ಸುರೇಶ್ ಗೌಡ ಅವರು ತಮ್ಮ ಪಕ್ಷದ ಕಚೇರಿಯಲ್ಲಿ 30 ವರ್ಷದಿಂದ ಜೆಡಿಎಸ್ ಅಲ್ಲಿ ಇದ್ದ ಕೃಷ್ಣಪ್ಪ ಅವರು ಬೆಸೆತ್ತು ಬಿಜೆಪಿ ಅತ್ತ ಮುಖ ಮಾಡಿದ್ದಾರೆ ಎಂದರು ಅವರು ತಿಗಳ ಸಮುದಾಯದ ಪ್ರಮುಖ ಮುಂಡರು ಎಂದವರು ನಮ್ಮ ಪಕ್ಷದಿಂದ ಅಗ್ನಿ ಬನ್ನಿಗರಾಯ ಜಯಂತಿ ನಿಗಮ ಮಂಡಳಿ ಹಾಗೂ ಇನ್ನಿತರೆ ಸಾಮಾಜಿಕ ಕಾರ್ಯಗಳನ್ನು ಮಾಡಿರುವುದರ ಪ್ರಯುಕ್ತ ಅವರು ಜೆಡಿಎಸ್ ತೊರೆದು ಬಂದಿದ್ದಾರೆ ಎಂದರು
ಜೆಡಿಎಸ್ ಬುನಾದಿ ಈ ಭಾಗದಲ್ಲಿ ಕಳಚಿದೆ ಎಂದು ಹೇಳಬಹುದಾಗಿದೆ ಎಂದರು ನರೇಂದ್ರ ಮೋದಿ ಅವರ ನಾಯಕತ್ವ ಈ ದೇಶಕ್ಕೆ ಅತ್ಯಮೂಲ್ಯವಾಗಿರುವುದರ ಪ್ರಯುಕ್ತ ಕಳೆದ ಐದು ವರ್ಷಗಳು ಯಾವುದೇ ರೀತಿಯಾದ ಅಭಿವೃದ್ಧಿ ಆಗಿಲ್ಲ ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ಬೆಂಬಲಿಸುವುದರೊಂದಿಗೆ ಅಭಿವೃದ್ಧಿಯ ಪಥದಲ್ಲಿ ಸಾಗಿಸುವ ಭರವಸೆಯನ್ನು ಈ ಮೂಲಕ ನೀಡುತ್ತೇನೆ ಎಂದು ಮಾಜಿ ಶಾಸಕ ಸುರೇಶ್ ಗೌಡ್ರು ಹೇಳಿದರು.
ಮುಂದುವರೆದು ಜೆಡಿಎಸ್ ತೋರಿದು ಬಿಜೆಪಿ ಸೇರಿದ ಕೃಷ್ಣಪ್ಪ ಮಾತನಾಡುತ್ತ ಸುರೇಶ್ ಗೌಡ್ರು ಸರ್ವ ಜನಾಂಗದ ನಾಯಕರು ನಾನು ಈ ಪಕ್ಷ ಸೇರ್ಪಡೆಯಾಗಲು ಕಾರಣ ರಾಮಚಂದ್ರಪ್ಪ ಕುಮಾರಣ್ಣ ಹಾಗೂ ಇತರರು ಪ್ರೇರಣೆ ಹಾಗೂ ಸುರೇಶ್ ಗೌಡ್ರ ಮುಂದಾಳತ್ವ ಮತ್ತು ಅಭಿವೃದ್ಧಿಯ ಯೋಜನೆಗಳ ಅನುಷ್ಠಾನದ ಭರವಸೆ ನೀಡಿರುವ ಪ್ರಯುಕ್ತ ನಾನು ಈ ಪಕ್ಷಕ್ಕೆ ಬರುತ್ತಿದ್ದೇನೆ ಎಂದರು.
ಜೆಡಿಎಸ್ ಪಕ್ಷ ಸ್ವ ಹಿತಾಸಕ್ತಿ ಪಕ್ಷ ಕುಮಾರಣ್ಣನ ದೇವೇಗೌಡ್ರು ಅವರ ಕುಟುಂಬದ ಏಳ್ಗೆಗಾಗಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ ಹೊರೆತು ರಾಜ್ಯದ ಏಳ್ಗೆಗೆ ಸಂಘಟನೆ ಮಾಡಿಲ್ಲ ಅವರುಗಳು ಮತ್ತು ಜಿಲ್ಲಾ ಜೆಡಿಎಸ್ ನನನ್ನು ನೆಡಸಿಕೊಂಡ ರೀತಿಯಿಂದ ಬೇಸತ್ತು ನಾನು ಪಕ್ಷ ತೊರೆದಿದ್ದೇನೆ ಎಂದರು.
