ಕೊರಟಗೆರೆ: ತಮ್ಮ ಕ್ಷೇತ್ರದಲ್ಲಿ ತಾವೂ ಗೆಲ್ಲುವುದರ ಜೊತೆಗೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಶತಸಿದ್ದ ಎಂದು ಕೊರಟಗೆರೆ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ. ಜಿ. ಪರಮೇಶ್ವರ್ ಅವರು ಇಂದಿಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ ತಾಲ್ಲೂಕು ಕಚೇರಿಗೆ ತೆರಳಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ಹಾಗೂ ಜನರ ಕ?-ಸುಖಗಳಿಗೆ ಸ್ಪಂದಿಸಿರುವುದೇ ನನ್ನ ಗೆಲುವಿಗೆ ಸಹಕಾರಿಯಾಗಲಿದೆ ಎಂದರು.
ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಉನ್ನತ ಮಟ್ಟದ ನಾಯಕರುಗಳು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುತ್ತಿರುವುದು ಗೆಲುವಿಗೆ ಶುಭ ಸೂಚನೆಯಾಗಿದೆ. ರಾಜ್ಯದಲ್ಲಿ ಈಗ ಕಾಂಗ್ರೆಸ್ ಪಕ್ಷಕ್ಕೆ ಮತ್ತ? ಬಲ ಬಂದಿದೆ ಎಂದು ಅವರು ಹೇಳಿದರು.
ದಲಿತ ಮುಖ್ಯಮಂತ್ರಿ ಕೂಗಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ನಾನು ಈ ಬಗ್ಗೆ ಸ್ಪ?ನೆ ನೀಡಿದ್ದೇನೆ. ರಾಜ್ಯದಲ್ಲಿ ಸಂಪೂರ್ಣ ಬಹುಮತದೊಂದಿಗೆ ಪಕ್ಷವನ್ನು ಅಧಿಕಾರಕ್ಕೆ ತರುವುದೇ ನಮ್ಮೆಲ್ಲರ ಏಕೈಕ ಗುರಿಯಾಗಿದೆ. ಪಕ್ಷ ಬಹುಮತದೊಂದಿಗೆ ಗೆಲುವು ಸಾಧಿಸಿದ ಬಳಿಕ ಮುಖ್ಯಮಂತ್ರಿ ವಿಚಾರ ಮುನ್ನೆಲೆಗೆ ಬರಲಿದೆ ಎಂದರು.
ಸಿಎಂಗೆ ತಿರುಗೇಟು
ಕಾಂಗ್ರೆಸ್ ಮುಳುಗುವ ಹಡಗು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮೇ ೧೩ ರಂದು ಯಾವ ಪಕ್ಷ ಮುಳುಗುವ ಹಡಗು ಎಂಬುದು ತಿಳಿಯುತ್ತದೆ, ಕಾದುನೋಡಿ ಎಂದು ತಿರುಗೇಟು ನೀಡಿದರು. ಈ ಹಿಂದೆ ಲಕ್ಷ್ಮಣ ಸವದಿಯವರು ಸದನದಲ್ಲಿ ಬ್ಲೂ ಫಿಲಂ ನೋಡಿದಂತಹ ಸಂದರ್ಭದಲ್ಲಿ ನೀವೇ ಅವರ ವಿರುದ್ಧ ಟೀಕೆ ಮಾಡಿದ್ರಿ. ಆದರೆ ಈಗ ಅವರ ಮನೆಗೆ ಹೋಗಿ ಅವರನ್ನೆ ಸ್ವಾಗತ ಮಾಡಿರುವುದು ಸರಿಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಪಕ್ಷವೇ ಅವರನ್ನು ಮನ್ನಿಸಿ ಉನ್ನತ ಹುದ್ದೆಗಳನ್ನು ನೀಡಿತ್ತು. ಅವರಿಗೂ ಸಾರ್ವಜನಿಕ ಜೀವನದಲ್ಲಿ ಇಂತಹ ತಪ್ಪುಗಳ ಅರಿವಾಗಿರುವುದರಿಂದ ಮನ್ನಿಸಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಗಮನ ಸೆಳೆದ ರ್‍ಯಾಲಿ:
