ತುಮಕೂರು: ವ್ಯಕ್ತಿಯೊಬ್ಬರಿಂದ ಈ ಸ್ವತ್ತು ತಿದ್ದುಪಡಿ ಮಾಡಿ ಕೊಡಲು 30,000 ರೂ ಲಂಚ ಪಡೆಯುವಾಗ ಸಿ ಎಸ್ ಪುರ ಪಿ ಡಿ ಓ ತುಮಕೂರು ಲೋಕಾಯುಕ್ತ ಪೊಲೀಸರು ಬೀಸಿದ ಬಲೆಗೆ ಸಿಕ್ಕಿ ಬಿದ್ದಿರುವ ಘಟನೆ ಶುಕ್ರವಾರ ನಡೆದಿದೆ.
ಗುಬ್ಬಿ ತಾಲೂಕು ಚಂದ್ರಶೇಖರ ಪುರ (ಸಿ ಎಸ್ ಪುರ) ಗ್ರಾಮ ಪಂಚಾಯಿತಿ ಪಿಡಿಒ ಕಾಂತರಾಜು ಲಂಚ ಪಡೆದು ಸಿಕ್ಕಿರುವ ವ್ಯಕ್ತಿ.
ಸಿಎಸ್ ಪುರ ಗ್ರಾಮದ ಬಿ ಪಿ ಸಿದ್ದಗಂಗಪ್ಪ ಎಂಬುವರು ಈ ಸ್ವತ್ತು ತಿದ್ದುಪಡಿಗಾಗಿ ಅರ್ಜಿ ಸಲ್ಲಿಸಿದ್ದರು. ತಮ್ಮ ಕೆಲಸ ಮಾಡಿಕೊಡಲು 40,000 ನೀಡಬೇಕೆಂದು ಪಿಡಿಒ ಕಾಂತರಾಜು ಕೇಳಿದರಂತೆ, ಮಾತುಕತೆ ನಡೆದು ರೂ.30000 ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಲಂಚ ಪಡೆಯುವಾಗ ತುಮಕೂರು ಲೋಕಾಯುಕ್ತ ಪೊಲೀಸರ ಬೆಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ ಡಿವೈಎಸ್ಪಿ ಗಳಾದ ಮಂಜುನಾಥ್, ಹರೀಶ್, ಇನ್ಸ್ಪೆಕ್ಟರ್ಗಳಾದ ಶಿವರುದ್ರ ಮೇಟಿ, ಸತ್ಯನಾರಾಯಣ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಪ್ರಕರಣ ದಾಖಲಿಸಿಕೊಂಡಿರುವ ಲೋಕಾಯುಕ್ತ ಪೊಲೀಸರು ಪಿಡಿಒ ಕಾಂತರಾಜು ರವರನ್ನು ಬಂಧಿಸಿ ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.