ತುಮಕೂರು : ಗ್ರಾಮಾಂತರ ಮಾಜಿ ಶಾಸಕರಾದ ಬಿ.ಸುರೇಶ್ ಗೌಡರವರ ದರ್ಪದ ವರ್ತನೆ, ದೌರ್ಜನ್ಯಕ್ಕೆ ಬೇಸತ್ತು ಹಾಲಿ ಶಾಸಕರಾದ ಡಿ.ಸಿ. ಗೌರಿಶಂಕರ್‌ರವರ ಹೃದಯ ವೈಶಾಲ್ಯತೆಗೆ ಮನಸೋತು ಸ್ವಯಂ ಪ್ರೇರಿತರಾಗಿ ಜೆಡಿಎಸ್ ಪಕ್ಷಕ್ಕೆ ಸಾವಿರಾರು ಬಿಜೆಪಿ ಮುಖಂಡರುಗಳು, ಮಹಿಳೆಯರು ಹಾಗೂ ಕಾರ್ಯಕರ್ತರು ಸೇರ್ಪಡೆಗೊಂಡಿದ್ದಾರೆ.
ತುಮಕೂರು ಗ್ರಾಮಾಂತರ ಡಿಸಿ ಗೌರಿಶಂಕರ್ ಅವರು ಶಾಸಕರಾಗಿ ಆಯ್ಕೆ ಆದ ದಿನದಿಂದ ಎಂದೂ ಸಹ ಯಾರ ಮೇಲೂ ದರ್ಪ ದೌರ್ಜನ್ಯ ತೋರದೆ, ಕ್ಷೇತ್ರದ ಮನೆ ಮಗನಾಗಿ ಕಾರ್ಯನಿರ್ವಹಿಸುತ್ತಿದ್ದು, ಅದರಿಂದ ಪ್ರೇರಿಪಿತರಾಗಿ ಈ ರೀತಿಯಾಗಿ ನಾವು ಬಿಜೆಪಿ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿರುವುದಾಗಿ ನೊಂದ ಬಿಜೆಪಿ ಕಾರ್ಯಕರ್ತರು ಮಾದ್ಯಮದವರ ಮುಂದೆ ಹೇಳಿದ್ದಾರೆ.
ಇನ್ನು ಹಾಲಿ ಶಾಸಕರಾದ ಡಿ.ಸಿ.ಗೌರಿಶಂಕರ್ ರವರ ಒಳ್ಳೆಯ ಗುಣ, ಅಭಿವೃದ್ಧಿ ಕಾರ್ಯ ಹಾಗೂ ನಾಯಕತ್ವಕ್ಕೆ ಮೆಚ್ಚಿ ಯಾವುದೇ ರೀತಿಯ ಆಮಿಷ ಇಟ್ಟುಕೊಳ್ಳದೆ ಸ್ವಯಂ ಪ್ರೇರಿತರಾಗಿ ಸೋಮವಾರ ಸಂಜೆ ಶಾಸಕರ ಬಳ್ಳಗೆರೆ ನಿವಾಸಕ್ಕೆ ಸುಮಾರು 2000ಕ್ಕೂ ಹೆಚ್ಚು ಬಿಜೆಪಿ ಮುಖಂಡರು, ಮಹಿಳೆಯರು ಹಾಗೂ ಕಾರ್ಯಕರ್ತ ಬಂಧುಗಳು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.