ಮಾಜಿ ಸಚಿವ ಸೋಗಡು ಶಿವಣ್ಣ ಗೆಲ್ಲಿಸಲು ಅಭಿಮಾನಿಗಳ ಪಣ ಭರ್ಜರಿ ಪ್ರಚಾರದ ಮೂಲಕ ಕ್ಯಾಂಪೈನ್.
ತುಮಕೂರು – ತುಮಕೂರಿನ ಹಿರಿಯ ರಾಜಕೀಯ ಮುಖಂಡ ಹಾಗೂ ಮಾಜಿ ಸಚಿವ ಸೊಗಡು ಶಿವಣ್ಣ ರವರು ಈ ಬಾರಿಯ ಸಾರ್ವತ್ರಿಕ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದು ನೆಚ್ಚಿನ ನಾಯಕನನ್ನು ಗೆಲ್ಲಿಸಲು ಅವರ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಪಣತೊಟ್ಟಿದ್ದು ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಮನೆ ಮನೆಗೂ ತೆರಳಿ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ.
ಇದರ ನಡುವೆ ಭಾನುವಾರ ತುಮಕೂರಿನ 12ನೇ ವಾರ್ಡಿನಲ್ಲಿ ಮನೆ ಮನೆ ಪ್ರಚಾರ ಆರಂಭ ಮಾಡಿದ್ದು ತುಮಕೂರಿನ ಸದಾಶಿವನಗರದ ಗಣಪತಿ ದೇವಾಲಯದಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ ರವರ ಪತ್ನಿ ರತ್ನಮ್ಮ ರವರು ಕರಪತ್ರ ಹಾಗೂ ದೇವಾಲಯಕ್ಕೆ ಪೂಜೆ ಸಲ್ಲಿಸಿ ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಸೊಗಡು ಶಿವಣ್ಣ ರವರ ಪತ್ನಿ ರತ್ನಮ್ಮ ಮಾತನಾಡಿ ಸೊಗಡು ಶಿವಣ್ಣರವರು ತಮ್ಮ ಆಡಳಿತ ಅವಧಿಯಲ್ಲಿ ಮಾಡಿದ ಹಲವು ಅಭಿವೃದ್ಧಿ ಕಾರ್ಯಗಳು ಇಂದಿಗೂ ಸಹ ಜನರ ಮನಸ್ಸಿನಲ್ಲಿ ಉಳಿದಿದೆ ಇನ್ನು ಈ ಬಾರಿಯ ಚುನಾವಣೆ ಕೊನೆ ಚುನಾವಣೆ ಎಂದು ಶಿವಣ್ಣರವರು ತಿಳಿಸಿದ್ದು ತಮ್ಮ ಅದೃಷ್ಟ ಪರೀಕ್ಷೆಗಾಗಿ ಕಣಕ್ಕೆ ಇಳಿದಿದ್ದಾರೆ ಹಾಗಾಗಿ ಬುಲ್ಡೆಜರ್ ಗುರುತಿಗೆ ಈ ಬಾರಿ ತುಮಕೂರಿನ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತ ನೀಡುವ ಮೂಲಕ ಸೊಗಡು ಶಿವಣ್ಣರವರನ್ನ ಆಯ್ಕೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಮತ್ತೋರ್ವ ಮುಖಂಡ ಎಂ ಬಿ ಪಂಚಾಕ್ಷರಯ್ಯ ಮಾತನಾಡಿ ನಮ್ಮ ನಾಯಕ ಸೋಗಡು ಶಿವಣ್ಣ ರವರು ತುಮಕೂರಿನ ಸ್ವಾಭಿಮಾನದ ಸಂಕೇತ ಇನ್ನು ಬಿಜೆಪಿ ಪಕ್ಷದಿಂದ ಆಕಾಂಕ್ಷಿಯಾಗಿದ್ದ ಅವರಿಗೆ ಟಿಕೆಟ್ ನಿರಾಕರಣೆ ಮಾಡಿರುವುದು ನಿಜಕ್ಕೂ ಅನ್ಯಾಯ ಹಾಗಾಗಿ ಈ ಬಾರಿ ಅವರು ಪಕ್ಷೇತರರಾಗಿ ಕಣಕ್ಕೆ ಇಳಿದಿದ್ದು ತುಮಕೂರಿನ ನಾಗರಿಕರು ಹೆಚ್ಚಿನ ಮತ ನೀಡುವ ಮೂಲಕ ತುಮಕೂರು ನಾಗರಿಕರ ಸೇವೆ ಮಾಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ ಶಿವಣ್ಣರವರ ಪತ್ನಿ ರತ್ನಮ್ಮ ಹಾಗೂ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರ ನೇತೃತ್ವದಲ್ಲಿ ಸದಾಶಿವನಗರ ಹಾಗೂ ನಜರಾಬಾದ್ ವ್ಯಾಪ್ತಿಯ ಮನೆ ಮನೆಗಳಿಗೆ ತೆರಳಿ ಕರಪತ್ರ ಹಂಚುವ ಮೂಲಕ ಮತ ನೀಡಲು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಮುಖಂಡರಾದ ನವೀನ್ ಕುಮಾರ್, ಯತೀಶ್ ಸಂತೋಷ್, ಪುರುಷೋತ್ತಮ್, ಗಣೇಶ್ ,ಆನಂದ್, ಗೋಪಾಲಯ್ಯ ,ಅರುಣ್ ಕುಮಾರ್ ,ಶಶಿ ಸೇರಿದಂತೆ ಹಲವರು ಹಾಜರಿದ್ದರು.