ಬಹು ವರ್ಷಗಳ ನಂತರ ಭೇಟಿಯಾದ ಸ್ನೇಹಿತರು ಸ್ನೇಹ ಸಮ್ಮಿಲನದಲ್ಲಿಯೂ ಸಾರ್ಥಕತೆ

ಸರಿಸುಮಾರು 2003-2005 ಮತ್ತು 2005 ರಿಂದ 2009 ರವರೆಗೆ ಪದವಿ ಪೂರ್ವ ಮತ್ತು ಪದವಿಯನ್ನು ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ಕಾಲೇಜಿನ ಕೊಠಡಿ ಮತ್ತು ಕಾಲೇಜಿನ ಇಕ್ಕೆಲೆಗಳಲ್ಲಿ ಭೇಟಿಯಾಗಿ ಪಾಠ, ಆಟ, ತುಂಟಾಟ, ಕೊಂಚ ತರ್ಲೆ-ತಮಾಷೆಗಳೊಂದಿಗೆ ವ್ಯಾಸಂಗ ಮಾಡುತ್ತಿದ್ದವರು, ವ್ಯಾಸಂಗದ ನಂತರ ತಮ್ಮ ತಮ್ಮ ಜೀವನದಲ್ಲಿ ವ್ಯಾಪಾರ, ಉದ್ಯೋಗ, ಕುಟುಂಬ ಹೀಗೆ ನಾನಾ ರೀತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ತಮ್ಮ ತಮ್ಮ ಆಪ್ತರು ಮಾತ್ರ ಪರಸ್ಪರ ಭೇಟಿಯಾಗುತ್ತಿದ್ದರು, ಆದರೆ ಎಲ್ಲರೂ ಒಂದೇ ಕಡೆ ಸೇರುವ ಸಂದರ್ಭ ಬಂದು ಒದಗಲಿಲ್ಲ.

 

 

 

 

ಈ ಒಂದು ಮಹಾವೇದಿಕೆಯನ್ನು ಸೇರಿಸಬೇಕೆಂಬ ಹೆಬ್ಬಯಕೆಯಿಂದ ಸ್ನೇಹಿತೆ ಅರ್ಚನರವರು ತಮ್ಮ ಬಹು ದಿನಗಳಿಂದ ಕೆಲ ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಿದ್ದರು, ಆದರೆ ಅದು ನಿಜವಾಗಿದ್ದು 14-05-2023ರಂದು ಎಲ್ಲಾ ಮಿತ್ರರು ತಾವು ವ್ಯಾಸಂಗ ಮಾಡಿದ ಊರು ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನಲ್ಲಿ………..

 

 

 

 

ಇನ್ನು ಸ್ಥಳ ಆಯ್ಕೆಯಲ್ಲಿ ಸ್ನೇಹಿತರುಗಳು ಒಳ್ಳೆಯ ಸ್ಥಳವನ್ನು ಆಯ್ಕೆ ಮಾಡಿದರು ಅದುವೆ ಶ್ರೀ ಸಾಯಿ ದ್ವಾರಕಾಮಯಿ ವೃದ್ಧಾಶ್ರಮ ಇಲ್ಲಿನ ವೃದ್ಧರನ್ನು ನೋಡಿ, ಅವರ ಕಷ್ಟ ನೋವುಗಳನ್ನು ಆಲಿಸುವುದರೊಂದಿಗೆ ನಮ್ಮ ವಿದ್ಯಾರ್ಥಿಗಳ ಜೀವನದ ಸಿಹಿ ನೆನಪುಗಳನ್ನು (ಕೊಂಚ ಕಹಿ ನೆನಪುಗಳು ಸಹ) ಮೆಲಕು ಹಾಕುವ ಒಂದೊಳ್ಳೆ ಅವಕಾಶವನ್ನು ಕಲ್ಪಿಸಿದ ಸ್ಥಳೀಯರಾದ ಕೆ.ಎಸ್.ಪವನ್‌ ಕುಮಾರ್‌ (ಆಡಿಟರ್)‌, ಜಿ.ಆರ್.ಪ್ರಜ್ವನ್‌ ಕುಮಾರ್‌ (ಉದ್ಯಮಿ) ಇವರುಗಳಿಗೆ ಅಭಿನಂದನೆಗಳು……..

