ತುಮಕೂರು ನಗರ ವಿಧಾನಸಭಾ ಚುನಾವಣೆಗೆ ನಾನು ಈ ಭಾರಿ ಸ್ಪರ್ಧೆಸಬೇಕು ಎಂದು ಬಯಸಿರಲಿಲ್ಲ ಆದರೆ ಕೆಲವು ತಿಂಗಳು ಹಿಂದೆ ರವೀಶ್ ಜಹಾಂಗೀರ್ ಮತ್ತು ಹಾಲಿ ಪಾಲಿಕೆ ಸದಸ್ಯರುಗಳು, ಹಲವಾರು ಕಾರ್ಯಕರ್ತರು ಮತ್ತು ಸ್ಥಳೀಯ ನಮ್ಮ ಪಕ್ಷದ ಮುಖಂಡರು ನನ್ನನ್ನು ಒತ್ತಾಯಿಸಿ ಸ್ಪರ್ದಿಸುವಂತೆ ಒತ್ತಾಯ ಮಾಡಿದರು ಎಂದು ಜೆಡಿಎಸ್ ಪಕ್ಷದ ಅಭ್ಯರ್ಥಿ ಗೋವಿಂದರಾಜು ಅವರು ಇಂದು ತಮ್ಮ ಕಚೇರಿಯಲ್ಲಿ ನಡೆಸಿದ ಅಗ್ನಿವಂಶ ತಿಗಳ ಸಮುದಾಯದ ಮುಖಂಡರ ಸಭೆಯಲ್ಲಿ ಮಾತನಾಡುತ್ತಾ ಈ ರೀತಿಯಾಗಿ ಹೇಳಿದರು.
ಮುಂದುವರೆದು ಮಾತನಾಡುತ್ತ ತಾನು ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷಕ್ಕೆ ಬಂದಾಗ ರವೀಶ್ ಜಹಾಂಗೀರ್ ಅವರು ತನಗೆ ದೊರೆಯಬೇಕಾಗಿದ್ದ ಶಾಸಕ ಸ್ಥಾನದ ಟಿಕೆಟ್ ಅನ್ನು ನನಗೆ ಬಿಟ್ಟು ಕೊಟ್ಟು ಇದುವರೆಗೂ ನನ್ನ ತಮ್ಮನಾಗಿ ಆತ್ಮೀಯ ಗೆಳೆಯನಾಗಿ ನಿಂತಿದ್ದಾರೆ ಎಂದರು.
ಅಲ್ಲದೆ ಇತ್ತೀಚಿಗೆ ನಮ್ಮ ಪಕ್ಷದ ನೇತಾರರು ಹೆಚ್ ಡಿ ದೇವೇಗೌಡ್ರು ಮತ್ತು ಹೆಚ್ ಡಿ ಕುಮಾರಣ್ಣನನವರ ಮಹದಾಸೆಯಂತೆ ರಾಜ್ಯದ್ಯಂತ ನಡೆಸಿದ ಜಾಲಾಧಾರೆ ಕಾರ್ಯಕ್ರಮದ ಪ್ರಯುಕ್ತ ತುಮಕೂರು ನಗರದಲ್ಲಿ ನಾನು ಯಶಸ್ವಿಯಾಗಿ ಮಾಡಿದ್ದ ಪರಿಣಾಮ ನನಗೆ ಟಿಕೆಟ್ ಲಭಿಸಿದ್ದು ಅದರನಂತೆ ಕುಮಾರಣ್ಣನ ಸಿದ್ದಗಂಗಾ ಮಠದಲ್ಲಿ ತುಮಕೂರು ನಗರದಲ್ಲಿ ಶಾಸಕ ಸ್ಥಾನದ ಅಭ್ಯರ್ಥಿಯಾಗಿ ನನ್ನ ಹೆಸರು ಘೋಷಣೆ ಮಾಡಿದರು.
