ಪ್ರಜೆಗಳ ಹಿತದೃಷ್ಟಿಯಿಂದ ಬಿಡುಗಡೆ ಮಾಡಿರುವುದೇ ಬಿಜೆಪಿಯ ಪ್ರಜಾ ಪ್ರಣಾಳಿಕೆ: ನಳಿನ್ ಕುಮಾರ್ ಕಟೀಲ್

ತುಮಕೂರು ನಗರದ ಬಿಜೆಪಿ ಪಕ್ಷದ ಕಚೇರಿಯಲ್ಲಿ ಬಿಜೆಪಿ ಪಕ್ಷದ ಪ್ರಜಾ ಪ್ರಾಣಾಳಿಕೆ ಬಿಡುಗಡೆ ಆಗಿರುವ ಬಗ್ಗೆ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ರಾಜ್ಯಧ್ಯಕ್ಷ ನಳಿನ್ ಕುಮಾರ್ ಕಟೀಲ್.

 

 

 

ಜನ ಕಲ್ಯಾಣ ಯೋಜನೆಗಳನ್ನು ಮೋದಿ ಸರ್ಕಾರ ಮಾಡಿದೆ ಅದನ್ನು ಬೊಮ್ಮಾಯಿ ಸರ್ಕಾರ ಅನುಷ್ಠಾನಗೊಳಿಸಿದೆ ನಮ್ಮ ಡಬಲ್ ಇಂಜಿನ್ ಸರ್ಕಾರ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಕಡಿಮೆ ಅವಧಿಯಲ್ಲಿ ಮಾಡಿರುವುದೇ ನಮಗೆ ಹೆಮ್ಮೆಯ ವಿಚಾರ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು. ಏಕೆಂದರೆ ನಾವು ಅಧಿಕಾರ ಮಾಡಿದ್ದು ಕೇವಲ ಮೂರು ವರ್ಷಗಳ ಕಾಲ ಅದರಲ್ಲೂ ಕೋವಿಡ್ ಹಾಗೂ ಇನ್ನು ಕ್ಲಿಷ್ಟ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ್ದೇವೆ ಹಾಗಾಗಿ ನಾವು ಕಮ್ಮಿ ಸಮಯದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿರುವುದಾಗಿ ಹೇಳಿದರು.

 

 

 

 

 

ನಾವು ಜನ ಸಾಮಾನ್ಯರ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ ನಾವು ಅನ್ನ ಅಕ್ಷರ ಆದಾಯ ಆಶ್ರಯ ಸೇರಿದಂತೆ ಹಲವಾರು ಸಾಮಾಜಿಕ ಬದ್ಧತೆಯ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದೇವೆ ಅದರೊಂದಿಗೆ ಹಬ್ಬದ ಸಮಯದಲ್ಲಿ ಉಚಿತ ಗ್ಯಾಸ್ ಸಿಲಿಂಡರ್ ನೀಡುವ ಕಾರ್ಯವನ್ನು ಮಾಡಲಿದ್ದೇವೆ ಎಂದರು.

 

 

 

 

ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ಅದರಲ್ಲೂ ಪಂಚಾಯತ್ ವಾರು ಹಕ್ಕು ಪತ್ರ ವಿತತರಣೆಯನ್ನು ವಸತಿ ರಹಿತರಿಗೆ ನೀಡಲು ಮುಂದಾಗಿದ್ದೇವೆ ಎಂದರು ಅಲ್ಲದೆ ವಿದ್ಯುತ್ ಚಾಲಿತ ವಾಹನಗಳ ಸ್ಟಾರ್ಟ್ ಅಪ್ ಗಳಿಗೆ ಹೆಚ್ಚಿನ ಆದ್ಯತೆ ನೀಡುವ ಗುರಿ ಹೊಂದಿದ್ದೇವೆ ಎಂದು ಹೇಳಿದರು.

 

 

 

 

 

ಕರ್ನಾಟಕ ವಿಕಾಸವೇ ಭಾರತದ ವಿಕಾಸ ಎಂಬ ಶೀರ್ಷಿಕೆಯಡಿ ಪ್ರಣಾಳಿಕೆ ಬಿಡುಗಡೆಗೋಳಿಸಿದ್ದೇವೆ ಎಂದರು ಕಾಂಗ್ರೆಸ್ ಬಹಳಷ್ಟು ಚಂಚಲತೆಗೆ ಒಳಗಾಗಿದೆ ಅವರಿಗೆ ಅವರ ಗ್ಯಾರಂಟಿ ಸಾಕಾರ ಆಗುವುದೇ ಅವರಿಗೆ ಗ್ಯಾರಂಟಿ ಇಲ್ಲ ಎಂದರು ಅವರು ಯಾವ ನೈತಿಕಯ ಮತ ಕೇಳಲು ಹೊರಟಿದಾರೋ ಗೊತ್ತಿಲ ಎಂದರು.

 

 

 

 

 

ಮೋದಿ ಅವರನ್ನು ನರಹಂತಕ ಎಂದು ಹೇಳಿ ತಮ್ಮ ಅಧಿಕಾರ ಕಳೆದುಕೊಂಡರು ಪ್ರಧಾನಿಗಳ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಮೊದಲು ನಿಲ್ಲಿಸಿ ಕಾಂಗ್ರೆಸ್ ನಾಯಕರು ಭಯ ಭೀತಿಯಲ್ಲಿ ಏಕೆ ಎಂದರೆ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿಲ್ಲಾ ಹಾಗಾಗಿ ಅವರು ಈ ರೀತಿಯಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.

 

 

 

ಮಿಸಾಲಾತಿ ವಿಚಾರ ಕೋರ್ಟಿನಲ್ಲಿದೆ ಯಾವುದೇ ರೀತಿಯಾದ ಸ್ಟೇ ಕೊಟ್ಟಿಲ್ಲ ಆದರೆ ಅದರ ವಿಚಾರಣೆ ನಡೆಯುತ್ತಿದೆ ಆ ಕುರಿತು ನಾನು ಹೆಚ್ಚು ಮಾತನಾಡುವುದಿಲ್ಲ ಎಂದು ಪತ್ರಕರ್ತರು ಮಾಡಿದ ಪ್ರಶ್ನೆಗೆ ಉತ್ತರಿಸಿದರು.

 

 

ಪತ್ರಿಕಾಗೋಷ್ಟಿಯಲ್ಲಿ ರಾಜ್ಯಧ್ಯಕ್ಷ ನಳಿನ್ ಕುಮಾರ್ ಕಟೀಲ್ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿ ಶಾಸಕ ಅಭ್ಯರ್ಥಿ ಜ್ಯೋತಿ ಗಣೇಶ್ ವಿಧಾನಸಭಾ ಸದಸ್ಯ ಚಿದಾನಂದ ಗೌಡ ಸಂಸದ ಬಸವರಾಜು ಎನ್ ಎಸ್ ಜಯಕುಮಾರ್ ಹಾಗೂ ಇತರರು ಭಾಗವಹಿಸಿದ್ದರು

Leave a Reply

Your email address will not be published. Required fields are marked *

error: Content is protected !!