ನಾಮಪತ್ರ ಸಲ್ಲಿಕೆಗೂ ಮುನ್ನ ಕೊರಟಗೆರೆ ಸರ್ಕಾರಿ ಬಸ್ ನಿಲ್ದಾಣದಿಂದ ವೃತ್ತದ ಮಾರ್ಗವಾಗಿ ಮೆರವಣಿಗೆಯಲ್ಲಿ ಸಹಸ್ರಾರು ಸಂಖ್ಯೆಯ ಜನಸ್ತೋಮದೊಂದಿಗೆ ಸಾಗಿ ಬಂದರು. ಮೆರವಣಿಗೆಯುದ್ದಕ್ಕೂ ಕಾಂಗ್ರೆಸ್ ಬಾವುಟ ಹಿಡಿದ ಕಾರ್ಯಕರ್ತರು ಡಾ.ಜಿ.ಪರಮೇಶ್ವರ ಪರ ಜಯಘೋಷ ಮೊಳಗಿಸಿದರು. ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ ಅಭೂತಪೂರ್ವ ಯಶಸ್ಸು ಸಿಕ್ಕಿದೆ. ನೆರೆದ ಜನಸ್ತೋಮವನ್ನುಕಂಡು ಸ್ವಪಕ್ಷೀಯ ಪಾಳೆಯವೇ ನಿಬ್ಬೆರಗಾಗಿದೆ. ಕ್ಷೇತ್ರದಲ್ಲಿ ಈ ಪರಿಯ ಬೃಹತ್ ರ್‍ಯಾಲಿ ನಡೆಸುವ ಮೂಲಕ ವಿರೋಧಿ ಪಾಳೆಯಕ್ಕೂ ಶಾಕ್ ನೀಡಲಾಗಿದೆ. ಸಹಸ್ರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ನೆರೆದಿದ್ದು ಡಾ. ಪರಮೇಶ್ವರ ಅವರ ಶಕ್ತಿ, ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.
ರ್‍ಯಾಲಿಯಲ್ಲಿ ಕ್ಷೇತ್ರದ ಎಲ್ಲ ಪಂಚಾಯಿತಿಗಳ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು, ಸದಸ್ಯರು ತಾಲ್ಲೂಕು ಮತ್ತು ಜಿಪಂ ಅಧ್ಯಕ್ಷರು, ಉಪಾಧ್ಯಕ್ಷರು ವಿವಿಧ ಘಟಕಗಳ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮುಖಂಡರು, ಕಾರ್ಯಕರ್ತರು ಮತ್ತು ಡಾ.ಜಿ.ಪರಮೇಶ್ವರ ಅಭಿಮಾನಿಗಳು ಭಾಗವಹಿಸಿದ್ದರು.
ಮತದಾರರೇ ನೀಡಿದ ಠೇವಣಿ ಹಣ ನೀಡಿದರು-ತೆಂಕಿನ ಕಾಯಿ ಹೊಡೆದರು:
ಕೊರಟಗೆರೆ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಅವರಿಗೆ ಪಕ್ಷದ ರೈತರು, ಶಿಕ್ಷಕರು, ಅಭಿಮಾನಿಗಳು, ಕಾರ್ಯಕರ್ತರು ಚುನಾವಣೆಗಾಗಿ ಠೇವಣಿ ಹಣ ನೀಡಿ ಹಾರೈಸಿದ್ದಾರೆ. ನಾಮಪತ್ರ ಸಲ್ಲಿಕೆಗೆ ಅಹ್ವಾನ ನೀಡಲು ಕ್ಷೇತ್ರದಲ್ಲಿ ಸಂಚರಿಸಿದಾಗ ಕಾರ್ಯಕರ್ತರು ನಮ್ಮ ದೇಣಿಗೆ ಹಣದಲ್ಲೇ ಠೇವಣಿ ಇಡಿ ಎಂದು ಒತ್ತಾಯ ಮಾಡಿದ್ದನ್ನು ಕಂಡು ಡಾ. ಜಿ.ಪರಮೇಶ್ವರ್ ಅವರು ಭಾವುಕರಾದರು. ನಾಮಪತ್ರ ಸಲ್ಲಿಸುವ ವೇಳೆ ನಮ್ಮ ದುಡ್ಡನ್ನೇ ಠೇವಣಿ ಇಡಬೇಕೆಂದು ಒತ್ತಾಯಿಸಿ, ಕಾಂಗ್ರೆಸ್ ಕಾರ್ಯಕರ್ತರು ದೇಣಿಗೆ ನೀಡಿದ್ದು ಒಂದೆಡೆಯಾದರೆ, ಮೆರವಣಿಗೆಯಲ್ಲಿ ಡಾ. ಜಿ.ಪರಮೇಶ್ವರ ರವರು ಮತ್ತೆ ಗೆಲುವು ಸಾಧಿಸಲಿ ಎಂದು ಅಭಿಮಾನಿಗಳಿಂದ ತೆಂಗಿನ ಕಾಯಿ ಒಡೆದು ತಮ್ಮ ಧನ್ಯತೆ ಮೆರೆದರು. ಕೊರಟಗೆರೆಯ ವಿವಿಧ ಗ್ರಾಮಗಳಲ್ಲಿ ನಡೆದ ಸಭೆಯಲ್ಲಿ ನೂರಾರು ಕಾರ್ಯಕರ್ತರು ದೇಣಿಗೆ ಹಣ ನೀಡಿದ್ದಾರೆ. ಈ ಮೂಲಕ ಪರಮೇಶ್ವರ್ ಅವರಿಗೆ ಶಕ್ತಿ ತುಂಬಲು ಮುಂದಾಗಿದ್ದಾರೆ.