ಅಲ್ಲದೆ ಸಾಕಷ್ಟು ದಿನಗಳಲ್ಲಿ ಕಾಲ ಹಲವಾರು ಉಹಾಪೋಹಗಳು ತುಮಕೂರಿನಲ್ಲಿ ಹರಿದಾಡಿ ಅಭ್ಯರ್ಥಿ ಬದಲಾವಣೆ ಆಗುತ್ತದೆ ಎಂತೆಲ್ಲ ಹರಿದಾಡಿತು ಆದರೆ ಕುಮಾರಣ್ಣನವರು ಆಡಿದ ಮಾತಿಗೆ ಎಂದಿಗೂ ಬದ್ಧರಾಗಿರುತ್ತಾರೆ ಎನ್ನುವುದಕ್ಕೆ ಇಲ್ಲಿ ಅಭ್ಯರ್ಥಿ ಬದಲಾವಣೆ ಆಗದೆ ಇರುವುದೇ ನಿದರ್ಶನ ಎಂದರಲ್ಲದೆ ಪಂಚರತ್ನ ಯಾತ್ರೆಯನ್ನು ಕರ್ನಾಟಕದ ಮೂಲೆ ಮೊಲ್ಲೆಗೆ ತಲುಪುವಂತೆ ಮಾಡಿ ಅವರು ಜನರಿಗಾಗಿ ಏನು ಮಾಡಲು ಹೋರಿಟ್ಟಿದ್ದೇನೆ ಎಂಬ ಸಂದೇಶ ರವಾನೆ ಮಾಡಿದ್ದಾರೆ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮಾತಿಗೆ ಬದ್ಧರಾಗಿ ಆ ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಾರೆ ಎಂದರು.
ಅಲ್ಲದೆ ಇತ್ತೀಚಿನ ದಿನಗಳಲ್ಲಿ ಗೋವಿಂದರಾಜು ಗೆಲ್ತಾರೆ ಎನ್ನುವುದನ್ನು ಸಹಿಸಿದ ಕೆಲವು ವ್ಯಕ್ತಿಗಳು ವಾಟ್ಸಾಪ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನನ್ನ ವಿರುದ್ಧ ಷಡ್ಯಂತ್ರ ಮಾಡಿ ಏನ್ ಏನೋ ಅಸಭ್ಯಕರ ಚಿತ್ರಣ ಹರಿದು ಬಿಡುತ್ತಿದ್ದಾರೆ ಅವರು ಅಂತಹವನ್ನು ಯಾವಾಗಲೋ ಬಿಡಬೇಕಿತ್ತು ಈ ಸಮಯದಲ್ಲಿ ಬಿಟ್ಟು ಜನರ ದಿಕ್ಕು ತಪ್ಪಿಸುವ ಹುನ್ನಾರ ಮಾಡಿದ್ದಾರೆ ಯಾತು ವಿಡಿಯೋ ಬಿಟ್ಟಿದ್ದರೋ ಅವರು ಪ್ರಸ್ತುತ ಕಂಬಿ ಹೇಳುಸ್ತಾ ಇದ್ದಾರೆ ದೇವರೇ ಅವರಿಗೆ ತಕ್ಕ ಶಾಸ್ತಿ ಮಾಡಿರುವುದು ಸತ್ಯಕ್ಕೆ ನಿದರ್ಶನ ಎಂದರು.
ಇನ್ನು ಜನರನ್ನು ಉದ್ದೇಶಿಸಿ ಮಾತನಾಡುತ್ತಾ ತುಮಕೂರು ನಗರದಲ್ಲಿ ನೀವು ಎಲ್ಲಾ ಪಕ್ಷದವರನ್ನು ಗೆಲ್ಲಿಸಿದ್ದೀರಾ ಈ ಭಾರಿ ಜೆಡಿಎಸ್ ಪಕ್ಷ ಗೆಲ್ಲಿಸುವ ಜವಾಬ್ದಾರಿ ನಿಮ್ಮದು, ಇದು ನನ್ನ ಕೊನೆ ಚುನಾವಣೆ ದಯಮಾಡಿ ನನ್ನನ್ನು ಗೆಲ್ಲಿಸಿ ಇನ್ಮುಂದೆ ನಾನು ಚುನಾವಣೆ ನಡೆಸಲು ನನಗೆ ಶಕ್ತಿ ಇಲ್ಲ ಎಂದಾರಲ್ಲದೆ ಪಂಚರತ್ನ ಯೋಚನೆ ಜನಪರ ಯೋಜನೆ ಅದರ ಸದುಪಯೋಗ ಮಾಡಿಕೊಳ್ಳಲು ದಯಮಾಡಿ ಜೆಡಿಎಸ್ ಪಕ್ಷವನ್ನು ಬೆಂಬಲಿಸಿ ಎಂದು ಗೋವಿಂದರಾಜು ಮನವಿ ಮಾಡಿದರು.
