ಯಾವುದೇ ದುಷ್ಠ ಶಕ್ತಿ ಅಡ್ಡಪಡಿಸಿದರೂ ಈ ಭಾರಿ ಗೋವಿಂದರಾಜು ಗೆಲ್ಲುವುದು ಶತಃಸಿದ್ಧ : ಸಿ.ಎಂ.ಇಬ್ರಾಹಿಂ

ತುಮಕೂರು: 40 ವರ್ಷ ಕಾಂಗ್ರೆಸ್ ಕಟ್ಟಿ ಬೆಳೆಸಿದ್ದ ಷಫಿ ಅಹಮದ್ ಜೆಡಿಎಸ್ ಗೆ ಬಂದಿದ್ದು ಪಕ್ಷಕ್ಕೆ ಹೆಚ್ಚು ಬಲ ಬಂದಿದೆ,ಅವರನ್ನು ಮತ್ತು ಅವರ ಸಂಗಡಿಗರನ್ನು ಸ್ವಾಗತಿಸುತ್ತೇನೆ,ಬಿಜೆಪಿಯ ಮೋದಿ ಸರ್ಕಾರ ಈ ಹಿಂದೆ ೩೦೦ ದಿನಗಳಲ್ಲಿ ಒಂದು ಮನೆ ಕಟ್ಟುತ್ತಿತ್ತು ಈಗ 100 ದಿನಕ್ಕೆ ಒಂದು ಮನೆ ಕಟ್ಟುತ್ತಿದೆಯಂತೆ,ಕೋವಿಡ್ ಸಮಯದಲ್ಲಿ ಮೋದಿ ಮತ್ತು ಶಾ ಎಲ್ಲಿದ್ದರು? ಏಕೆ ರಾಜ್ಯಕ್ಕೆ ಬರಲಿಲ್ಲ? ದೇವೇಗೌಡರು ಮುಸ್ಲಿಂ ಸಮುದಾಯಕ್ಕೆ ಶೇ 4 ಮೀಸಲಾತಿ ನೀಡಿದ್ದರು ಆದರೆ ಬೊಮ್ಮಾಯಿ ಸರ್ಕಾರ ಅದನ್ನು ಕಿತ್ತು ಹಾಕಿ ಮುಸ್ಲಿಂರಿಗೆ ಅನ್ಯಾಯ ಮಾಡಿದೆ ಎಂದು ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದರು.

 

 

 

 

 

 

ಅವರು ಇಂದು ತುಮಕೂರು ನಗರದ ಜೆಡಿಎಸ್ ಕಚೇರಿಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಶಾಸಕ ಷಫಿಅಹಮದ್ ರವರನ್ನು ಪಕ್ಷಕ್ಕೆ ಬರಮಾಡಿಕೊಂಡು ಸ್ವಾಗತಿಸುತ್ತಾ ಮಾತನಾಡಿದರು.

 

 

 

 

 

 

 

 

