ಜೆಡಿಎಸ್ ಪಕ್ಷಕ್ಕೆ ಗುಡ್ ಬೈ ಹೇಳಿ ತಮ್ಮ ಅಸಮಧಾನ ಹೊರ ಹಾಕಿದ ಬೆಳ್ಳಿ ಲೋಕೇಶ್

ಇಂದು ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಜೆಡಿಎಸ್ ನ ಹಿರಿಯ ನಾಯಕ ಬೆಳ್ಳಿ ಲೋಕೇಶ್ ಹಾಗೂ ಹಿರಿಯ ಮುಖಂಡ ದೇವರಾಜು ಇವರುಗಳು ಮನ ನೊಂದು ರಾಜೀನಾಮೆ ನೀಡಿರುವಿದಾಗಿ ಹೇಳಿದರು.

 

 

 

 

ನಾನು ಒಬ್ಬ ರೈತ ಕುಟುಂಬ ದಿಂದ ಬಂದಂತಹ ವ್ಯಕ್ತಿ ಅಂಬೇಡ್ಕರ್ ಅವರ ತತ್ವ ಸಿದ್ದಂತಾಗಳನ್ನು ನಂಬಿ ಅನುಸರಿಸುವ ವ್ಯಕ್ತಿ ನಾನು ಎಂದು ಹೇಳಿಕೊಂದಾರಲ್ಲದೆ ಈ ಪತ್ರಿಕಾಗೋಷ್ಠಿ ತುಂಬಾ ನೋವಿನಲ್ಲಿ ಮಾಡುತ್ತಿದ್ದೇನೆ.

 

 

 

ನಾನು ಕುಣಿಗಲ್ ನಲ್ಲಿ ವಿದ್ಯಾರ್ಥಿ ಜನತಾದಾಳ ಕಾರ್ಯಕರ್ತನಾಗಿ ರಾಜಕೀಯಕ್ಕೆ ಬಂದ ನಾನು ತುಮಕೂರಿನಲ್ಲಿ ಬೆಳ್ಳಿ ಬ್ಲಡ್ ಬಂಕ್ ತೆರೆದು ಸೇವೆ ಸಲ್ಲಿಸುತ್ತ ಬಂದೆ ನನ್ನ ಪರಿಶ್ರಮದಿಂದಲೇ ತುಮಕೂರಿನಲ್ಲಿ ಡಯಾಲಿಸಿಸ್ ಸೆಂಟರ್ ತೆರೆದು ಹಲವಾರು ರೋಗಿಗಳಿಗೆ ಉಚಿತ ರಕ್ತವನ್ನು ನೀಡಿದ್ದೇವೆ.

 

 

 

 

 

ನನಗೆ ಜೆಡಿಎಸ್ ಪಕ್ಷದಲ್ಲಿ ಹಲವಾರು ಹುದ್ದೆಗಳನ್ನು ನೀಡಿದೆ ನನ್ನನು ರಾಜ್ಯ ಮಟ್ಟದಲ್ಲಿ ಗುರುತಿಸಿ ಸದಸ್ಯತ್ವ ಅಭಿಯಾನಾದ ಜವಾಬ್ದಾರಿ ನನಗೆ ಕೊಟ್ಟಿದ್ದರು ಅದನ್ನು ನಾನು ನಿಷ್ಠಾವಂತನಾಗಿ ಕೆಲಸ ಮಾಡಿ ಅತ್ಯಂತ ಅಧಿಕ ಸದಸ್ಯತ್ವ ಮಾಡಿ ಶಬಸಗಿರಿ ಕೊಟ್ಟು ನನಗೆ ಹುರಿದುಂಬಿಸಿತು.

 

 

 

 

ನಂತರ ನನಗೆ ಕೋಲಾರ ಚಿಕ್ಕಬಳ್ಳಾಪುರ ಚುನಾವಣೆ ಉಸ್ತುವಾರಿ ನೀಡಿದ್ದರು ಅದನ್ನು ಯಶಶ್ವಿಪೂರ್ಣವಾಗಿ ನಿರ್ವಹಣೆ ಮಾಡಿದ್ದ ಪ್ರಯುಕ್ತ ನನಗೆ ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ಥಾನ ಕೊಟ್ಟು ಸಹಕಾರ ಮಾಡಿತ್ತು ನಾನು ರೂಪುರೇಷೆ ಮಾಡಿಕೊಟ್ಟಂತೆ ಕುಮಾರಣ್ಣನವರು ಪ್ರತ್ಯೇಕ ಮತ್ತು ಮಹತ್ತರವಾದ ತರಬೇತಿ ಶಿಬಿರವನ್ನು ಆಯೋಜಿಸಿ ಎಲ್ಲಾ ಶಾಸಕ ಆಕಾಂಕ್ಷಿಗಳು ಮತ್ತು ಪ್ರಮುಖ ಮುಖಂಡರಿಗೆ ವಿಶೇಷ ಕಾರ್ಯಗಾರವನ್ನು ಆಯೋಜಿಸಿ ಯಶಸ್ವಿಪೂರ್ಣವಾಗಿ ನಡೆಸಿಕೊಟ್ಟರು.

 

 

 

 

 

 

 

 

 

 

 

ಈ ಹಿಂದೆ ಅಂದರೆ 2013 ಮತ್ತು 2018ರ ಚುನಾವಣೆಗಳಲ್ಲಿ ಹಲವಾರು ಹಿರಿಯ ಮುಖಂಡರನ್ನು ವಿಚಾರಿಸಲಾಗಿ ಅವರು ಯಾರು ಚುನಾವಣೆಯಲ್ಲಿ ನಿಲ್ಲುವುದಿಲ್ಲ ಎಂದು ಖಾತಾರಿ ಆದಮೇಲೆ ನಾನು ನಿಲ್ಲಲು ಹೊರಟೆ ಆದರೆ ಕೊನೆ ಗಳಿಗೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡ ಗೋವಿಂದರಾಜು ಅವರನ್ನು ಕಾಂಗ್ರೆಸ್‌ ಪಕ್ಷದಿಂದ ನಮ್ಮ ಪಕ್ಷಕ್ಕೆ ಕರೆ ತಂದು ಅವರಿಗೆ ಟಿಕೆಟ್ ಕೊಟ್ಟರು, ಇದರಿಂದ ಬೇಸರಗೊಂಡಿದ್ದರೂ ಸಹ ಮಾಜಿ ಪ್ರಧಾನಿಗಳು ದೇವೇಗೌಡ ಅಪ್ಪಾಜಿ ಹಾಗೂ ಕುಮಾರಣ್ಣನವರ ವರ ಆದೇಶದಂತೆ ನಾನು ಸಹಕಾರ ಮಾಡಿದೆ ಅಲ್ಲದೇ ನಮ್ಮ ಸಮುದಾಯದ ಮುಖಂಡರನ್ನೊಳಗೊಂಡಂತೆ ಪಕ್ಷ ಸಂಘಟಿಸಿ, ಅವರಿಗೆ ಸಕಲ ರೀತಿಯಲ್ಲಿ ಶಕ್ತಿಯನ್ನು ತುಂಬಿ ಸಹಕರಿಸಿದ್ದೆ, ಆದರೆ ಅವರು ನಮ್ಮ ಸಮುದಾಯದವರನ್ನು ಹಗುರವಾಗಿ ಮಾತನಾಡಿದರಲ್ಲದೇ ನಮ್ಮನ್ನೇ ಕಡೆಗಣಿಸಿದರು. ಆದರೂ ನಾನು ತಲೆಕೆಡಿಸಿಕೊಳ್ಳದೇ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇ.

 

 

 

 

 

 

 

ಆದರೆ ನನಗೆ ಕಳೆದ ಮೂರು ತಿಂಗಳುಗಳಿಂದ ತುಮಕೂರು ಜಿಲ್ಲಾ ಜೆಡಿಎಸ್  ಕಡೆಗಣಿಸಿದ ಪ್ರಯುಕ್ತ ನಾನು ರಾಜೀನಾಮೆ ನೀಡಲು ಪ್ರಮುಖ ಕಾರಣವೆಂದು ಹೇಳಿದರು, ಅಲ್ಲದೆ ನಾನು ನಿಯತ್ತಾಗಿ ಕೆಲಸ ಮಾಡಿದ್ದರಿಂದ ನನಗೆ ಅನ್ಯಾಯವಾಗಿದೆ ಆದುದರಿಂದಲೇ ಈ ರೀತಿಯಾದ ನಿರ್ಧಾರಕ್ಕೆ ಬಂದೆ ಇತ್ತೀಚೆಗೆ ನಿಖಿಲ್ ಅವರು ತುಮಕೂರಿಗೆ ಬಂದಾಗ ನನ್ನನ್ನು ಪರಿಗಣನೆಗೆ ತೆಗೆದುಕೊಳ್ಳದೇ, ವಿಶ್ವಾಸವೇ ವಿರಿಸದೇ ನನ್ನನು ಸಂಪೂರ್ಣವಾಗಿ ನಿರ್ಲಕ್ಷಿಸಿರುವುದು ಆಗ ನನಗೆ ಸಂಪೂರ್ಣವಾಗಿ ತಿಳಿಯಿತು.

 

 

 

 

 

ಇನ್ನು ಹೇಳುವುದಕ್ಕೆ ಆಗದ ಅನೇಕ ಕಾರಣಗಳಿಂದಾಗಿ ನಾನು ತುಮಕೂರು ಜಿಲ್ಲಾ ಜೆಡಿಎಸ್‌ ಅಧ್ಯಕ್ಷರ ಮುಖಾಂತರವಾಗಿ ರಾಜ್ಯಾಧ್ಯಕ್ಷರಿಗೆ ಈಗಾಗಲೇ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದು, ನಾನು ಯಾವುದೇ ಒತ್ತಡಕ್ಕೂ ಮಣಿಯದೇ ನನ್ನ ನಿಲುವು ಬದಲಿಸಿಕೊಳ್ಳದೇ ಇನ್ನೊಂದೆರಡು ದಿನಗಳಲ್ಲಿ ನನ್ನ ರಾಜಕೀಯ ನಿಲುವನ್ನು ವ್ಯಕ್ತಪಡಿಸುತ್ತೇನೆಂದರು.

Leave a Reply

Your email address will not be published. Required fields are marked *

error: Content is protected !!