ತುಮಕೂರು – 2023ರ ಸಾರ್ವತ್ರಿಕ ಚುನಾವಣೆ ಗೆ ಈಗಾಗಲೇ ದಿನಾಂಕ ನಿಗದಿಯಾಗಿದ್ದು ಇದುವರೆಗೂ ತುಮಕೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಘೋಷಣೆ ಮಾಡದಿರುವುದು ನಿಜಕ್ಕೂ ಬೇಸರ ಧರಿಸಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಶಫಿ ಅಹಮದ್ ಕಾಂಗ್ರೆಸ್ ಮುಖಂಡರ ವಿರುದ್ಧ ಗರಂ ಆಗಿದ್ದಾರೆ.
ಇನ್ನು ಮಾಜಿ ಶಾಸಕ ರಫೀಕ್ ಅಹಮದ್ ರವರ ನಿವಾಸದಲ್ಲಿ ತುಮಕೂರು ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಗಳು , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಮುಖಂಡರ ನೇತೃತ್ವದಲ್ಲಿ ಸಭೆ ನಡೆಸಿ ಮಾತನಾಡಿರುವ ಅವರು ಇದುವರೆಗೂ ಕಾಂಗ್ರೆಸ್ ಪಕ್ಷದ ಮೊದಲ ಪಟ್ಟಿಯಲ್ಲಿ ತುಮಕೂರು ನಗರ ವಿಧಾನಸಭಾ ಕ್ಷೇತ್ರ ಕ್ಕ್ ಅಭ್ಯರ್ಥಿ ಘೋಷಣೆ ಮಾಡದಿರುವುದು ನಿಜಕ್ಕೂ ಮತದಾರರಿಗೆ ಮಾಡಿರುವ ಅವಮಾನ ಕೂಡಲೇ ಕಾಂಗ್ರೆಸ್ ಹೈಕಮಾಂಡ್ ಎರಡನೇ ಪಟ್ಟಿಯಲ್ಲಿ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯ ಹೆಸರನ್ನು ಘೋಷಣೆ ಮಾಡಬೇಕು ಎಂದು ತಿಳಿಸಿರುವ ಅವರು.
ಇನ್ನು ತುಮಕೂರು ಜಿಲ್ಲೆಗೆ ತುಮಕೂರು ನಗರ ವಿಧಾನಸಭಾ ಕ್ಷೇತ್ರ ಬಹುಮುಖ್ಯ ಕ್ಷೇತ್ರವಾಗಿದ್ದು ತುಮಕೂರು ನಗರ ಎಪ್ಪತ್ತು ಸಾವಿರದಷ್ಟು ಬೃಹತ್ ಅಲ್ಪಸಂಖ್ಯಾತರ ಮತಗಳನ್ನು ಹೊಂದಿರುವ ಕ್ಷೇತ್ರವಾಗಿದ್ದು ಜಿಲ್ಲೆಯ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದು ಈ ಬಾರಿ ಚುನಾವಣೆಗೆ ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂದು ತಿಳಿಸಿದ್ದಾರೆ.