 

 

 

 

 

ಮುಂದುವರೆದು ಬಿರು ಬೇಸಿಗೆಯಲ್ಲಿ ತಂಪಾದ ಬೇವಿನ ಮರದ ಕೆಳಗೆ ಸೇರಿದ ನಾವೆಲ್ಲಾ ಸ್ನೇಹಿತರು ನಮ್ಮ 18 ವರ್ಷಗಳ ಅವಧಿಯಲ್ಲಿ ಏನೆಲ್ಲಾ ಮಾಡಿದೆವು, ಪ್ರಸ್ತುತ ಜೀವನ ಹೇಗೆ ನಡೆಸುತ್ತಿದ್ದೇವೆ ಇತ್ಯಾದಿಯಾಗಿ ತರ್ಲೆ ತಮಾಷೆಗಳೊಂದಿಗೆ ಸ್ನೇಹ ಸಮ್ಮಿಲನವನ್ನು ನಡೆಸಲು ಮುಂದಾದೆವು…

 

 

 

 

 

ಸ್ನೇಹ ಸಂಗಮದ ವಿಶೇಷತೆಯಾಗಿ ನಾವೇ ಖುದ್ದು ತಂಪಾದ ಪಾನೀಯ ತಯಾರಿಸಿದ್ದು, ಕೇಕ್‌ ಕಟ್‌ ಮಾಡಿ, ಪರಸ್ಪರ ಊಟ ಬಡಿಸಿ ತಿಂದಿದ್ದು, ತದ ನಂತರ ನಮ್ಮ ವ್ಯಾಸಂಗದ ದಿನಗಳನ್ನು ನೆನಪು ಮಾಡಿಕೊಂಡಿದ್ದು, ಹೀಗೆ ಒಂದಾ………. ಎರಡಾ ಆ ಸುಮಧುರ ಕ್ಷಣವನ್ನು ಸವಿದು ಮತ್ತೊಮ್ಮೆ ಈ ರೀತಿಯ ಸ್ನೇಹ ಸಮ್ಮಿಲನ ಮಾಡೋಣ ಎಂದು ಕೆಲವರು ತಮ್ಮ ಹೆಬ್ಬಯಕೆ – ಆಸೆಯನ್ನು ಹೊರಹಾಕಿದ್ದು ಎಲ್ಲರಿಗೂ ಖುಷಿ ಕೊಟ್ಟಿದೆ. ಆದರೂ ಕೆಲವರು ಕೆಲ ತರ್ಲೆ ತಮಾಷೆಗಳಿಂದ ಬೇಸರಗೊಂಡಿದ್ದರೂ, ವಯಸ್ಸಾದರೂ ಇನ್ನೂ ನಾವುಗಳು ಪ್ರಾಯದ ಹುಡುಗರ ರೀತಿ (ಕಾಲೇಜಿನ ವಿದ್ಯಾರ್ಥಿಗಳ) ರೀತಿ ವರ್ತಿಸುತ್ತಿದ್ದೇವೆಲ್ಲಾ ಎಂತ ಒಳಗೊಳೊಗೆ ಖುಷಿ, ಸಂತಸ ಪಟ್ಟಿದ್ದಾರೆ.

 

 

ನಮ್ಮ ಸ್ನೇಹ ಸಮ್ಮಿಲನದ ಫಲವಾಗಿ ಮತ್ತು ನೆನಪಿಗಾಗಿ ನಾವು ಒಟ್ಟಾರೆಯಾಗಿ ಸೇರಿದ್ದ ಜಾಗ ಅಂದರೆ ಶ್ರೀ ಸಾಯಿದ್ವಾರಕಾಮಯಿ ವೃದ್ಧಾಶ್ರಮಕ್ಕೆ ನಮ್ಮೊದೊಂದು ಕೊಡುಗೆ, ಚಾರಿಟಿ ಇರಲೆಂದು ಚಿಕ್ಕ ಧೇಣಿಗಯನ್ನು ಎಲ್ಲಾ ಸ್ನೇಹಿತರು ನೀಡಿ ಸಾರ್ಥಕತೆ ಅನ್ನುವುದಕ್ಕಿಂತ ಸಹಾಯ ಮಾಡಿದೆವು ಎನ್ನಬಹುದು.

 

 

 

 

ಒಟ್ಟಾರೆಯಾಗಿ ನಮ್ಮೀ ಸ್ನೇಹ ಸಮ್ಮಿಲನಕ್ಕೆ ಅಡಿಪಾಯ ಹಾಕಿದ ಅರ್ಚನ, ಪ್ರಜ್ವನ್‌, ಪವನ್‌, ಇತ್ಯಾದಿಯಾಗಿ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳನ್ನು ಎಲ್ಲಾ ಸ್ನೇಹಿತರ ಪರವಾಗಿ ಈ ರೀತಿಯಾಗಿ ತಮ್ಮೊಂದಿಗೆ ಹಂಚಿಕೊಂಡಿದ್ದೇನೆ…..

 

 

ತಮ್ಮ ಸ್ನೇಹಿತ

ಈ.ವಿ.ವಿನಯ್‌ ಬಾಬು

ಸಹ ಸಂಪಾದಕರು, ವಿದ್ಯಾರಂಜಕ ಪತ್ರಿಕೆ

ಮಾಲೀಕರು, ಶ್ರೀ ವಿದ್ಯಾಲಕ್ಷ್ಮೀ ಎಂಟರ್‌ ಪ್ರೈಸಸ್‌

ತುಮಕೂರು.

Leave a Reply

Your email address will not be published. Required fields are marked *

error: Content is protected !!