ಸಂಕ್ಷಿಪ್ತ ಪರಿಚಯ:
ರಾಷ್ಟ್ರ ಮತ್ತು ರಾಜ್ಯದ ದಲಿತ ರಾಜಕಾರಣಿಗಳಲ್ಲಿ ಕೇಳಿ ಬರುವ ಪ್ರಮುಖ ಹೆಸರಗಳಲ್ಲಿ ಡಾ.ಜಿ ಪರಮೇಶ್ವರ ಅವರದ್ದು ಅಗ್ರಪಂಕ್ತಿ ಸ್ಥಾನ. ದಲಿತ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ವಿಶ್ವಾಸ ಗಳಿಸಿರುವ ರಾಜಕಾರಣಿಯಾಗಿ ಗಮನ ಸೆಳೆಯುತ್ತಾರೆ. ಕಾಂಗ್ರೆಸ್ ಹಿರಿಯ ನಾಯಕರಾಗಿರುವ ಇವರು, ಸದ್ಯ ರಾಜ್ಯ ಚುನಾವಣಾ ಪ್ರಣಾಳಿಕೆ ಸಮಿತಿಯ ಅಧ್ಯಕ್ಷರಾಗಿದ್ದು, ತುಮಕೂರು ಜಿಲ್ಲೆಯ ಕೊರಟಗೆರೆ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಡಾ.ಜಿ.ಪರಮೇಶ್ವರ ಕರ್ನಾಟಕದ ಕರ್ನಾಟಕದ ೮ನೇ ಉಪಮುಖ್ಯಮಂತ್ರಿ ಗೌರವಕ್ಕೂ ಪಾತ್ರರಾಗಿದ್ದಾರೆ.ಅಲ್ಲದೆ ಸತತ ಎರಡು ಅವಧಿಗೆ ಕೆಪಿಸಿಸಿ ಅಧ್ಯಕ್ಷರಾಗಿದ್ದ ಇವರು ಅತಿ ದೀರ್ಘ ಕಾಲ ಈ ಹುದ್ದೆ ಅಲಂಕರಿಸಿದ ಹೆಗ್ಗಳಿಕೆಯನ್ನು ಹೊಂದಿದ್ದಾರೆ.
ಜೀವನ ಚರಿತ್ರೆ:
1993 ರಿಂದ ವಿವಿಧ ಸರಕಾರಗಳ ಆಡಳಿತಗಳಲ್ಲಿ ಹಲವಾರು ಖಾತೆಗಳ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ೧೯೮೯, ೧೯೯೯ ಮತ್ತು ೨೦೦೪ ರಲ್ಲಿ ಮಧುಗಿರಿ ವಿಧಾನಸಭಾ ಕ್ಷೇತ್ರಗಳು ಹಾಗೂ ಕ್ಷೇತ್ರ ಪುನವಿಂಗಡಣೆಯ ನಂತರ ೨೦೦೮ ರಲ್ಲಿ ಕೊರಟಗೆರೆ ಕ್ಷೇತ್ರವನ್ನು ಪರಮೇಶ್ವರ ಪ್ರತಿನಿಧಿಸಿದ್ದಾರೆ. ರಾಜ್ಯದ ದಲಿತ, ಇತರ ಪ್ರಮುಖ ಸಮುದಾಯಗಳು, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ವಿಶ್ವಾಸ ಗಳಿಸಿದ್ದಾರೆ.
