ದೇವೇಗೌಡ್ರು ತುಮಕೂರಲ್ಲಿ ಸೋಲಲು ಬೆಳ್ಳಿ ಲೋಕೇಶ್ ಅವರೇ ನೇರ ಕಾರಣ;. ಮಾಜಿ ಉಪ ಮಹಾ ಪೌರ ನಾಗರಾಜು ವಾಗ್ದಾಳಿ

ತುಮಕೂರು ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ನಾಗರಾಜು ಅವರು ನಮ್ಮ ಪಕ್ಷದಿಂದ ಹೊರ ಹೋಗಿರುವ ಬೆಳ್ಳಿ ಲೋಕೇಶ್ ಮತ್ತು ಕೃಷ್ಣಪ್ಪ ಅವರು ನಮ್ಮ ಪಕ್ಷದ ವಿರುದ್ಧ ವಾಗಿ ಹಗುರವಾಗಿ ಮಾತನಾಡುವುದು ಬಿಟ್ಟು ನಮ್ಮ ಪಕ್ಷದಲ್ಲಿ ಬಣ್ಣದ ಮಾತುಗಳನ್ನು ಹಾಡಿ ನಾಯಕರನ್ನ ನಂಬಿಸಿದ್ದು ಸಾಕು ಇವಾಗ ಬಿಜೆಪಿಯಲ್ಲಿ ಸಂಘಟನೆ ಮಾಡಿ ಅದು ಬಿಟ್ಟು ಸುಮ್ಮನೆ ಹಗುರವಾಗಿ ನಮ್ಮ ಪಕ್ಷದ ವಿರುದ್ಧ ಮಾತನಾಡುವುದು ಬಿಡಿ ಎಂದರು.

 

 

ನಿಮಗೆ ರಾಜಕೀಯ ಭವಿಷ್ಯ ಕೊಟ್ಟಿದು ಜೆಡಿಎಸ್ ಪಕ್ಷ ಇಲ್ಲಿ ಹಲವಾರು ಸ್ಥಾನ ಕೊಟ್ಟು ಗೌರವಿಸಿದೆ ಆದರೆ ನಮ್ಮ ನಾಯಕರು ಮತ್ತು ಪಕ್ಷದ ಮೇಲೆ ಅದರಲ್ಲೂ ನಮ್ಮ ಕುಮಾರಣ್ಣನ ಮೇಲೆ ಟೀಕೆ ಸಲ್ಲ. ಮತ್ತೊಮ್ಮೆ ನಮ್ಮ ನಾಯಕರ ವಿರುದ್ಧ ಮಾತನಾಡಿದರೆ ನಿಮ್ಮ ನಿಜವಾದ ಬಣ್ಣ ಆಚೆ ತರಬೇಕಾಗುತ್ತದೆ, ನೀವು ದೇವೇಗೌಡರು ಚುವನವಣೆಯಲ್ಲಿ ಮಾಡಿರುವ ಮೋಸ ವಂಚನೆ ಏನು ಅಂತ ನಮ್ಮ ಪಕ್ಷದ ಎಲ್ಲರಿಗೂ ಗೊತ್ತಿದೆ ಅದನ್ನು ನಾವು ಹೆಚ್ಚು ಹೇಳಬೇಕಾಗಿಲ್ಲ ಎಂದರು.

 

 

 

ನಮ್ಮ ಪಕ್ಷದಲ್ಲಿರುವಾಗ ಇದೆ ಸುರೇಶ್ ಗೌಡ ಬಗ್ಗೆ ಅವಾಚ್ಯ ಶಬ್ದಗಳನ್ನು ಬಳಸಿ ಮಾತಾಡಿರುವುದು,  ಇನ್ನು ಸಾಕಷ್ಟು ಕೆಟ್ಟದಾಗಿರುವ ಪದಗಳನ್ನು ಬಳಸಿ  ಮಾತನಾಡಿದ್ದಾರೆ. ನಮ್ಮ ನಾಯಕರುಗಳು, ಪಕ್ಷದ ಬಗ್ಗೆ ಮುಂದೆ ಈ ರೀತಿಯಾಗಿ ಮಾತನಾಡಿದರೆ ನಿಮ್ಮ ಚರಿತ್ರೆ ಬಯಲಿಗೆಳೆಯಬೇಕು.

 

 

 

 

 

