ತುಮಕೂರಿನ ರಕ್ಷಿತಾ ಅರಣ್ಯವಾದ ದೇವರಾಯನದುರ್ಗದ ಕಾಡಿನಿಂದ ತಪ್ಪಿಸಿಕೊಂಡು ಅಲ್ಲಿನ ಸುತ್ತಮುತ್ತಲ ಗ್ರಾಮಗಳ ಕಣ್ಣಿಗೆ ಆಗಾಗ್ಗೆ ಕಾಣ ಸಿಗುತ್ತಿದ್ದ ಚಿರತೆಯೊಂದು ಇಂದು ಮುಂಜಾನೆ 3.30ರ ಸರಿಸುಮಾರಿಗೆ ಕುಂದೂರಿನ ಬಳಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ.
ಬಹುದಿನಗಳಿಂದ ಈ ಚಿರತೆ ಇಲ್ಲಿನ ಅಕ್ಕ-ಪಕ್ಕದ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದ್ದ ಚಿರತೆ ಇದೀಗ ಸರೆಸಿಕ್ಕಿದ್ದು ಗ್ರಾಮಸ್ಥರಲ್ಲಿ ಆತಂಕವನ್ನು ದೂರ ಮಾಡಿದೆ ಎನ್ನಲಾಗಿದೆ.
ಇನ್ನು ಅರಣ್ಯ ಇಲಾಖೆಯ ಸಿಬ್ಬಂದಿಯವರು ಇದು 4 ವರ್ಷದ ಗಂಡು ಚಿರತೆ ಎಂದು ಖಚಿತ ಪಡಿಸಿದ್ದಾರೆ.