ಬಿರುಸಿನ ಪ್ರಚಾರ ಶುರು ಮಾಡಿ ಇತರೆ ಅಭ್ಯರ್ಥಿಗಳಿಗೆ ನಡುಕ ಹುಟ್ಟಿಸಿದ ಪಕ್ಷೇತರ ಅಭ್ಯರ್ಥಿ ನರಸೇಗೌಡ

ತುಮಕೂರು – 2023ರ ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿದ್ದು ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ನರಸೇಗೌಡ ರವರಿಂದ ಚುನಾವಣಾ ಪ್ರಚಾರಕ್ಕೆ ಶುಕ್ರವಾರ ಚಾಲನೆ ನೀಡಿದ್ದಾರೆ.

 

 

 

 

 

 

ತಮ್ಮ ಕುಟುಂಬಸ್ಥರು ಹಾಗೂ ಅಪಾರ ಬೆಂಬಲಿಗರೊಂದಿಗೆ ತುಮಕೂರಿನ ಚಾಮುಂಡೇಶ್ವರಿ ದೇವಾಲಯಕ್ಕೆ ತೆರಳಿ ಪ್ರಣಾಳಿಕೆ, ಚುನಾವಣಾ ಹಸ್ತಪ್ರತಿಗಳಿಗೆ ವಿಶೇಷ ಪೂಜೆ ಹಾಗೂ ದೇವರಿಗೆ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು.

 

 

 

 

 

 

ಇದೇ ಸಂದರ್ಭದಲ್ಲಿ ಪತ್ರಕರ್ತರಿಗೆ ಮಾಹಿತಿ ನೀಡಿರುವ ಅವರು ಇದುವರೆಗೂ ಜೆಡಿಎಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿದ್ದಕ್ಕೆ ಪಕ್ಷದ ನಾಯಕರು ನಮ್ಮನ್ನ ಕಡೆಗಣಿಸಿದ್ದು ಕಳೆದ ಮೂರು ಚುನಾವಣೆಯಲ್ಲೂ ನಾನು ಪಕ್ಷದ ಪ್ರಮುಖ ಟಿಕೆಟ್ ಆಕಾಂಕ್ಷಿಯಾಗಿದ್ದ ಆದರೆ ಪಕ್ಷ ನನಗೆ ಟಿಕೆಟ್ ನೀಡದೇ ಇರುವುದು ಬೇಸರ ತಂದಿರುವುದರ ಪ್ರಯುಕ್ತವೇ ನಾನು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಅಖಾಡಕ್ಕೆ ಇಳಿದಿದ್ದು, ನನ್ನ ಶಕ್ತಿ ಏನು ಎಂಬುದು ಮುಂದಿನ ದಿನಗಳಲ್ಲಿ ಪಕ್ಷದ ನಾಯಕರಿಗೆ ಮತ್ತು ಜೆಡಿಎಸ್‌ ಪಕ್ಷಕ್ಕೆ ತಿಳಿಯುತ್ತದೆಂದು ಹೇಳಿದರು.

 

 

 

 

 

ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದೇನೆ ತುಮಕೂರು ನಗರದಾದ್ಯಂತ ಉತ್ತಮ ಸ್ಪಂದನೆ ದೊರಕುತ್ತಿದ್ದು ಈ ಬಾರಿ ಚುನಾವಣೆಯಲ್ಲಿ ತುಮಕೂರು ನಗರದ ನಾಗರಿಕರು ಹಾಗೂ ಮತದಾರರು ನನ್ನನ್ನ ಆಶೀರ್ವದಿಸಲಿದ್ದಾರೆ ಆ ಮೂಲಕ ತುಮಕೂರು ನಗರದ ಜನತೆಯ ಆಶೀರ್ವಾದ ನನ್ನ ಮೇಲೆ ಇರಲಿದೆ ಅದರಂತೆ ಈ ಬಾರಿ ಹೆಚ್ಚಿನ ಮತಗಳ ಅಂತರದಲ್ಲಿ ಗೆಲುವು ಸಾಧಿಸುತ್ತೇನೆ ಎಂದು ತಿಳಿಸಿದ್ದಾರೆ.

 

 

 

 

 

 

 

 

ಅದೂ ಅಲ್ಲದೇ ನನಗೆ ಜೆಡಿಎಸ್‌, ಬಿಜೆಪಿ ಮತ್ತು ಕಾಂಗ್ರೆಸ್‌ ಪಾಳಯದಲ್ಲಿರುವ ಅತೃಪ್ತ ಕಾರ್ಯಕರ್ತರು ನನಗೆ ಹಲವಾರು ರೀತಿಯಲ್ಲಿ ಸಹಕಾರ ನೀಡುತ್ತಿದ್ದಾರೆ, ಜೊತೆಗೆ ನನಗೆ ತುಮಕೂರಿನ ಎಲ್ಲಾ ವಾರ್ಡುಗಳಲ್ಲಿ ಪಕ್ಷಾತೀತವಾಗಿ ಕೆಲಸ ಮಾಡುವ ನನ್ನದೇ ಆದ ನಿಷ್ಠಾವಂತ ಕಾರ್ಯಕರ್ತರು, ಜನರು ನನ್ನ ಬೆನ್ನಿಗೆ ನಿಂತಿದ್ದಾರೆಂದು ಹೇಳಿದರು.

 

 

 

 

 

ಇದೇ ಸಂದರ್ಭದಲ್ಲಿ ಡಾ.  ಗಿರೀಶ್, ಮನೋಹರ್, ಜೋಸೆಫ್ ,ಇರ್ಫಾನ್ ,ಸೃಷ್ಟಿ ,ಬಾಂಬು ಗಿರೀಶ್  ಸೇರಿದಂತೆ ಹಲವಾರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!