ಇನ್ನು ಮಾಜಿ ಶಾಸಕ ರಫೀಕ್ ಅಹಮದ್ ರವರು ತುಮಕೂರು ವಿಧಾನಸಭಾ ಕ್ಷೇತ್ರದಲ್ಲಿ ಉತ್ತಮವಾಗಿ ಪಕ್ಷ ಸಂಘಟನೆಯ ಕೆಲಸಗಳನ್ನು ನಿರ್ವಹಿಸಿದ ಕೀರ್ತಿ ಅವರದ್ದಾಗಿದ್ದು ಈ ಬಾರಿಯ ಚುನಾವಣೆಗೆ ರಫೀಕ್ ಅಹಮದ್ ರವರಿಗೆ ಟಿಕೆಟ್ ನೀಡಬೇಕು ಎಂದು ಕಾಂಗ್ರೆಸ್ ಹಿರಿಯ ಮುಖಂಡರಾದ ಡಾ .ಜಿ ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಲೀಂ ಅಹಮದ್ ಸೇರಿದಂತೆ ಹಲವು ಮುಖಂಡರಿಗೆ ಮನವಿ ಮಾಡಿದ್ದು ಈಗಾಗಲೇ ಕಾಂಗ್ರೆಸ್ ಪಕ್ಷದಲ್ಲಿ 8ಕ್ಕೂ ಹೆಚ್ಚು ಅಭ್ಯರ್ಥಿಗಳು ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ ಒಂದು ವೇಳೆ ರಫೀಕ್ ಅಹ್ಮದ್ ರವರನ್ನು ಹೊರತುಪಡಿಸಿ ಬೇರೆ ಅಭ್ಯರ್ಥಿಯ ಹೆಸರು ಘೋಷಣೆಯಾಗಿದ್ದೆ ಆದಲ್ಲಿ ನಾವು ಸ್ಥಳೀಯ ಮುಖಂಡರೊಂದಿಗೆ ಚರ್ಚಿಸಿ ನಮ್ಮ ನಿರ್ಧಾರವನ್ನು ತಿಳಿಸಲಾಗುವುದು ಎನ್ನುವ ಮೂಲಕ ಬಂಡಾಯ ಹೇಳುವ ಸಾಧ್ಯತೆಯನ್ನು ಸಹ ರವಾನಿಸಿದ್ದಾರೆ
ಮಾಜಿ ಶಾಸಕ ರಫೀಕ್ ಅಹಮದ್ ರವರು ತುಮಕೂರು ನಗರ ವಿಧಾನಸಭಾ ಕ್ಷೇತ್ರದ 35 ವಾರ್ಡ್ನಲ್ಲಿ ತಮ್ಮ ಹಿಡಿತ ಹಾಗೂ ಉತ್ತಮ ಒಡನಾಟ ಹೊಂದಿರುವ ಅಭ್ಯರ್ಥಿಯಾಗಿದ್ದು ಅವರಿಗೆ ಟಿಕೆಟ್ ಘೋಷಣೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ಪಾಲಿಕೆ ಸದಸ್ಯ ನಯಾಜ್ ಅಹಮದ್ ಮಾತನಾಡಿ ಮಾಜಿ ಶಾಸಕ ರಫೀಕ್ ಅಹಮದ್ ಹಾಗೂ ಶಫಿ ಅಹಮದ್ ರವರ ನೇತೃತ್ವದಲ್ಲಿ ಪಾಲಿಕೆಯ ಚುನಾವಣೆಯನ್ನು ಎದುರಿಸಿ ಹಲವು ಸದಸ್ಯರು ಪಾಲಿಕೆಯ ಗದ್ದುಗೆಯನ್ನು ಏರಲು ಕಾರಣರಾಗಿದ್ದಾರೆ ಹಾಗಾಗಿ ಈ ಬಾರಿಯ ಟಿಕೆಟ್ ರಫಿಕ್ ರವರಿಗೆ ನೀಡಿ ಎಂದು ಒತ್ತಾಯಿಸಿದ್ದಾರೆ.
ಪಾಲಿಕೆಯ ಮಾಜಿ ವಿರೋಧ ಪಕ್ಷದ ನಾಯಕ ಜೆ ಕುಮಾರ್ ಮಾತನಾಡಿ ಈ ಬಾರಿ ತುಮಕೂರು ನಗರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಪಕ್ಷಕ್ಕೆ ಗೆಲ್ಲುವ ಉತ್ತಮ ವಾತಾವರಣ ನಿರ್ಮಾಣವಾಗಿದೆ ಹಾಗಾಗಿ ಸೂಕ್ತ ಅಭ್ಯರ್ಥಿಗೆ ಟಿಕೆಟ್ ನೀಡಿ ಎಂದು ಹೈಕಮಾಂಡ್ ನಾಯಕರಿಗೆ ಮನವಿ ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ರೂಪಶ್ರೀ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಾಜು, ಮೆಹಬೂಬ್ ಪಾಷಾ, ರಾಜಣ್ಣ ,ಧನಲಕ್ಷ್ಮಿ, ಶಿವಣ್ಣ, ಶ್ರೀನಿವಾಸ್, ಅನಿಲ್ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.