ಬೀಕರ ಗಾಳಿ ಮಳೆಗೆ 50 ಲಕ್ಷ ಮೌಲ್ಯದ ಮೀನಿನ ಶೆಡ್ ಸಂಪೂರ್ಣ ಧ್ವಂಸ
ಹಿರಿಯೂರು – ಭಾನುವಾರ ತಾಲೂಕಿನಲ್ಲಿ ಸುರಿದ ಬೀಕರ ಗಾಳಿ ಮಳೆಗೆ ತಾಲೂಕಿನಾದ್ಯಂತ ಸಾಕಷ್ಟು ತೋಟಗಳು ಹಾನಿಯಾಗಿದ್ದು ಭೀಕರ ಗಾಳಿ ಮಳೆಗೆ ರೈತರು ಕಂಗಾಲಾಗಿದ್ದಾರೆ.
ಇದರ ನಡುವೆ ಹಿರಿಯೂರು ತಾಲೂಕಿನ ಮಸ್ಕಲ್ ಗ್ರಾಮದಲ್ಲಿ ರೈತ ಮಹಿಳೆ ವೆಂಕಟ ಲಕ್ಷ್ಮಮ್ಮ ಎಂಬುವವರು ಸುಮಾರು ಐವತ್ತು ಲಕ್ಷ ವೆಚ್ಚದಲ್ಲಿ ನಿರ್ಮಿಸಿದ್ದ ನೂತನ ಮೀನು ಸಾಕಾಣಿಕ ಕೇಂದ್ರ ಹಾಗೂ ಶೆಡ್ ಸಂಪೂರ್ಣ ಹಾನಿಗೊಳಗಾಗಿದೆ.
ಇನ್ನು ಗಾಳಿಯ ರಭಸಕ್ಕೆ ಸಂಪೂರ್ಣ ಶೆಡ್ ಹಾಳಾಗಿದ್ದು ಆರ್.ಎ.ಎಸ್ ತಂತ್ರಜ್ಞಾನವನ್ನು ಬಳಸಿ ಶೇಡ್ ನ ಮೇಲ್ಚಾವಣಿ ನಿರ್ಮಿಸಲಾಗಿತ್ತು ಇನ್ನು ಗಾಳಿ ರಭಸಕ್ಕೆ ಶೆಡ್ ಸಂಪೂರ್ಣ ನಾಶವಾಗಿದ್ದು ಅಂದಾಜು ಸುಮಾರು 50 ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತು ಶೆಡ್ ಹಾಳಾಗಿದ್ದು ರೈತ ಮಹಿಳೆ ವೆಂಕಟಮ್ಮ ಸಂಪೂರ್ಣ ಕಂಗಾಲಾಗಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿರುವ ರೈತ ಮಹಿಳೆ ವೆಂಕಟ ಲಕ್ಷ್ಮಮ್ಮ ರವರು ಸಾಕಷ್ಟು ಸಾಲ ಮಾಡಿ ಇತ್ತೀಚಿಗೆ ಮೀನು ಸಾಕಲು ಶೆಡ್ ನಿರ್ಮಿಸಿದ್ದೆವು ಆದರೆ ಮಳೆಗೆ ಶೆಡ್ ಸಂಪೂರ್ಣ ಹಾಳಾಗಿದ್ದು ಇದರಿಂದ ತಾವು ಸಂಕಷ್ಟಕ್ಕೆ ಸಿಲುಕಿದ್ದು ಸರ್ಕಾರ ಇನ್ನಾದರೂ ಗಮನಹರಿಸಿ ಮೀನುಗಾರಿಕೆ ಇಲಾಖೆ ಹಾಗೂ ರಾಜ್ಯ ಸರ್ಕಾರದಿಂದ ಪ್ರಕೃತಿ ವಿಕೋಪ ನಿಧಿ ಅಡಿ ಪರಿಹಾರವನ್ನು ಕಲ್ಪಿಸಿ ಕೊಡಬೇಕು ಎಂದು ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.