ಅಧಿಕಾರ ವೀಕೆಂದ್ರಿಕಾರಣಕ್ಕೆ ದೇವೇಗೌಡ್ರು ಕುಮಾರಣ್ಣನಿಗೆ ಕೊಡ್ತಾರೆ ಆದರೆ ಅದನ್ನು ಗೌರಿಶಂಕರ್ ನಮಗೆ ಕೊಟ್ಟಿಲ್ಲ ಅವರು ಸಮರ್ಥ ನಾಯಕರಲ್ಲ ಅವರು ಎಂದಿಗೂ ನಮ್ಮ ಸಹಕಾರಕ್ಕೆ ರಾಜಕೀಯವಾಗಿ ಬೆಳೆಯಲು ಬಿಡಲಿಲ್ಲ ಇದರಿಂದ ನಮಗೆ ಸಾಕಷ್ಟು ನೋವು ಉಂಟಾಗಿದೆ.
ಹಲವಾರು ನಿಷ್ಠಾವಂತ ಜೆಡಿಎಸ್ ಕಾರ್ಯಕರ್ತರುಗಳಿಗೆ ತಾಲ್ಲೂಕು ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ಗಳಲ್ಲಿ ಅಧಿಕಾರ ತಪ್ಪಿಸುವಲ್ಲಿ ಹಾಲಿ ಶಾಸಕರು ವಂಚನೆ ಮಾಡಿದ್ದಾರೆ ಎಂದು ತಿಗಳ ಜನಾಂಗದ ಮುಖಂಡ ಕೃಷ್ಣಪ್ಪ ಹೇಳಿದರು.
ನನ್ನ ಜನಾಂಗದ ಸರ್ವತೋಮುಖ ಅಭಿವೃದ್ಧಿಗೆ ಸುರೇಶ್ ಗೌಡ್ರು ಸಾಕಾರಾತ್ಮಕವಾಗಿ ಸ್ಪಂದಿಸಿ ಮುಂದೆ ನಿಗಮ ಮಂಡಳಿ ರಚನೆ ಅಗಲಿದ್ದು ಅದಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಸುರೇಶ ಗೌಡ್ರು ಭರವಸೆ ನೀಡಿದ್ದು ಅದನ್ನು ಅವರನ್ನು ಅಧಿಕಾರಕ್ಕೆ ಬಂದ ಕ್ಷಣದಲ್ಲಿ ಈಡೇರಿಸುವ ವಿಶ್ವಾಸ ನನ್ನಲಿದೆ ಎಂದರು.
ಕೃಷ್ಣಪ್ಪ ಅವರೊಂದಿಗೆ ನೂರಾರು ಜನ ಜೆಡಿಎಸ್ ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು. ಇತ್ತೀಚೆಗೆ ಜೆಡಿಎಸ್ ಬಿಟ್ಟು ಬಿಜೆಪಿ ಸೇರ್ಪಡೆ ಆದ ಬೆಳ್ಳಿ ಲೋಕೇಶ್ ತಮ್ಮ ಜೆಡಿಎಸ್ ಪಕ್ಷದಲ್ಲಿ ಆದ ಅನ್ಯಾಯವನ್ನು ಹೊರಹಾಕಿದರು, ಆ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಪ್ರಾಮಾಣಿಕರಿಗೆ ಬೆಲೆ ನೀಡದ ಪಕ್ಷದಲ್ಲಿ ನಾನು ಮೊದಲ್ಗೊಂಡು ಹಲವಾರು ಕಾರ್ಯಕರ್ತರು ಜೆಡಿಎಸ್ ತೊರೆಯಲು ಕಾರಣವಾಗಿದೆ ಅಲ್ಲದೆ ಮುಂದಿನ ದಿನಗಳಲ್ಲಿ ಇನ್ನು ಸಾವಿರಾರು ಸಂಖ್ಯೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಸೇರಲಿದ್ದಾರೆ ಎಂದರು.
