ನಗರದ ಹೊರವಲಯದ ಮೈದಾಳ ರಸ್ತೆಯಲ್ಲಿರುವ ದಿ. ಡಿ. ದೇವರಾಜ ಅರಸು ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ತುಮಕೂರು ಇವರ ಸಂಯುಕ್ತ ಆಶ್ರಯದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನಿಲಯ ಮೇಲ್ವಿಚಾರಕರಿಗೆ ಏರ್ಪಡಿಸಿದ್ದ ಮೂರು ದಿನಗಳ ತರಬೇತಿ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತುಮಕೂರು: ಪ್ರಿಮೆಟ್ರಿಕ್ ಹಾಸ್ಟೆಲ್ ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿ ಕಡೆ ನಿಲಯಗಳ ಮೇಲ್ವಿಚಾರಕರು ಹೆಚ್ಚು ಗಮನ ಹರಿಸಬೇಕೆಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಎಸ್.ಆರ್. ಗಂಗಪ್ಪ ಕರೆ ನೀಡಿದರು.
ಉನ್ನತ ವ್ಯಾಸಂಗ ಮಾಡಿ ನಿಲಯ ಮೇಲ್ವಿಚಾರಕರಾಗಿ ಇತ್ತೀಚಿನ ವ?ಗಳಲ್ಲಿ ಆಯ್ಕೆಯಾಗಿ ಬಂದ ಕೆಲ ಮಂದಿಗೆ ರಜೆ ಚೀಟಿ ಬರೆಯುವಾಗ ಕಾಗುಣಿತಗಳನ್ನು ಸರಿಯಾಗಿ ಬರೆಯಲು ಬರುತ್ತಿಲ್ಲದಂತಹ ಉದಾಹರಣೆಗಳಿವೆ, ಇನ್ನು ವಿದ್ಯಾರ್ಥಿನಿಲಯಗಳ ವಿದ್ಯಾರ್ಥಿಗಳಿಗೆ ಯಾವ ರೀತಿ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡುತ್ತಾರೆ ಎಂಬ ಬಗ್ಗೆ ಯೋಚಿಸಬೇಕಿದೆ, ಇಲಾಖೆಯಲ್ಲಿ ಸಾಕ? ಕೆಲಸಗಳ ಒತ್ತಡವಿದೆ ನಿಜ, ಆದರೆ ತಮ್ಮ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಎ? ಕಾಳಜಿ ವಹಿಸುತ್ತೀರಾ ಅದೇ ರೀತಿ ತಂದೆ ತಾಯಿಯನ್ನು ಬಿಟ್ಟು ಹಾಸ್ಟೆಲಿಗೆ ತಮ್ಮನ್ನೇ ನಂಬಿಕೊಂಡು ಬಂದಿರುವ ವಿದ್ಯಾರ್ಥಿಗಳ ಶಿಕ್ಷಣದ ಕಡೆಯೂ ಅ? ಗಮನಹರಿಸಬೇಕು, ಪ್ರಾಥಮಿಕ ಹಂತದಲ್ಲಿ ಅವರಿಗೆ ಉತ್ತಮ ಶಿಕ್ಷಣ ನೀಡಿ ಜೊತೆಗೆ ಕ್ರೀಡೆ ಸಾಂಸ್ಕೃತಿಕ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡಿದರೆ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಹೊರ ಹೋಮ್ಮುತ್ತಾರೆ ಆಗ ಭಗವಂತನು ತಮ್ಮ ಕೆಲಸ ಮೆಚ್ಚುತ್ತಾನೆ ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ಮಕ್ಕಳ ವಿದ್ಯಾಭ್ಯಾಸದ ಕಡೆ ತಮ್ಮ ಕೆಲಸಗಳ ಒತ್ತಡದ ನಡುವೆಯೂ ಹೆಚ್ಚು ಆದ್ಯತೆ ನೀಡಿ ಎಂದರು.
