ಇತ್ತೀಚಿಗೆ ನಮ್ಮ ವಿದ್ಯಾರಂಜಕ ಸುದ್ದಿಯಲ್ಲಿ ಬರೆದಿದ್ದ ತುಮಕೂರು ರಾಜಕೀಯ ಚಿತ್ರಣ ಅಲ್ಲೋಲ ಕಲ್ಲೋಲ ಮಾಡಿದ ವ್ಯಕ್ತಿ ಬರಲಿದ್ದಾರೆ ಎಂಬ ಸುದ್ದಿ ಇದೀಗ ನಿಜವಾಗಿದೆ…
ಹೌದು ಅದೇ ವ್ಯಕ್ತಿ ಅಟ್ಟಿಕಾ ಬಾಬು ಮತ್ತೊಮ್ಮೆ ತುಮಕೂರಿಗೆ ಇಂದು ಸಂಜೆ ಆಗಮಿಸಿದ್ದು ತನ್ನ ಅಭಿಮಾನಿಗಳು ಮತ್ತು ಅಪಾರ ಬೆಂಬಲಿಗರ ಸಭೆಯನ್ನು ಮಾಡುತ್ತಿರುವಾಗಲೇ ತುಮಕೂರಿನ ಸಂಸದ ಜಿ ಎಸ್ ಬಸವರಾಜು ಅವರು ಸಹ ಅವರನ್ನು ಸಂಪರ್ಕ ಮಾಡಿ ಹಲವಾರು ವಿಷಯಗಳನ್ನು ಚರ್ಚಿಸಿದ್ದಾರೆ.
ನಂತರ ಅಟ್ಟಿಕಾ ಬಾಬು ಅವರು ಸಂಸದರಿಗೆ ಇನ್ನೊಂದು ದಿನದಲ್ಲಿ ತನ್ನ ನಿರ್ಧಾರ ತಿಳಿಸುವುದಾಗಿಯೂ ಸಹ ಹೇಳಿದ್ದಾರೆ ಎನ್ನಲಾಗಿದೆ ಜೊತೆಗೆ ಈ ಸಭೆಯಲ್ಲಿ ಬಿಜೆಪಿ ಕಾರ್ಯಕರ್ತರು ಸೇರಿದಂತೆ ಪಕ್ಷೇತರ ಅಭ್ಯರ್ಥಿಗಳಾದ ಸೊಗಡು ಶಿವಣ್ಣ ಮತ್ತು ನರಸೇಗೌಡರ ಕಾರ್ಯಕರ್ತರು ಭಾಗವಹಿಸಿದ್ದು ಎಲ್ಲರ ಅಭಿಪ್ರಾಯಗಳನ್ನು ಆಲಿಸಿರುವ ಅಟ್ಟಿಕಾ ಬಾಬು ನಾಳೆ ಅವರ ನಿರ್ಧಾರವನ್ನು. ಬೃಹತ್ ಪತ್ರಿಕಾಗೋಷ್ಠಿ ಕರೆದು ತಿಳಿಸಲಿದ್ದಾರೆ ಎಂದು ಹೇಳಲಾಲಿಗಿದೆ.
ಇನ್ನು ತಾವು ತುಮಕೂರು ನಗರದ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಹೊರತುಪಡಿಸಿ ಬೇರೆ ಅಭ್ಯರ್ಥಿಗಳ ಗೆಲುವಿಗೆ ಸಹಕರಿಸುವುದಾಗಿ ಹೇಳಿಕೊಂಡಿದ್ದಾರೆ