ಡಾ. ಜಿ. ಪರಮೇಶ್ವರ ಅವರು ನಾಡಿನ ಶಿಕ್ಷಣ ಶಿಲ್ಪಿ ಡಾ.ಎಚ್.ಎಂ.ಗಂಗಾಧರಯ್ಯ ಮತ್ತು ಗಂಗಮಾಳಮ್ಮ ದಮಪತಿಗಳ ಎರಡನೇ ಪುತ್ರರಾಗಿ ೧೯೫೧ ಆಗಸ್ಟ್ ೬ ರಂದು ತುಮಕೂರಿನ ಗೊಲ್ಲಹಳ್ಳಿಯಲ್ಲಿ (ಈಗ ಸಿದ್ದಾರ್ಥ ನಗರ ಎಂದು ಕರೆಯುತ್ತಾರೆ) ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಗೊಲ್ಲಹಳ್ಳಿ (ಸಿದ್ದಾರ್ಥ ನಗರ) ಮತ್ತು ಹೆಗ್ಗೆರೆಯ ಸರ್ಕಾರಿ ಶಾಲೆಯಲ್ಲಿ ಮುಗಿಸಿ, ಸಿದ್ಧಾರ್ಥ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮುಂದುವರೆಸಿದರು. ತುಮಕೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನಂತರ ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಕೃಷಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಸ್ನಾತಕೋತ್ತರ ಪದವಿ ಬಳಿಕ, ಪರಮೇಶ್ವರ ಅವರು ಬೆಂಗಳೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾನಿಲಯದಲ್ಲಿ ಸಸ್ಯ ಶರೀರಶಾಸ್ತ್ರ ವಿಭಾಗದಲ್ಲಿ ಸಂಶೋಧನಾ ಸಹಾಯಕರಾಗಿ ಸಂಕ್ಷಿಪ್ತವಾಗಿ ಕೆಲಸ ಮಾಡಿದ್ದರು. ಬಳಿಕ ವಿದೇಶಕ್ಕೆ ತೆರಳಿ ಸಸ್ಯ ಶರೀರಶಾಸ್ತ್ರದಲ್ಲಿ ಅಡಿಲೇಡ್ ವಿಶ್ವವಿದ್ಯಾಲಯದ ವೈಟ್ ಕೃಷಿ ಸಂಶೋಧನಾ ಕೇಂದ್ರದಿಂದ ಪಿಎಚ್‌ಡಿ ಪದವಿ ಪಡೆದರು.
ಉತ್ತಮ ಅಥ್ಲೀಟ್ ಪಟು:
ಅವರು ಚಿಕ್ಕ ವಯಸ್ಸಿನಲ್ಲೇ ಎನ್‌ಸಿಸಿ ಸೇರಿದ್ದ ಇವರು ಉತ್ತಮ ಅಥ್ಲೀಟ್ ಆಗಿದ್ದರು, ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ 100ಮೀಟರ್ ಓಟವನ್ನು ೧೦.೯ ಸೆಕೆಂಡುಗಳಲ್ಲಿ ಮುಗಿಸಿದ ದಾಖಲೆಯನ್ನು ಹೊಂದಿದ್ದಾರೆ. ಅಂತರ ಕಾಲೇಜು/ವಿಶ್ವವಿದ್ಯಾಲಯದಲ್ಲಿ ಗಾಂಧಿ ಕೃಷಿ ವಿಜ್ಞಾನ ಕೇಂದ್ರ ಕಾಲೇಜನ್ನು ಮತ್ತು ರಾಷ್ಟ್ರ ಮಟ್ಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದಾರೆ.
ಶಿಕ್ಷಣ ಕ್ಷೇತ್ರದ ಆಡಳಿತಾಧಿಕಾರಿ:
ಡಾ. ಪರಮೇಶ್ವರ ಅವರು ರಾಜಕೀಯಕ್ಕೆ ಬರುವ ಮುನ್ನ ಆಸ್ಟ್ರೇಲಿಯಾದಿಂದ ಮರಳಿ ತವರಿಗೆ ಬಂದಾಗ ತಂದೆಯೊಂದಿಗೆ ಶಿಕ್ಷನದ ಕ್ರಾಂತಿಗೆ ಹೆಗಲುಕೊಟ್ಟರು. ತುಮಕೂರಿನ ಶ್ರೀ ಸಿದ್ಧಾರ್ಥ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಆಡಳಿತಾಧಿಕಾರಿಯಾಗಿದ್ದರು.