ಚುನಾವಣೆ ಪ್ರಯುಕ್ತ ಇದೆ ಸಂದರ್ಭದಲ್ಲಿ ತಮ್ಮ ಮತ ಬ್ಯಾಲಾಟ್ ನಲ್ಲಿರುವ ಕ್ರಮ ಸಂಖ್ಯೆ ಮತ್ತು ಹಸ್ತ ಪ್ರತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿ ಬಡವರು ಬದಕಬೇಕು ಅಂದರೆ ಜೆಡಿಎಸ್ ಬೆಂಬಲಿಸಿ ಹಾಗಾಗಿ ತುಮಕೂರಿನಲ್ಲಿ ನನ್ನನ್ನು ಶಾಸಕನಾಗಿ ಮಾಡಿದ್ದಲ್ಲಿ ನಿರುದ್ಯೋಗ ಯುವಕ ಮತ್ತು ಯುವತಿಯರಿಗೆ ಇಲ್ಲೆ ಉದ್ಯೋಗ ಕಲ್ಪಿಸುವ ಮಹದಾಸೆ ನನ್ನಲಿದೆ ಎಂದರು.
ಜೊತೆಗೆ ಹಾಲಿ ಶಾಸಕ ವಿರುದ್ಧ ಮಾತನಾಡಿ ಜ್ಯೋತಿಗಣೇಶ್ ಯಾರಿಗಾದರೂ ಉದ್ಯೋಗ ಕೊಟ್ಟಿರುವ ನಿದರ್ಶನ ಇದೆಯೇ ಇಲ್ಲ ಅದನ್ನು ನಾನು ಮಾಡಿಕೊಡ್ತೀನಿ ತುಮಕೂರು ನಗರದಲ್ಲಿ ಐ ಟಿ ಪಾರ್ಕ್ ಮಾಡುವ ಉದ್ದೇಶ ನನ್ನಲ್ಲಿದೆ ನನ್ನ ಉದ್ದೇಶ ಸಪಲ ಮಾಡುವ ಕೆಲಸ ನೀವು ಮಾಡ ಬೇಕು ಎಂದು ಮನವಿ ಮಾಡಿದರು.
ಅಷ್ಟೇ ಅಲ್ಲದೆ ಜನರಿಗೆ ಕಿವಿ ಮಾತು ಸಹ ಹೇಳಿದರು ಏನಂದರೆ ಯಾರು ಏನೇ ಕೊಟ್ಟರು ಇಸ್ಕೊಂಡು ಜೆಡಿಎಸ್ ಪಕ್ಷಕ್ಕೆ ಮಾತ್ರ ವೋಟ್ ಹಾಕಿ ಎಂದು ವಿವಾದತ್ಮಕವಾಗಿ ನುಡಿದರು.
ಈ ಸಂದರ್ಭದಲ್ಲಿ ಮಾಜಿ ಉಪ ಮಹಾ ಪೌರರಾದ ಟಿ ಆರ್ ನಾಗರಾಜು, ಹಾಲಿ ಉಪ ಮಹಾ ಪೌರರಾದ ನರಸಿಂಹಮೂರ್ತಿ ಪಾಲಿಕೆ ಸದಸ್ಯರುಗಳಾದ ಶ್ರೀನಿವಾಸ್, ಧರಣೇಂದ್ರ ಕುಮಾರ್, ಹೆಚ್ ಡಿಕೆ ಮಂಜುನಾಥ್, ರವೀಶ್ ಜಹಾಂಗೀರ್, ಕೊತ್ತಂಬರಿ ನಾಗರಾಜ್, ಫೈನಾನ್ಸ್ ಶಂಕರ್ ಸೇರಿದಂತೆ ಹಲವಾರು ಅಗ್ನಿ ವಂಶ ತಿಗಳ ಸಮುದಾಯದ ಮುಖಂಡರು ಹಾಗೂ ಜೆಡಿಎಸ್ ನಾಯಕರು ಉಪಸ್ಥಿತರಿದ್ದರು.