ಇಕ್ಬಾಲ್ ಬೆನ್ನಿಗೆ ನಿಂತ ಅಟ್ಟಿಕಾ ಬಾಬು!!!!!
ಇತ್ತೀಚಿಗೆ ತುಮಕೂರು ನಗರದ ಜನತೆಯನ್ನು ಗೊಂದಲಕ್ಕೆ ಈಡು ಮಾಡಿದ್ದ ಅಟ್ಟಿಕಾ ಬಾಬು ನಿಲುವು ಇದೀಗ ಹೊರ ಬಿದ್ದಿದೆ.
ಎರಡು ದಿನಗಳ ಹಿಂದೆಯಷ್ಟೇ ತನ್ನ ನಿಲುವು ತಿಳಿಸುವುದಾಗಿ ತಮ್ಮ ಅಪಾರ ಅಭಿಮಾನಿಗಳು ಹಾಗೂ ಕಾರ್ಯಕರ್ತರೊಂದಿಗೆ ಚರ್ಚೆ ಮಾಡಿದ್ದ ಅಟ್ಟಿಕಾ ಬಾಬು ತಮ್ಮ ನಿಲುವನ್ನು ಹೊರ ಹಾಕಿದ್ದಾರೆ.
ಅದುವೇ ತಾವು ಈ ಹಿಂದೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಕೋರಿದ್ದರು ಆದರೆ ಕೊನೆ ಗಳಿಗೆಯಲ್ಲಿ ಕೈ ತಪ್ಪಿತ್ತು ಆದ ಪ್ರಯುಕ್ತ ತಾನು ಇಕ್ಬಾಲ್ ಅಹಮದ್ ಅವರ ಬೆಂಬಲಕ್ಕೆ ನಿಂತು ಸಕಲ ರೀತಿಯಲ್ಲಿ ಸಹಕರಿಸುವುದಾಗಿ ಹೇಳಿಕೊಂಡಿದ್ದಾರೆ ಹಾಗೂ ಇದೆ ವಿಚಾರ ಶೀಘ್ರದಲ್ಲಿಯೇ ಪತ್ರಿಕಾಗೋಷ್ಠಿ ನಡೆಸಿ ಬಹಿರಂಗಪಡಿಸುವುದಾಗಿ ಹೇಳಿದ್ದಾರೆ