ಕೆಲವು ಮಾಧ್ಯಮಗಳು ಜೆಡಿಎಸ್ ಪಕ್ಷ 25-29 ರಲ್ಲಿ ಮಾತ್ರ ಗೆಲ್ಲುತ್ತದೆ ಎಂದು ಸುಳ್ಳು ಸಮೀಕ್ಷೆ ಹೇಳುತ್ತಿವೆ ಆದರೆ ನಾವು 123 ಕ್ಷೇತ್ರಗಳಲ್ಲಿ ಗೆದ್ದು ಸ್ವತಂತ್ರ ಸರ್ಕಾರ ರಚಿಸಲಿದ್ದೇವೆ,ನಮ್ಮ ಪಕ್ಷದಲ್ಲಿ ಹಣವಿಲ್ಲ ಜನರಿದ್ದಾರೆ,ಜೆಡಿಎಸ್ ಪಕ್ಷ ಮತ್ತು ಹೆಚ್.ಡಿ.ಕುಮಾರಸ್ವಾಮಿ ಗೊಲ್ಲ ಸಮುದಾಯದ ಕೋದಂಡರಾಮಯ್ಯರನ್ನು ಚಿತ್ರದುರ್ಗದಲ್ಲಿ ಎಂ.ಪಿ.ಮಾಡಿದ್ದರು,ಕುರುಬ ಸಮಾಜದ ಸಿ.ಎನ್.ಭಾಸ್ಕರಪ್ಪರನ್ನು ಎಂ.ಪಿ ಮಾಡಿದ್ದರು ಜೆಡಿಎಸ್ ಪಕ್ಷವು ಎಲ್ಲ ಸಮುದಾಯವನ್ನು ಜೊತೆಗೆ ಕರೆದುಕೊಂಡು ಹೋಗುವುದರ ಜೊತೆಗೆ ಎಲ್ಲರಿಗೂ ಸ್ಥಾನಮಾನ ನೀಡಿ ಅತ್ಯಂತ ಗೌರವಯುತವಾಗಿ ನಡೆಸಿಕೊಂಡಿದೆ,ಬಿಜೆಪಿ ಈಗ ಹಿಂದುತ್ವ ಬಿಟ್ಟು ಮೀಸಲಾತಿ ಅಂತ ಹೊರಟಿದೆ,ರಾಜ್ಯದ ನೀರಾವರಿ ಯೋಜನೆಯಲ್ಲಿ ನೂರಾರು ಕೋಟಿ ಲೂಟಿ ಹೊಡೆದಿದ್ದಾರೆ,ನಾನು ಸಿ.ಎಂ.ಆಗಿದ್ದಾಗ 25 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿ ೨೬ ಲಕ್ಷ ರೈತರಿಗೆ ನೆರವಾದೆ, ಆದರೆ ಅದರ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಲೇ ಇಲ್ಲ,ರೈತರು, ಕಾರ್ಮಿಕರು,ಮಹಿಳೆಯರು,ಹಿರಿಯ ನಾಗರೀಕರು ಹೀಗೆ ಎಲ್ಲರಿಗೂ ಉತ್ತಮ ಕಾರ್ಯಕ್ರಮಗಳನ್ನು ಪಂಚರತ್ನದ ಮೂಲಕ ನಾವು ರೂಪಿಸಿದ್ದೇವೆ ಈ ನಿಟ್ಟಿನಲ್ಲಿ ರಾಜ್ಯಕ್ಕೆ ಜೆಡಿಎಸ್ ಅನಿವಾರ್ಯ ಎಂದು ಹೇಳಿದರು.

 

 

 

 

 

 

 

