ತುಮಕೂರು ಗ್ರಾಮಾಂತರ ಕ್ಷೇತ್ರ ಬೆಳಗುಂಬ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ದೇವಸ್ಥಾನಗಳಲ್ಲಿ ಜೆಡಿಎಸ್ ಚುನಾವಣಾ ಕರಪತ್ರಗಳಿಗೆ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಾಯಿತು.
ಬೆಳಗುಂಬ ಗ್ರಾಮದ ಐತಿಹಾಸಿಕ ಪ್ರಸಿದ್ದ ಸಿದ್ದರಾಮೇಶ್ವರ ದೇವಾಲಯದಲ್ಲಿ ಬೆಳಗುಂಬ ಗ್ರಾಮದ ಜೆಡಿಎಸ್ ಮುಖಂಡರು ಬೆಳಗುಂಬ ಜಿಲ್ಲಾ ಪಂಚಾಯ್ತಿ ಜೆಡಿಎಸ್ ಉಸ್ತುವಾರಿ ಎನ್ ಆರ್ ಹರೀಶ್ ನೇತೃತ್ವದಲ್ಲಿ ಕರಪತ್ರಗಳಿಗೆ ವಿಶೇಷ ಪೂಜೆ ಸಲ್ಲಿಸಿ ಡಿ ಸಿ ಗೌರೀಶಂಕರ್ ಅವರು ಮತ್ತೊಮ್ಮೆ ಗೆಲುವು ಸಾಧಿಸಿ ಸಚಿವರಾಗಲು ಪ್ರಾರ್ಥಿಸಿದರು.
ಇದೇ ವೇಳೆ ಬೆಳಗುಂಬ ಜಿಲ್ಲಾಪಂಚಾಯ್ತಿ ಜೆಡಿಎಸ್ ಉಸ್ತುವಾರಿ ಎನ್ ಆರ್ ಹರೀಶ್ ಮಾತನಾಡಿ ಗ್ರಾಮಾಂತರ ಕ್ಷೇತ್ರದ ಎಲ್ಲಾ ಜಿಲ್ಲಾಪಂಚಾಯ್ತಿ ಉಸ್ತುವಾರಿಗಳು ಚರ್ಚೆ ಮಾಡಿ ಗ್ರಾಮಾಂತ ಕ್ಷೇತ್ರದ ಎಲ್ಲಾ ದೇವಸ್ತಾನಗಳಲ್ಲಿ ಕರಪತ್ರಗಳಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಾಗಿದೆ,ಡಿ ಸಿ ಗೌರೀಶಂಕರ್ ಅವರು ಶಾಸಕರಾಗಿದ್ದ ಅವಧಿಯಲ್ಲಿ ಗ್ರಾಮಾಂತರ ಕ್ಷೇತ್ರ ಸಮಗ್ರವಾಗಿ ಅಭಿವೃದ್ದಿ ಕಂಡಿದೆ,ಅವರು ಮತ್ತೊಮ್ಮೆ ಈ ಭಾಗದಲ್ಲಿ ಗೆಲುವು ಕಂಡು ಸಚಿವರಾಗಬೇಕೆಂಬುದು ಎಲ್ಲರ ಕನಸು,ಈ ಕನಸು ನನಸಾಗಲು ಪ್ರತಿಯೋಬ್ಬ ಜೆಡಿಎಸ್ ಕಾರ್ಯಕರ್ತರೂ ತಮ್ಮ ಶಕ್ತಿ ಮೀರಿ ಶ್ರಮಿಸಬೇಕು,ಇಡೀ ಕ್ಷೇತ್ರದ ಜನತೆ ಆಶೀರ್ವಾದ ಅವರ ಮೇಲೆ ಇರಬೇಕೆಂದು ಮತದಾರರಲ್ಲಿ ಪ್ರಾರ್ಥಿಸಿದರು.
ಜೆಡಿಎಸ್ ಮುಖಂಡರಾದ ಬೆಳಗುಂಬ ವೆಂಕಟೇಶ್, ಕರೇರಂಗಯ್ಯ, ಸ್ವಾಮಿ,ಸಾಹುಕಾರ್ ರಾಜಣ್ಣ,ಬೆಳಗುಂಬ ಗ್ರಾಮಪಂಚಾಯ್ತಿ ಅಧ್ಯಕ್ಷ ಮಂಜುನಾಥ್,ಜಯಣ್ಣ,ಸುಬ್ಬು,ಬಸವರಾಜು, ಟಿ ಡಿ ರಾಜಣ್ಣ ,ಪುಷ್ಪಲತ,ಹಾಗೂ ಸ್ತಳೀಯ ಜೆಡಿಎಸ್ ಮುಖಂಡರು ಉಪಸ್ತಿತರಿದ್ದರು.