ರಾಜಕೀಯ ಜೀವನ :
1989 ರಲ್ಲಿ, ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಉದ್ಘಾಟನೆಗೆ, ಪರಮೇಶ್ವರ ಅವರು ಶಿಕ್ಷಣ ಸಚಿವ ಎಸ್. ಎಂ. ಯಾಹ್ಯಾ ಮತ್ತು ಶ್ರೀ ಸಿದ್ಧಾರ್ಥ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಆಹ್ವಾನಿಸಲು ಹೋಗಿದ್ದರು. ಇದಾದ ನಂತರ ಅಂದಿನ ಪ್ರಧಾನ ಮಂತ್ರಿ ರಾಜೀವ್ ಗಾಂಧಿ ಪರಮೇಶ್ವರ ಅವರನ್ನು ರಾಜಕೀಯಕ್ಕೆ ಪ್ರವೇಶಿಸುವಂತೆ ಒತ್ತಾಯ ಮಾಡಿದ್ದರು. ಅಂದಿನಿಂದ ಇವರು ರಾಜಕೀಯ ಜೀವನ ಆರಂಭವಾಯಿತು.
ಪ್ರಪ್ರಥಮ ಬಾರಿಗೆ ೧೯೮೯ರಲ್ಲಿ ಮಧುಗಿರಿ ಕ್ಷೇತ್ರದಿಂದ ಪ್ರತಿಸ್ಪರ್ಧಿ ಜನತಾದಳದ ಸಿ.ರಾಜವರ್ಧನ್ ವಿರುದ್ಧ ಗೆದ್ದು, ಶಾಸಕರಾಗಿ ಆಯ್ಕೆಯಾದರು. 1993 ರಲ್ಲಿ ವೀರಪ್ಪ ಮೊಯ್ಲಿ ಸಂಪುಟದಲ್ಲಿ ರೇ? ಸಚಿವರಾಗಿ ಕಾರ್ಯ ನಿರ್ವಹಣೆ ಮಾಡಿದರು. 1999ರಲ್ಲಿ ನಡೆದ ಚುನಾವಣೆಯಲ್ಲಿ 55802 ಮತಗಳ ಅಂತರದಿಂದ ಗೆದ್ದು ದಾಖಲೆ. ಎಸ್.ಎಂ.ಕೃ? ಸಂಪುಟದಲ್ಲಿ ಉನ್ನತ ಶಿಕ್ಷಣ ಖಾತೆ ಜವಾಬ್ದಾರಿ ಮತ್ತು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿದರು.
2004ರಲ್ಲಿ ಮಧುಗಿರಿಯಲ್ಲಿ ಪರಮೇಶ್ವರ್ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಜನತಾ ದಳದ (ಜಾತ್ಯತೀತ) ಕೆಂಚಮಾರಯ್ಯ ಎಚ್ ವಿರುದ್ಧ ಗೆಲುವು ದಾಖಲಿಸಿದರು.
ಬದಲಾದ ಕ್ಷೇತ್ರ:
೧೯೮೯, ೧೯೯೯ ಮತ್ತು ೨೦೦೪ ರಲ್ಲಿ ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಹಾಗೂ ಕ್ಷೇತ್ರ ಪುನವಿಂಗಡಣೆಯ ನಂತರ 2008, 20018 ರಲ್ಲಿ ಕೊರಟಗೆರೆ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. 2013ರ ಚುನಾವಣೆ ಕೊರಟಗೆರೆಯಲ್ಲಿ ಜೆಡಿಎಸ್ ಅಭ್ಯರ್ಥಿ ವಿರುದ್ಧ ಸೋತ ನಂತರ 2014ರ ಜುಲೈ ೧ ರಂದು ವಿಧಾನ ಪರಿ?ತ್ ಸದಸ್ಯರಾಗಿ ಆಯ್ಕೆಯಾಗಿ ೨೦೧೫ರ ಅಕ್ಟೋಬರ್‌ನಲ್ಲಿ ಗೃಹ ಸಚಿವರಾಗಿ ನೇಮಕಗೊಳ್ಳುತ್ತಾರೆ. ಅಷ್ಟ್ರ ಮಟ್ಟಿಗೆ ಅಲ್ಪ ಅವಧಿಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸುತ್ತಾರೆ. ೨೦೧೮ರಲ್ಲಿ ಕೊರಟಗೆರೆ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಕರ್ನಾಟಕದ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಜಿ.ಪರಮೇಶ್ವರ ಅವರು ಕರ್ನಾಟಕದ ೮ನೇ ಉಪಮುಖ್ಯಮಂತ್ರಿಯಾಗಿ ನೇಮಕಗೊಳ್ಳುತ್ತಾರೆ (23 ಮೇ 2018 ರಂದು).