ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎನ್.ಗೋವಿಂದರಾಜು ಅವರು ಭಾನುವಾರ ಮಾಜಿ ಪ್ರಧಾನಮಂತ್ರಿ ಹಾಗೂ ಜೆಡಿಎಸ್ ವರಿಷ್ಠರಾದ ಹೆಚ್.ಡಿ ದೇವೇಗೌಡರವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ತುಮಕೂರು ನಗರದಲ್ಲಿ ಈ ಬಾರಿ ಜೆಡಿಎಸ್ ಪಕ್ಷ ಗೆಲ್ಲುವ ಎಲ್ಲಾ ಸಾಧ್ಯತೆ ಇದೆ ಎಂದು ಹೇಳಿದರು.
ಹೆಚ್.ಡಿ ದೇವೇಗೌಡರು ಗೋವಿಂದರಾಜು ಅವರಿಗೆ ಬಿ ಫಾರಂ ನೀಡಿ ಗೆದ್ದು ಬಾ ಗೋವಿಂದರಾಜು ಎಂದು ಆಶೀರ್ವಾದ ಮಾಡಿದರು.
ಇನ್ನು ಯಾವುದೇ ಗೊಂದಲ ಬೇಡ ನೀವೇ ಅಭ್ಯರ್ಥಿ ಯಾವುದೇ ಸುಳ್ಳು ಆಪಾದನೆಗಳಿಗೆ ತಲೆ ಕೇಡಸಿಕೊಳ್ಳಬೇಡಿ ಎಂದು ಕಿವಿ ಮಾತು ಹೇಳಿದ್ದಾರೆ ಎನ್ನಲಾಗಿದೆ