ಒಕ್ಕಲಿಗ ಸಮುದಾಯವನ್ನು ತುಮಕೂರು ಕ್ಷೇತ್ರದಲ್ಲಿ ಅನ್ಯಾಯ ಮಾಡಿರುವ ಜೆಡಿಎಸ್ ಪಕ್ಷ ಹೊರೆತು ಬಿಜೆಪಿ ಅಲ್ಲ ಒಕ್ಕಲಿಗ ನಿಗಮ ಮಂಡಳಿ ಸ್ಥಾಪನೆ ಆಗಲು ಸುರೇಶ್ ಗೌಡ್ರು ಕಾರಣ ಹೊರತು ಯಾವುದೇ ಜೆಡಿಎಸ್ ಮುಖಂಡರಲ್ಲ ಎಂದು ಹೇಳಿದರಲ್ಲದೆ ತಮ್ಮ ಜೆಡಿಎಸ್ ಪಕ್ಷದಲ್ಲಿ ಕುಮಾರಣ್ಣನ ದರ್ಬಾರ್ ಜಾಸ್ತಿ ಸುಖಸುಮ್ಮನೆ ರೈತರ ಹೆಸರು ಹೇಳಿ ವೋಟ್ ಪಡೆಯುತ್ತಿದ್ದಾರೆ ಆದರೆ ಅದನ್ನು ಬಿಟ್ಟು ತಾವು ಮಾಡಿರುವ ನಿಷ್ಠಾವಂತ ಕೆಲಸಗಳಿಂದ ವೋಟ್ ಕೇಳಿ.
ತಮ್ಮ ವಿರುದ್ಧ ಅವಹೇಳನಾಕಾರಿಯಾಗಿ ಸುದ್ದಿ ಮಾಡ ಬಾರದು ಎಂದು ಭಯಪಟ್ಟು ನ್ಯಾಯಾಲಯದಿಂದ ತಡೆಯಜ್ಞೆ ತರುತ್ತಾರೆ ಇದು ತರವಲ್ಲ ಅಲ್ಲದೆ ನಕಲಿ ಬಾಂಡ್ ಹಂಚಿ ಪುಟ್ಟ ಮಕ್ಕಳ ಭವಿಷ್ಯಗಳ ಜೋತೆ ಚೆಲ್ಲಾಟವಡುತ್ತಿದ್ದಾರೆ ಎಂದು ಬೆಳ್ಳಿ ಲೋಕೇಶ್ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಅಲ್ಲದೆ ಸುರೇಶ್ ಗೌಡ್ರನ್ನು ಅತೀ ಹೆಚ್ಚು ಮತಗಳಿಂದ ಗೆಲ್ಲಿಸುವುದರ ಮೂಲಕ ಅವರನ್ನು ಭಾರಿ ಶಾಸಕನಲ್ಲ ಮಂತ್ರಿ ಮಾಡುವ ಕಾರ್ಯ ಗ್ರಾಮಾಂತರ ಜನರ ಹೆಗಲಮೇರಿದೆ ಅವರು ಎಲ್ಲಾ ವರ್ಗದ ಜನರ ಜನ ನಾಯಕ ಎಂದು ಹೇಳಿದರು. ಜೆಡಿಎಸ್ ಪಕ್ಷ ಎಷ್ಟೇ ಗುಂಡಾಗಿರಿ ಮಾಡಿದಾರು ಸತ್ಯಕ್ಕೆ ಧರ್ಮಕ್ಕೆ ಜಯ ಸಿಗುವುದು ಅಂತಹ ಪ್ರವೃತ್ತಿ ಬಿಡಿ ಎಂದು ಕಿವಿ ಮಾತು ಹೇಳಿದರು. ಅಲ್ಲದ್ದೆ ಇತ್ತೀಚಿಗೆ ನಮ್ಮ ಪಕ್ಷದ ಹಿರಿಯ ಮುಸ್ಲಿಂ ಮುಖಂಡನಿಗಿ ಹೆಗ್ಗೆರೆಯಲ್ಲಿ ಹಲ್ಲೆ ಮಾಡಿರುವುದೇ ಇದಕ್ಕೆ ನಿದರ್ಶನ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸುರೇಶ್ ಗೌಡ್ರು, ಶಿವಪ್ರಸಾದ್, ಬೆಳ್ಳಿ ಲೋಕೇಶ್, ಗೂಳೂರು ಶಿವಕುಮಾರ್, ಪಂಚೆ ರಾಮಚಂದ್ರಪ್ಪ, ದೇವರಾಜು ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.