗಿ ಕೆಲಸ ಮಾಡಿ ಮುಂದಿನ ದಿನಗಳಲ್ಲಿ ನಾವು ಅಭಿವೃದ್ಧಿಪರ ಕೆಲಸ ಮಾಡಿ ನಿಮ್ಮಗಳಿಂದ ಮತ್ತೊಮ್ಮೆ ಅಭಿನಂದನೆಗಳು ಸ್ವೀಕರಿಸುತ್ತೆ ಇದೇ ನಮ್ಮ ಗುರಿ ಎಂದು ಹೇಳಿದರು.
ನಾನು ಕಳೆದ ಚುನಾವಣೆಯಲ್ಲಿ ಸೋತಾಗ ಮನೆಯಲ್ಲಿ ಸುಮ್ಮನೆ ಕೂರದೆ ನಾನು ಪ್ರಾಮಾಣಿಕವಾಗಿ ಜನರೊಂದಿಗೆ ಬೆರೆತು ಅವರುಗಳ ಹೆಗಲಿಗೆ ನಿಂತಿದ್ದ ಕಾರಣವೇ ನನ್ನನ್ನು ನನ್ನ ಜನರು ಗೆಲ್ಲಿಸಿಕೊಂಡು ಬಂದಿದ್ದಾರೆ ಎಂದರು ನಿಮ್ಮ ನಂಬಿಕೆಯನ್ನು ಉಳಿಸಿಕೊಂಡು ಹೋಗುವುದೇ ನನ್ನ ಗುರಿ ಎಂದರು.
ಒಟ್ಟಾರೆಯಾಗಿ ಈ ಅಭಿನಂದನಾ ಸಮಾರಂಭದಲ್ಲಿ ಚಿದಾನಂದ ಗೌಡ್ರ ಅಪಾರ ಬೆಂಬಲಿಗರು, ಸ್ನೇಹಿತರ ಬಳಗ ಹಾಗೂ ಅಪಾರ ಕಾರ್ಯಕರ್ತರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಜ್ಯೋತಿ ಗಣೇಶ್, ಸುರೇಶ್ ಗೌಡ್ರು, ಎಸ್ ಪಿ ಚಿದಾನಂದ್, ಬೆಳ್ಳಿ ಲೋಕೇಶ್, ಚಂದ್ರಪ್ಪ ಹಾಗೂ ಇತರರು ಭಾಗವಹಿಸಿದ್ದರು.