ಇಂದು ತುಮಕೂರು ನಗರದ ಖಾಸಗಿ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿಯನ್ನು ಪ್ರಸಕ್ತ ಚುನಾವಣಾ ವಿದ್ಯಾಮಾನಗಳ ಕುರಿತು ತುಮಕೂರು ನಗರದ ಪಕ್ಷೇತರ ಅಭ್ಯರ್ಥಿ ಸೊಗಡು ಶಿವಣ್ಣರವರು ನಡೆಸಿ ಮಾತನಾಡಿದರು.
ತುಮಕೂರು ನಗರದ ಬಿ ಹೆಚ್ ರಸ್ತೆಯಲ್ಲಿರುವ ಸಿ ಎನ್ ವಿ ಚೇಂಬರ್ ನಲ್ಲಿ ಬೇನಾಮಿ ಹೆಸರಿನಲ್ಲಿ ರೂಮ್ ಬುಕ್ ಮಾಡಿರುವ ಕುಂದಾರನಹಳ್ಳಿ ರಮೇಶ್ ಹಾಗೂ ಇತರರು ತಂಗಿದ್ದ ರೂಮ್ ಗೆ ಹಲವಾರು ಜನ ನುಗ್ಗಿ ದರೋಡೆ ಮಾಡಲು ಬಂದಿದ್ದಾರೆ ಎಂದು ಮಧ್ಯ ರಾತ್ರಿಯಲ್ಲಿ ಕೇಸ್ ಹಾಕಿಸಿರುವುದು ಎಷ್ಟು ಮಾತ್ರ ಸಮಂಜಸ ಅದು ಸಹ ಪೊಲೀಸ್ ಇಲಾಖೆಗೆ ಒತ್ತಡ ಹಾಕಿ ಅಮಾಯಕ ಹುಡುಗರ ಮೇಲೆ ಈ ರೀತಿಯಾದ ದಬ್ಬಾಳಿಕೆ ಮಾಡುತ್ತಿದ್ದಾರೆ ಅಲ್ಲದೆ ಆ ಸ್ಥಳದಲ್ಲಿದ್ದ ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿಶಂಕರ್ ಅವರು ದುಡ್ಡು ತಗೊಂಡು ಪರಾರಿ ಆಗಿದ್ದರೆಂದು ಅಲ್ಲಿದ್ದ ಕೆಲವರು ಮಾತನಾಡಿಕೊಳ್ಳುತ್ತಿದ್ದರು ಎಂದು ಸೊಗಡು ಶಿವಣ್ಣ ಹೇಳಿದ್ದಾರೆ.
ಇನ್ನು ಈ ಸಿ ಎನ್ ವಿ ಚೇಂಬರ್ ನಲ್ಲಿ ಹಲವಾರು ಕೋಟಿ ಕೊಳ್ಳೆ ಹೊಡೆದಿರುವ ದುಡ್ಡು ಇತ್ತು ಎಂದು ಹೇಳಲಾಗಿತ್ತು ಆದರೆ ಕೇವಲ 23000 ದರೋಡೆ ಮಾಡಲು ಬಂದಿದ್ದಾರೆ ಎಂದು ಸುಳ್ಳು ಆರೋಪ ಮಾಡಿ ಕೇಸ್ ಅನ್ನು ರಾತ್ರೋ ರಾತ್ರಿ ಹಾಕಿಸುತ್ತಾರೆ ಎಂದರೆ ಏನು ಅರ್ಥ ಎಂದರು.
ಮುಂದುವರೆದು ಮಾತನಾಡುತ್ತಾ ಪೊಲೀಸ್ ಇಲಾಖೆಯವರು ಕೇಸ್ ಏನೋ ದಾಖಲಿಸಿದ್ದಾರೆ ಆದರೆ ಸಂಸದರಿಗೆ ಏನು ಪೊಲೀಸ್ ಠಾಣೆ ಹತ್ತಿರ ಕೆಲಸ ಬೆಳ್ಳಾಬೆಳ್ಳಗೆ ಅವರು ಅಲ್ಲಿಗೆ ಹೋಗಿದ್ದರು ಅವರೊಂದಿಗೆ ಜಹಾಂಗೀರ್ ರವಿ ಸಹ ಏನುಕ್ಕೆ ಹೋಗಿದ್ದರು ಇವರು ಏನು ಎಲ್ಲಾ ಇಲಾಖೆಗಳನ್ನು ಕೊಂದುಕೊಂಡಿದ್ದಾರೆಯೇ ಎಂದು ಪ್ರಶ್ನೆ ಮಾಡಿದರು. ಇವರು ಅಮಾಯಕರ ಮೇಲೆ ಈ ರೀತಿಯಾದ ಬಲ ಪ್ರಯೋಗ ಮಾಡುತ್ತಿರುವುದು ಖಂಡನೀಯ ಎಂದರು.
