ಕರ್ನಾಟಕದ ‘ಕರ್ಮಯೋಗಿ’ಯಾಗಿ ಮಲ್ಲಿಕಾರ್ಜುನ್ ಖರ್ಗೆ: ಬಿಡುಗಡೆಯಾಯ್ತು ಸಾಂಗ್
ಕಾಂಗ್ರೆಸ್‌ನ ಹಿರಿಯ ರಾಜಕಾರಣಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಭಿಮಾನಿಗಳು ಕರ್ನಾಟಕ ರಾಜ್ಯಕ್ಕಾಗಿ ಖರ್ಗೆ ಅವರ ಅಚಲ ಬದ್ಧತೆ ಮತ್ತು ಸಾಧನೆಗಳನ್ನು ಬಿಂಭಿಸುವ “ಕರ್ಮಯೋಗಿ ಖರ್ಗೆ” ಎನ್ನುವ ಶೀರ್ಷಿಕೆಯ ಹೃದಯಸ್ಪರ್ಶಿ ಮತ್ತು ಸ್ಪೂರ್ತಿದಾಯಕ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಈ ಹಾಡಿನಲ್ಲಿ ಖರ್ಗೆಯವರ ಜನಪರ ನಿಲುವುಗಳು ಮತ್ತು ಜನರ ಕಲ್ಯಾಣಕ್ಕಾಗಿ ಅವರ ಸಮರ್ಪಣಾ ಮನೋಭಾವವನ್ನು ಎತ್ತಿ ತೋರಿಸಲಾಗಿದೆ.
“ದೀನದಲಿತರಾಗಿ ಹುಟ್ಟಿದ ಜೀವ, ಅಭಿವೃದ್ದಿಗೆ ಮುಡಿಪಿಟ್ಟ ಜೀವ, ಇವರಿಂದಲೇ ಮುಂದೆಡೆ ಇಟ್ಟಿದೆ ಕಲಬುರ್ಗಿ, ಇವರ ಹೋರಾಟ ಇಂದು ನಮಗಾಗಿ” ಎಂದು ಆರಂಭವಾಗುವ ಈ ಹಾಡಿನಲ್ಲಿ ಖರ್ಗೆ ಅವರ ನಾಲ್ಕು ದಶಕಗಳ ಕಾಲದ ಗಮನಾರ್ಹ ರಾಜಕೀಯ ವೃತ್ತಿಜೀವನವನ್ನು ಮತ್ತು ಕರ್ನಾಟಕದ ಅಭಿವೃದ್ಧಿ ಮತ್ತು ಪ್ರಗತಿಗೆ ಅವರ ಹಲವಾರು ಕೊಡುಗೆಗಳನ್ನು ತೋರಿಸಲಾಗಿದೆ. ಖರ್ಗೆ ಅವರ ನಾಯಕತ್ವದ ಗುಣ, ದೂರದೃಷ್ಟಿ ಮತ್ತು ಜನರ ಬಗ್ಗೆ ಅವರಿಗಿರುವ ಸಹಾನುಭೂತಿಯನ್ನು ತೋರಿಸುವ ಜೊತೆಗೆ ತಮ್ಮ ನಿಸ್ವಾರ್ಥ ಸೇವೆಯಿಂದ ಖರ್ಗೆ ‘ಕರ್ಮಯೋಗಿ’ಯಾಗಿದ್ದಾರೆ ಎಂದು ಈ ಹಾಡು ಅವರ ವ್ಯಕ್ತಿತ್ವವನ್ನು ಕಟ್ಟಿಕೊಡುತ್ತದೆ.
ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿಯೂ, ಸರ್ಕಾರ ಮತ್ತು ಪಕ್ಷದ ವಿವಿಧ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಸದ್ಯಕ್ಕೆ ಎಐಸಿಸಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ಖರ್ಗೆ ಅವರ ಮೇಲೆ ಜನರು ಹೊಂದಿರುವ ಅಪಾರ ಪ್ರೀತಿ ಮತ್ತು ಗೌರವವನ್ನು ಮತ್ತು ರಾಜ್ಯದ ಅಭಿವೃದ್ಧಿಯ ಕಡೆಗೆ ಖರ್ಗೆ ಅವರ ಅಪ್ರತಿಮ ಸಮರ್ಪಣೆಯನ್ನು ಈ ಹಾಡು ಪ್ರತಿಬಿಂಬಿಸುತ್ತದೆ.
‘ಕರ್ಮಯೋಗಿ ಖರ್ಗೆ’ ಶೀರ್ಷಿಕೆಯಡಿಯಲ್ಲಿ ಬಿಡುಗಡೆಯಾದ ಈ ಹಾಡು ಈಗ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಶೇರ್ ಆಗುತ್ತಿದ್ದು, ಮಲ್ಲಿಕಾರ್ಜುನ ಖರ್ಗೆ ಅವರ ಅಭಿಮಾನಿಗಳು ಕುತೂಹಲದಿಂದ ಎಲ್ಲೆಡೆ ಹಂಚಿಕೊಳ್ಳುತ್ತಿದ್ದಾರೆ ಮತ್ತು ಕರ್ನಾಟಕಕ್ಕೆ ಅವರ ಆದರ್ಶಪ್ರಾಯ ನಾಯಕತ್ವ ಮತ್ತು ಸಾಧನೆಗಳ ಸಂದೇಶವನ್ನು ಹರಡುತ್ತಿದ್ದಾರೆ.
https://www.facebook.com/watch/?v=619392509719640
ಲಿಂಕ್: https://www.facebook.com/watch/?v=619392509719640