ಮೂರು ದಿನಗಳ ಈ ತರಬೇತಿ ಶಿಬಿರದಲ್ಲಿ ತಾವು ಪಾಲ್ಗೊಂಡು ವಿವಿಧ ವಿ?ಯಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ಹೆಚ್ಚು ವಿ?ಯ ತಿಳಿದುಕೊಂಡು ಜ್ಞಾನಮಟ್ಟ ಹೆಚ್ಚಿಸಿಕೊಂಡು ಹಾಸ್ಟೆಲ್ಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ಸಂಜೆ ವೇಳೆ ತಾವು ತಿಳಿದ ವಿ?ಯವನ್ನು ಬೋಧನೆ ಮಾಡಿ ಜ್ಞಾನಾರ್ಜನೆ ಹೆಚ್ಚಿಸಿಕೊಳ್ಳಲು ಅನುಕೂಲವಾಗುತ್ತದೆ ಈ ನಿಟ್ಟಿನಲ್ಲಿ ರಾಮನಗರ ಮತ್ತು ತುಮಕೂರು ಜಿಲ್ಲೆ ಶಿಬಿರಾರ್ಥಿಗಳು ಕಾರ್ಯವನ್ಮುಖ ರಾಗಬೇಕೆಂದರು.
ಹಾಸ್ಟೆಲ್ ಗಳಲ್ಲಿ ವಿದ್ಯಾರ್ಥಿಗಳು ತಿಂಡಿ ಊಟ ಮಾಡುವುದ? ಅಲ್ಲ ಶಿಸ್ತು, ಉತ್ತಮ ಸಂಸ್ಕಾರ ರೂಡಿಸಿಕೊಳ್ಳುವುದರ ಜೊತೆಗೆ ವಿದ್ಯೆ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಗಳಲ್ಲಿ ಪಾಲ್ಗೊಂಡು ಉತ್ತಮ ಹೆಸರು ಗಳಿಸಬೇಕು. ಆಗ ಮಾತ್ರ ನಿಲಯ ಪಾಲಕರು, ಅಡುಗೆಯವರು, ತಂದೆ ತಾಯಿ, ಪೋ?ಕರು ಪಟ್ಟ ಕ?ಕ್ಕೆ ಉತ್ತಮ ಪ್ರತಿಫಲ ದೊರೆತಂತಾಗುತ್ತದೆ ಎಂದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ರಾಮನಗರ ಜಿಲ್ಲಾ ಅಧಿಕಾರಿ ಮಹದೇವಸ್ವಾಮಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ನಿಲಯ ಮೇಲ್ವಿಚಾರಕರಿಗೆ ಒತ್ತಡಗಳಿವೆ ನಿಜ ಆದರೆ ನಮ್ಮ ಮಕ್ಕಳ ವಿದ್ಯಾಭ್ಯಾಸದ ಕಡೆ ಹೇಗೆ ಗಮನ ಹರಿಸುತ್ತೇವೆ ಯೋ ಹಾಗೆಯೇ ತಂದೆ ತಾಯಿಯನ್ನು ಬಿಟ್ಟು ಹಾಸ್ಟೆಲ್ಗಳಿಗೆ ಬಂದ ವಿದ್ಯಾರ್ಥಿಗಳ ಕಡೆಗೂ ಅದೇ ರೀತಿ ಗಮನ ಹರಿಸಿ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಹೊರಹೊಮ್ಮಲು ಶ್ರಮಿಸಬೇಕೆಂದರು.
ಬಿಸಿಎಂ ಇಲಾಖೆ ಅಧಿಕಾರಿಗಳಾದ ಗೀತಾ, ಗುರುಮೂರ್ತಿ, ಭಾನುಮತಿ, ಶಶಿಕಲಾ, ವಿನಯ್, ಸುನಿಲ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು. ಜಯರಾಮ್ ಪ್ರಾರ್ಥಿಸಿದರು, ಅನಂತರಾಜು ಸ್ವಾಗತಿಸಿದರು, ವ್ಯವಸ್ಥಾಪಕ ರವಿಕುಮಾರ್ ಕಾರ್ಯಕ್ರಮ ನಿರೂಪಿಸಿದರು.