ತುಮಕೂರು ನಗರ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಇಕ್ಬಾಲ್‌ ಅಹ್ಮದ್ ಹೆಸರು ಪ್ರಕಟ

2023 ಸಾರ್ವತ್ರಿಕ ಚುನಾವಣೆಯ ಹಿನ್ನಲೆಯಲ್ಲಿ ತುಮಕೂರು ನಗರ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಇಕ್ಬಾಹ್ಮ ಅಹ್ಮದ್‌ ಅವರ ಹೆಸರು ಹೊರ ಬಿದ್ದಿದೆ.

 

 

 

 

ಇನ್ನು ಹಲವಾರು ದಿನಗಳಿಂದ ತುಮಕೂರು ನಗರದ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಯಾರೆಂಬ ಗೊಂದಲ ಜನರಲ್ಲಿ ಮೂಡಿತ್ತು, ಅದಕ್ಕೆ ಇಂದು ತೆರೆಯನ್ನು ಎಳೆಯಲಾಗಿದೆ.

 

 

 

ಇನ್ನು ಕೆಲವು ತಿಂಗಳುಗಳಿಂದ ಪಿ.ಎಸ್.ಅಯ್ಯೂಬ್‌ @ ಅಟ್ಟಿಕಾ ಬಾಬು @ ಬೊಮ್ಮನಹಳ್ಳಿ ಬಾಬು ಅವರು ಮೊದಲು ಜೆಡಿಎಸ್‌ ಪಕ್ಷದಿಂದ ಟಿಕೇಟ್‌ ತರಲು ಶ್ರಮಿಸಿದ್ದರು, ತದನಂತರ ಕಾಂಗ್ರೆಸ್‌ ನಿಂದ ಇದೀಗಾ ಯಾವ ಪಕ್ಷದಿಂದಲೂ ಟಿಕೇಟ್‌ ಸಿಗದೇ ಇರುವುದರಿಂದ ಅವರು ರಾಜಕೀಯ ಭವಿಷ್ಯ ಏನಾಗುವುದೋ ನೋಡಬೇಕಾಗಿದೆ.

 

 

 

ಇನ್ನುಳಿದಂತೆ ಕಾಂಗ್ರೆಸ್‌ ಪಕ್ಷದಿಂದ ತುಮಕೂರು ನಗರ ಅಭ್ಯರ್ಥಿಗಳಾಗಿ ಅತಿಕ್‌ ಅಹಮ್ಮದ್‌, ರಫೀಕ್‌ ಅಹಮ್ಮದ್‌, ಶಶಿಹುಲಿಕುಂಟೆ, ಫರ್ಹಾನ್‌ ಬೇಗಂ, ಅಟ್ಟಿಕಾ ಬಾಬು ಸೇರಿದಂತೆ ಒಟ್ಟು 8 ಜನ ಅರ್ಜಿಯನ್ನು ಸಲ್ಲಿಸಿದ್ದರು.

 

 

 

 

 

ಆದರೆ ಕೊನೆಗಳಿಗೆಯಲ್ಲಿ ಇಕ್ಬಾಲ್‌ ಅಹಮ್ಮದ್‌ ರವರಿಗೆ ಟಿಕೇಟ್‌ನ್ನು ಕರುಣಿಸಿದೆ ಕಾಂಗ್ರೆಸ್‌ ಪಕ್ಷ, ಇನ್ನು ಈ ಟಿಕೇಟ್‌ ಗಾಗಿ ಅತಿಕ್‌ ಅಹಮ್ಮದ್‌ ಮತ್ತು ಅಟ್ಟಿಕಾ ಬಾಬು ಬಹಳಷ್ಟು ಪೈಪೋಟಿಯನ್ನು ನಡೆಸಿದ್ದರು. ಉಳಿದಂತೆ ಇಕ್ಬಾಲ್‌ ಅಹಮ್ಮದ್‌ ರವರು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕಾರಣ ಅವರಿಗೆ ಟಿಕೇಟ್‌ ಲಭಿಸಿರುವುದು, ತುಮಕೂರಿನ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಹರ್ಷವನ್ನುಂಟು ಮಾಡಿದೆ ಎನ್ನಲಾಗಿದೆ. ಜೊತೆಗೆ ಇಕ್ಬಾಲ್‌ ಅಹಮ್ಮದ್‌ ರವರು ಜೆಡಿಎಸ್‌, ಬಿಜೆಪಿ ಪಕ್ಷದ ಕೆಲ ಮುಖಂಡರೊಂದಿಗೆ ನಿಕಟ ಸಂಪರ್ಕವೊಂದಿರುವುದರಿಂದ ಅವರ ಗೆಲುವಿನ ಹಾದಿಯು ಸುಗಮವಾಗಬಹುದು ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!