ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಮಾಜಿ ಶಾಸಕ ಸುರೇಶ್‌ ಗೌಡ ವಿರುದ್ಧ ದೂರು ಸಲ್ಲಿಕೆ

ತುಮಕೂರು ಗ್ರಾಮಾಂತರ ಬಿಜೆಪಿ ಪಕ್ಷದ ಅಭ್ಯರ್ಥಿಯೆಂದೇ ಬಿಂಬಿತವಾಗಿರುವ ಮಾಜಿ ಶಾಸಕರಾದ ಬಿ.ಸುರೇಶ್‌ ಗೌಡರವರು ಚುನಾವಣಾ ನೀತೆ ಸಂಹಿತೆ ಉಲ್ಲಂಘನೆ ಮಾಡಿರುವ ಘಟನೆ ತುಮಕೂರು ಗ್ರಾಮಾಂತರ ಭೈರಸಂದ್ರದ ಬಳಿ ನಡೆದಿದೆ.

 

 

 

 

 

 

ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನ್ಯ ಸುರೇಶ್‌ ಗೌಡರವರ ಭಾನುವಾರ ರಾತ್ರಿ 11.30 ರಿಂದ ತಡರಾತ್ರಿಯವರೆವಿಗೂ ಗ್ರಾಮಾಂತರ ಭಾಗದ ಭೈರಸಂದ್ರ, ಹರಳೂರು, ಸಿದ್ಧಾಪುರ, ನಾಯಕನಹಳ್ಳಿ, ಕಟ್ಟಿಗೆಗೊಲ್ಲಹಳ್ಳಿ ಇನ್ನೂ ಮುಂತಾದ ಗ್ರಾಮಗಳಲ್ಲಿ ತಡರಾತ್ರಿಯವರೆವಿಗೂ ನೀತಿ ಸಂಹಿತೆ ಉಲ್ಲಂಘನೆ ಮಾಡಿ ಬಹಿರಂಗ ಚುನಾವಣಾ ಪ್ರಚಾರ ಸಭೆಗಳನ್ನು ನಡೆಸಿದ್ದಾರೆಂದು ದೂರು ನೀಡಲಾಗಿದೆ.

 

 

 

 

 

 

ಇನ್ನು ಈ ಕುರಿತು ಭೈರಸಂದ್ರ ಗ್ರಾಮದ ನಿವಾಸಿ ಹಾಗೂ ಜೆಡಿಎಸ್‌ ಮುಖಂಡರಾದ ಜಿ.ಪಾಲನೇತ್ರಯ್ಯ ರವರು ಚುನಾವಣಾ ಫ್ಲೈಯಿಂಗ್‌ ಸ್ಕ್ವಾಡ್‌ಗೆ ಮಾಹಿತಿ ನೀಡಿದಾಗ್ಯೂ ಸರಿಯಾಗಿ ಸ್ಪಂದಿಸದೇ ಚುನಾವಣಾ ಫ್ಲೈಯಿಂಗ್‌ ಸ್ಕ್ವಾಡ್‌ ನಿರ್ಲಕ್ಷ್ಯವನ್ನುವಹಿಸಿರುತ್ತಾರೆ ಎಂಬ ಗಂಭೀರ ಆರೋಪವನ್ನು ಜೆಡಿಎಸ್‌ ಮುಖಂಡರುಗಳು ಮಾಡಿದ್ದಾರೆ, ಅಲ್ಲದೇ ಗ್ರಾಮಾಂತರ ಭಾಗದಲ್ಲಿ ಬಿಜೆಪಿ ಕಾರ್ಯಕರ್ತರು ಅಪಾರವಾದ ಹಣದ ಹೊಳೆಯನ್ನು ಹರಿಸುತ್ತಿದ್ದಾರೆಂದೂ ಸಹ ಜೆಡಿಎಸ್‌ ಕಾರ್ಯಕರ್ತರು ಹೇಳಿಕೆಯನ್ನು ನೀಡಿದ್ದಾರೆ.

 

 

 

 

 

ಈ ಕುರಿತಂತೆ ಹಲವಾರು ಜೆಡಿಎಸ್‌ ಕಾರ್ಯಕರ್ತರನ್ನೊಳಗೊಂಡಂತೆ ಪಾಲನೇತ್ರಯ್ಯರವರೂ ಸಹ ಬಿ.ಸುರೇಶ್‌ ಗೌಡ ಮತ್ತು ಅವರ ಬೆಂಬಲಿಗರು ಪಾಲನೇತ್ರಯ್ಯರವರ ಧರ್ಮಪತ್ನಿಯನ್ನು ಅವಹೇಳನೆ ಮಾಡಿದ್ದಲ್ಲದೇ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆಂದು ಪಾಲನೇತ್ರಯ್ಯರವರು ಗಂಭೀರವಾಗಿ ಆರೋಪಿಸಿದ್ದಾರೆ.

 

 

 

 

 

ಅದೂ ಸಾಲದೆಂಬಂತೆ ಪೊಲೀಸ್‌ ಇಲಾಖೆಯವರು ಸಹ ಸುರೇಶ್‌ ಗೌಡ ಮತ್ತು ಅವರ ಬೆಂಬಲಿಗರಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸುತ್ತಿದ್ದು, ಅದಕ್ಕೆ ನಿದರ್ಶನವೆಂಬಂತೆ ಕ್ಯಾತ್ಸಂದ್ರ ಪೊಲೀಸ್‌ ಠಾಣೆಯ ಉಪ-ನಿರೀಕ್ಷಕರ ವಾಹನ ಚಾಲಕರಾದ ಈಶ್ವರ್‌ ರವರು ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ.

 

 

 

 

 

 

 

 

 

 

ಈ ಎಲ್ಲದರ ಕುರಿತಾಗಿ ಜಿ.ಪಾಲನೇತ್ರಯ್ಯರವರು ಇಂದು ತುಮಕೂರು ತಾಲ್ಲೂಕು ಚುನಾವಣಾಧಿಕಾರಿಗಳಿಗೆ ದೂರನ್ನು ತಮ್ಮ ಅಪಾರ ಬೆಂಬಲಿಗರು ಮತ್ತು ಜೆಡಿಎಸ್‌ ಕಾರ್ಯಕರ್ತರೊಂದಿಗೆ ದೂರನ್ನು ಸಲ್ಲಿಸಿದ್ದು, ಈ ಕುರಿತು ಚುನಾವಣಾಧಿಕಾರಿಗಳು ತಪ್ಪತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆಯನ್ನು ನೀಡಿದ್ದಾರೆಂದು ಪಾಲನೇತ್ರಯ್ಯರವರು ತಿಳಿಸಿದರು.

 

 

 

 

 

 

ಈ ಸಮಯದಲ್ಲಿ ಜಿ.ಪಾಲನೇತ್ರಯ್ಯ, ಹಾಲನೂರು ಅನಂತ್‌, ಬೆಳಗುಂಬ ವೆಂಕಟೇಶ್‌ ಸೇರಿದಂತೆ ಇನ್ನೂ ಹಲವಾರು ಜೆಡಿಎಸ್‌ ಕಾರ್ಯಕರ್ತರು ಭಾಗವಹಿಸಿದ್ದರು.

 

 

Leave a Reply

Your email address will not be published. Required fields are marked *

error: Content is protected !!