ಮುಂದುವರೆದು ಕೃಷ್ಣಪ್ಪ ಬಗ್ಗೆ ಮಾತನಾಡುತ್ತ ನಮ್ಮ ತಿಗಳ ಸಮುದಾಯಕ್ಕೆ ಜಿಲ್ಲಾ ಪಂಚಾಯತ್ ಸ್ಥಾನ ಕೊಟ್ಟಿದ್ದೇವೆ ಇನ್ನು ಹಲವಾರು ಸ್ಥಾನ ಕೊಟ್ಟಿದ್ದೇವೇ ನಮ್ಮ ಪಕ್ಷ ಸರ್ವ ಜನಾಂಗದ ನಾಯಕರುಗಳಿಗೆ ಹಲವಾರು ಸ್ಥಾನ ಮಾನ ನೀಡಿರುವ ಪಕ್ಷ ಎಂದರೆ ನಮ್ಮ ಜೆಡಿಎಸ್ ಪಕ್ಷ ನೀಡಿದೆ. ಅಂತಹದರಲ್ಲಿ ನೀವು ನಮ್ಮ ಪಕ್ಷದ ಕುರಿತು ನಮ್ಮ ನಾಯಕರ ಕುರಿತು ನೀವು ಬೇರೆ ಪಕ್ಷಕ್ಕೆ ಹೋದ ಮಾತ್ರಕ್ಕೆ ಈ ರೀತಿಯಾಗಿ ಮಾತನಾಡಿರುವುದು ಸರಿಯೇ? ಎಂದು ಪ್ರಶ್ನಿಸಿದ್ದಾರೆ.

 

 

 

 

ನಮ್ಮ ಪಕ್ಷಕ್ಕೆ ಬಂದ ಹತ್ತು ವರ್ಷದಲ್ಲಿಯೇ ಅವರಿಗೆ ರಾಜ್ಯ ಮಟ್ಟದ ಸ್ಥಾನಮಾನ ಕೊಟ್ಟಿತು ಆದರೆ ಅವರು ಇಂದು ಬಿಜೆಪಿ ಸೇರಿ ನಮ್ಮ ಪಕ್ಷದ ವಿರುದ್ಧ ಈ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ ನಿಮ್ಮ ಬಣ್ಣ ಕಳಚಿದೆ ನೀವು ಪಕ್ಷಕ್ಕೆ ಮಾಡಿರುವ ಅನ್ಯಾಯ ಎಲ್ಲಾ ಜನರಿಗೆ ಗೊತ್ತಿದೆ.

 

 

ನಿಮಗೆ ಟಿಕೆಟ್ ದೊರೆಯದೆ ಇರಲು ಕಾರಣ ಪಕ್ಷಕ್ಕೆ ನಿಮ್ಮ ಕೊಡುಗೆ ಇಲ್ಲದೆ ಇರುವುದೇ ಕಾರಣ ನೀವು 145 ಬೂತ್ ಏಜೆಂಟ್ ಗಳಿಗೆ ಮಾಡಿರುವ ಅನ್ಯಾಯವೇ ದೇವೇಗೌಡ ಅಪ್ಪಾಜಿ ಸೋಲಲು ನೇರ ಕಾರಣ ದೇವೇಗೌಡರಿಗೆ ಬೆಳ್ಳಿ ಲೋಕೇಶ್ ಮೋಸ ಮಾಡಿದ್ದು ತಡವಾಗಿ ತಿಳಿದ ಕಾರಣ ಅವರಿಗೆ ಮುಜುಗರವಾಗಿ ಅವರು ಪಕ್ಷ ಬಿಡಲು ಕಾರಣವಯಿತು.

 

 

 

 

ನೀವು ಬಿಜೆಪಿ ಪಕ್ಷಕ್ಕೆ ಹೋಗಬೇಕಾದರೆ ಎಷ್ಟು ಜನ ಮುಖಂಡರನ್ನು ಕರೆದು ಕೊಂಡು ಹೋದಿರಿ ನಿಮ್ಮೊಂದಿಗೆ ಬೆರಳಿಣಿಕೆ ಅಷ್ಟು ಜನ ಮಾತ್ರ ಹೋಗಿರಬಹುದು ಅಷ್ಟೇ ನೀವು ಒಬ್ಬ ನಾಯಕರೇ ಎಂದು ಬೆಳ್ಳಿ ಲೋಕೇಶ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

 

 

 

ಪಾಲಿಕೆ ಸದ್ಯಸ್ಯ ಶ್ರೀನಿವಾಸ್ ಮಾತನಾಡಿ ಅವರು ಯಾವ ಪಕ್ಷಕ್ಕದರೂ ಹೋಗಲಿ ನಮಗೆ ಬೇಸರವಿಲ್ಲ ಆದರೆ ನಮ್ಮ ನಾಯಕರು ಮತ್ತು ಪಕ್ಷದ ಬಗ್ಗೆ ಹಗುರವಾಗಿ ಮಾತಾಡುವುದು ಸಲ್ಲ ಎಂದರು.

 

 

 

ಪತ್ರಿಕಾಗೋಷ್ಟಿಯಲ್ಲಿ ಮಾಜಿ ಉಪ ಮಹಾ ಪೌರರಾದ ನಾಗರಾಜು, ಧರಣೇಂದ್ರ ಕುಮಾರ್ ರಾಜು, ಶ್ರೀನಿವಾಸ್, ಮಂಜುನಾಥ್ ಹೆಚ್ ಡಿ ಕೆ, ವಿಜಿ ಗೌಡ್ರು, ಲೀಲಾವತಿ, ಇಸ್ಮಾಯಿಲ್, ಕೆಂಪರಾಜು, ಪ್ರಸನ್ನ ಪಚ್ಚಿ ಹಾಗೂ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!