ನಾನು ರಫೀಕ್‌ ಸೋಲ್ತಾರೆ ಅಂತಾ ಕಳೆದ ಭಾರಿ ಚುನಾವಣೆಯಲ್ಲಿಯೇ ಹೈಕಮಾಂಡ್‌ಗೆ ಮಾಹಿತಿ ನೀಡಿದ್ದ : ಅತಿಕ್‌ ಅಹಮ್ಮದ್

ತುಮಕೂರು : 2023ರ ವಿಧಾನಸಭಾ ಚುನಾವಣೆಯ ಪ್ರಯುಕ್ತ ಕಾಂಗ್ರೆಸ್‌ ಪಕ್ಷದಿಂದ ಟಿಕೇಟ್‌ ಗಳು ಘೋಷಣೆಯಾದ ಹಿನ್ನಲೆಯಲ್ಲಿಯೇ ರಾಜ್ಯಾದ್ಯಂತ ಭಿನ್ನಮತ ಸ್ಪೋಟವಾಗುತ್ತಿದೆ, ಅದೇ ರೀತಿಯಲ್ಲಿಯೇ ತುಮಕೂರಿನ ಕಾಂಗ್ರೆಸ್‌ ಪಾಳೆಯದಲ್ಲಿಯೂ ಸಹ ಭಿನ್ನಮತ ಸ್ಪೋಟವಾಗಿದ್ದು, ನೆನ್ನೆಯಷ್ಟೇ ಮಾಜಿ ಶಾಸಕ ಷಫೀ ಅಹಮ್ಮದ್‌ ರವರು ತಮ್ಮ ಕಾಂಗ್ರೆಸ್‌ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆಯನ್ನು ನೀಡುವುದಾಗಿ ತಿಳಿಸಿದ್ದರು, ಅಲ್ಲದೇ ಶೀಘ್ರದಲ್ಲಿಯೇ ರಫೀಕ್‌ ಅವರು ಸಹ ಕಾರ್ಯಕರ್ತರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದರು.

 

 

 

 

 

ಅದೇ ಮಾದರಿಯಲ್ಲಿಯೇ ತುಮಕೂರು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರು, ತುಮಕೂರು ನಗರ ಶಾಸಕ ಸ್ಥಾನದ ಪ್ರಬಲ ಆಕಾಂಕ್ಷಿಯೂ ಆಗಿದ್ದ ಅತಿಕ್‌ ಅಹಮ್ಮದ್‌ ರವರು ಸಹ ಇಂದು ತಮ್ಮ ಅಪಾರ ಬೆಂಬಲಿಗರೊಂದಿಗೆ ತಮ್ಮ ಅಸಮಧಾನವನ್ನು ಹೊರಹಾಕಿದ್ದಾರೆ, ಏನೆಂದರೆ ತಾನು ಕಳೆದ ಭಾರಿಯ ಚುನಾವಣೆಯಲ್ಲಿ ಪ್ರಬಲ ಅಕಾಂಕ್ಷಿಯಾಗಿದ್ದೆ, ಆ ಸಮಯದಲ್ಲಿ ಡಾ. ಎಸ್.ರಫೀಕ್‌ ಅಹಮ್ಮದ್‌ ರವರಿಗೆ ಟಿಕೇಟ್‌ ನೀಡಿದರೆ ಅವರು ಸೋಲುತ್ತಾರೆಂಬ ಮುನ್ಸೂಚನೆಯನ್ನು ಪಕ್ಷದ ವರಿಷ್ಠರಿಗೆ ನೀಡಿದ್ದೆ, ಆದರೆ ಅವರು ಹಾಲಿ ಶಾಸಕರಾಗಿರುವ ಕಾರಣ ಈ ಭಾರಿಯ ಅವರಿಗೆ ಕೊಡಲೇಬೇಕಾದ ತೀರ್ಮಾನವನ್ನು ಹೈಕಮ್ಯಾಂಡ್‌ ಸೂಚಿಸಿದೆ ಹಾಗಾಗಿ ನೀಡಲೇ ಬೇಕು ಮುಂದಿನ ದಿನಗಳಲ್ಲಿ ತಮಗೆ ಶಾಸಕ ಸ್ಥಾನದ ಟಿಕೇಟ್‌ ನೀಡುವುದಾಗಿ ಅಂದೇ ಹೇಳಿದ್ದರು, ಅದರಂತೆಯೇ ನಾನು ಬಹಳಷ್ಟು ವರ್ಷಗಳಿಂದ ಪಕ್ಷವನ್ನು ಸಂಘಟಿಸುವಲ್ಲಿ ಶ್ರಮಿಸುತ್ತಾ ಬರುತ್ತಿದ್ದೇನೆಂದು ಹೇಳಿದರು.

 

 

 

 

 

 

 

 

 

 

 

ಮುಂದುವರೆದು “ನಾ ನಾಯಕಿ ಕಾರ್ಯಕ್ರಮ”, ಕಾಂಗ್ರೆಸ್‌ ಗ್ಯಾರಂಟಿ ಕಾರ್ಡ್‌, ಕಾಂಗ್ರೆಸ್‌ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನ ಸೇರಿದಂತೆ ಇನ್ನೂ ಹತ್ತು ಹಲವಾರು ