ತುಮಕೂರು : 2023 ಸಾರ್ವತ್ರಿಕ ಚುನಾವಣೆಯ ಹಿನ್ನಲೆಯಲ್ಲಿ ತುಮಕೂರು ನಗರದ ಕಾಂಗ್ರೆಸ್ ಪಕ್ಷದ ಟಿಕೇಟ್ ಘೋಷಣೆಯಾದ ಹಿನ್ನಲೆಯಲ್ಲಿ ಇಕ್ಬಾಲ್ ಅಹಮ್ಮದ್ ರವರು ತನಗೆ ಕಾಂಗ್ರೆಸ್ ಪಕ್ಷದ ಶಾಸಕ ಸ್ಥಾನದ ಟಿಕೇಟ್ ದೊರೆಯಲು ಕಾರಣರಾದ ಎಲ್ಲಾ ಎ.ಐ.ಸಿ.ಸಿ. ಮುಖಂಡರು, ಕೆ.ಪಿ.ಸಿ.ಸಿ ಮುಖಂಡರು, ರಾಷ್ಟ್ರೀಯ ಮತ್ತು ರಾಜ್ಯದ ನಾಯಕರು ಅದರೊಂದಿಗೆ ತುಮಕೂರು ನಗರದ ಮತ್ತು ಜಿಲ್ಲೆಯ ಎಲ್ಲಾ ನಾಯಕರುಗಳನ್ನು ಸ್ಮರಿಸುತ್ತಾ, ಅವರಿಗೆ ಧನ್ಯವಾದಗಳನ್ನು ತಿಳಿಸಿದರು.
ತನ್ನ ಮೇಲೆ ವಿಶ್ವಾಸವನ್ನಿಟ್ಟು ಟಿಕೇಟ್ ನೀಡಿದ ಕಾಂಗ್ರೆಸ್ ಪಕ್ಷಕ್ಕೆ ತಾನು ಸದಾ ಚಿರ ಋಣಿಯಾಗಿದ್ದು, ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿರುವ ಎಲ್ಲಾ ನಾಯಕರನ್ನು ನಾನು ವಿಶ್ವಾಸಕ್ಕೆ ಪಡೆದು, ಯಾರೊಂದಿಗೂ ಭಿನ್ನಾಭಿಪ್ರಾಯವಿಲ್ಲದೇ ಚುನಾವಣೆಯನ್ನು ನಿಭಾಯಿಸುವೆ ಎಂದರು.
ಇನ್ನುಳಿದಂತೆ ಟಿಕೇಟ್ ಆಕಾಂಕ್ಷಿಗಳಾಗಿದ್ದ ರಫೀಕ್ ಅಹಮ್ಮದ್, ಅತಿಕ್ ಅಹಮ್ಮದ್, ಫರ್ಹಾನ ಬೇಗಂ, ಶಶಿಹುಲಿಕುಂಟೆ ಟಿಕೇಟ್ ಗಾಗಿ ಸಲ್ಲಿಸಿದ್ದ ಎಲ್ಲಾ ಅಪೇಕ್ಷಿತರು, ಜಿಲ್ಲಾ ಕಾಂಗ್ರೆಸ್ ಘಟಕದ ಎಲ್ಲಾ ಪದಾಧಿಕಾರಿಗಳು, ನಗರ ಘಟಕಗಳ ಪದಾಧಿಕಾರಿಗಳು ಮತ್ತು ಸಮಸ್ತ ಕಾರ್ಯಕರ್ತರನ್ನು ಯಾವುದೇ ರೀತಿಯಾದ ಬಿನ್ನಭಿಪ್ರಾಯಗಳಿಲ್ಲದೇ ಚುನಾವಣೆಯನ್ನು ಸಮರ್ಥವಾಗಿ ಮತ್ತು ನಿಷ್ಠೆಯಿಂದ ಚುನಾವಣೆಯ ಪ್ರಚಾರ ಕಾರ್ಯದಲ್ಲಿ ಎಲ್ಲರೂ ತನ್ನೊಂದಿಗೆ ಭಾಗವಹಿಸಿ, ಸಹಕರಿಸುವಂತೆ ಮನವಿಯನ್ನು ಸಹ ಮಾಡಿದರು.
ಇನ್ನು ತನ್ನ ಸಹ ಮಿತ್ರರುಗಳಾದ ರಫೀಕ್ ಅಹಮ್ಮದ್, ಅತಿಕ್ ಅಹಮ್ಮದ್ ಹಾಗೂ ಇನ್ನಿತರರನ್ನೂ ಸಹ ಖುದ್ದು ಭೇಟಿಯಾಗಿ ತನ್ನ ಪ್ರಚಾರ ಕಾರ್ಯದಲ್ಲಿ ತೊಡಗುವಂತೆ ಕೋರುವುದಾಗಿಯೂ ಸಹ ತಿಳಿಸಿದರು.