ಇವರು ಜನರ ದುಡ್ಡು ದರೋಡೆ ಮಾಡಿದ್ದಾರೆ ಆದರೆ ಪಾಪ ಕೆಲಸ ಅಮಾಯಕ ಹುಡುಗರ ಮೇಲೆ ದರೋಡೆ ಕೇಸ್ ಮಾಡುತ್ತಾರೆ ಅಂದರೆ ಏನರ್ಥ, ಅಪ್ಪ ಮಕ್ಕಳು ಸ್ಮಾರ್ಟ್ ಸಿಟಿ ಹಣವನ್ನು ದರೋಡೆ ಮಾಡಿದ್ದಾರೆ ಅದಕ್ಕೆ ಲೆಕ್ಕ ಕೇಳುದ್ರೆ ಹೇಳಲ್ಲ ಸಿ ಎನ್ ವಿ ಚೇಂಬರ್ ನಲ್ಲಿ ಕೋಟಿಗಟ್ಟಲೆ ಹಣವಿದ್ದು ಅದನ್ನು ಹೆಬ್ಬಾಕ ರವಿ ತಗೊಂಡು ಪರಾರಿಯಾಗಿದ್ದಾರೆ ಎಂದರು.
ಸಿ ಎನ್ ವಿ ಚೇಂಬರ್ ನಲ್ಲಿ ದುಡ್ಡು ಇರುವುದಾಗಿ ದರೋಡೆ ಕೇಸ್ ಹಾಕಿಸಿಕೊಂಡಿರುವ ಹುಡುಗರು ಪೊಲೀಸ್ ಇಲಾಖೆಗೆ ವಿಷಯ ಮುಟ್ಟಿಸಿದ್ದರು ಆದರೆ ಪೊಲೀಸ್ ಇಲಾಖೆ ದಿಕ್ಕು ತಪ್ಪಿಸುವ ಕೆಲಸ ಮಾಡಿ ತಡವಾಗಿ ಅವರನ್ನು ಸ್ಥಳದ ಬಳಿ ಬರಲು ಹೇಳಿ ದುಡ್ಡು ಬೇರೆ ಕಡೆ ಸಾಗಕಿ ಕೊನೆಗೆ ಆ ಹುಡುಗರ ಮೇಲೆ ಸುಳ್ಳು ಹಲ್ಲೆ ಮತ್ತು ದರೋಡೆ ಕೇಸ್ ಅನ್ನು ದಾಖಲು ಮಾಡಿದ್ದಾರೆ ಎಂದರು.
ಯಾವುದು ಏನೇ ಆಗಲಿ ಈ ಭಾರಿ ಚುನಾವಣೆಯಲ್ಲಿ ಸತ್ಯ ಮತ್ತು ಧರ್ಮಕ್ಕೆ ಜಯ ಸಿಗುತ್ತದೆ ಅದನ್ನು ಈ ಭಾಗದ ಜನರು ಮಾಡುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದರು.
ಈ ಸಂದರ್ಭದಲ್ಲಿ ಪಕ್ಷೇತರ ಅಭ್ಯರ್ಥಿ ಸೊಗಡು ಶಿವಣ್ಣ, ಧನಿಯಾ ಕುಮಾರ್, ಜೆ ಕೆ ಅನಿಲ್, ಜಯರಾಮ್, ಗೋಕುಲ್ ಮಂಜುನಾಥ್, ಎಸ್ ಆರ್ ಶ್ರೀಧರ ಮೂರ್ತಿ, ಕೆ ಪಿ ಮಹೇಶ್, ಸಂಜಯ್ ನಾಯ್ಕ ಹಾಗೂ ಇತರರು ಭಾಗವಹಿಸಿದ್ದರು.