ಜೆಡಿಎಸ್ ರಾಜ್ಯಾಧ್ಯಕ್ಷ ಇಬ್ರಾಹಿಂ ಮಾತನಾಡಿ ಜೆಡಿಎಸ್ ಒಂದು ಕುಟುಂಬದಂತೆ ಎಲ್ಲರನ್ನೂ ಗೌರವಯುತವಾಗಿ ನಡೆಸಿಕೊಳ್ಳುವ ಏಕೈಕ ಪಾರ್ಟಿ,ಜಯಪ್ರಕಾಶ್ ನಾರಾಯಣ್ ಕಂಡ ಕನಸನ್ನು ನನಸು ಮಾಡುವುದೇ ನಮ್ಮ ಗುರಿ,ಹಿಂದೂ-ಮುಸ್ಲಿಂಮರು ಎಂದೂ ಒಂದೇ, ಯಾರ ಮಾತಿಗೂ ಕಿವಿಗೊಡದೆ ಭ್ರಾತೃತ್ವವನ್ನು ಕಾಪಾಡಿ,ದೇವೇಗೌಡರಿಗೆ ತುಮಕೂರು ಜಿಲ್ಲೆಯಲ್ಲಿ ಕಣ್ಣೀರು ಹಾಕಿಸಿದವರು ಮೇ 13 ರಂದು ಕಣ್ಣೀರು ಹಾಕಲಿದ್ದಾರೆ,ಜೆಡಿಎಸ್ ನಲ್ಲಿ ಸ್ಥಾನ ಇಲ್ಲದಿದ್ದರೂ ಮಾನವಿದೆ,ಆದರೆ ಕಾಂಗ್ರೆಸ್ ನಲ್ಲಿ ಸ್ಥಾನವಿದೆ ಆದರೆ ಅವರಿಗೆ ಮಾನವಿಲ್ಲ ಎಂದು ಜರಿದರು, ಮುಸಲ್ಮಾನರು ಜಿಲ್ಲೆಯ ಎಲ್ಲಾ ಜಿಡಿಎಸ್ ಅಭ್ಯರ್ಥಿಗಳಿಗೆ ಮತ ನೀಡಿ ಆಶೀರ್ವದಿಸಬೇಕೆಂದು ಮನವಿ ಮಾಡಿದರು.
ಜೆಡಿಎಸ್ ಸೇರಿದ ಷಫಿಅಹಮದ್ ಮಾತನಾಡುತ್ತಾ ನಾನು 40 ವರ್ಷಗಳಿಂದ ಕಾಂಗ್ರೆಸ್ ಕಟ್ಟಿ ಬೆಳೆಸಿದ್ದೆ ಆದರೆ ನನಗೆ ಕಾಂಗ್ರೆಸ್ ದ್ರೋಹ ಮಾಡಿದೆ, ಯಾವುದೇ ಷರತ್ತಿಲ್ಲದೆ ಪಕ್ಷ ಸೇರಿದ್ದೇನೆ ಹೆಚ್.ಡಿ.ಕೆ ಮತ್ತು ಹೆಚ್.ಡಿ.ಡಿ.ರವರ ಕೈ ಬಲ ಪಡಿಸಲು ಹಗಲು ರಾತ್ರಿ ಪಕ್ಷ ಸಂಘಟನೆ ಮಾಡಲು ಶ್ರಮ ವಹಿಸುವುದಾಗಿ ಹೇಳಿದರು.

 

 

 

 

ಜೆಡಿಎಸ್ ನಗರ ಅಭ್ಯರ್ಥಿ ಗೋವಿಂದರಾಜು ಮಾತನಾಡಿ ನನಗೆ ಈ ಬಾರಿ ಎಲ್ಲರೂ ಆಶೀರ್ವದಿಸಬೇಕು, ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಜೆಡಿಎಸ್ ಬೆಂಬಲಿಸಿ ಮತ್ತು ನಗರವನ್ನು ಅಭಿವೃದ್ಧಿಗೊಳಿಸಲು,ಬಾಕಿ ಇರುವ ಕಾಮಗಾರಿಯನ್ನು ಪೂರ್ಣಗೊಳಿಸಲು,ಕಸಮುಕ್ತಮಾಡಲು,ಕುಡಿಯುವ ನೀರು,ಯುಜಿಡಿ ಮತ್ತಿತರ ಸಮಸ್ಯೆಗಳನ್ನು ನಿವಾರಿಸಲು ನನ್ನನ್ನು ಗೆಲ್ಲಿಸಿ ವಿಧಾನಸಭೆಗೆ ಕಳಿಸಬೇಕೆಂದು ನಗರದ ಮತದಾರರಲ್ಲಿ ಹೆಚ್.ಡಿ.ಕೆ.ಸಮ್ಮುಖದಲ್ಲಿ ಮನವಿ ಮಾಡಿದರು.

 

 

 

 

 

 

ವೇದಿಕೆಯಲ್ಲಿ ಗ್ರಾಮಾಂತರ ಕ್ಷೇತ್ರದ ಶಾಸಕ ಡಿ.ಸಿ.ಗೌರಿಶಂಕರ್,ಜಿಲ್ಲಾಧ್ಯಕ್ಷ ಆರ್.ಸಿ.ಆಂಜನಪ್ಪ,ಮಧುಸೂಧನ್,ಮಾಜಿ ಉಪಮೇಯರ್ ಟಿ.ಆರ್.ನಾಗರಾಜು,ತನ್ವೀರ್,ಅಭ್ಯರ್ಥಿಗಳಾದ ಡಿ.ನಾಗರಾಜಯ್ಯ,ಸುಧಾಕರ್ ಲಾಲ್,ನಾಗರಾಜು,ಉಗ್ರೇಶ್,ಎಂ.ಟಿ.ಕೃಷ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!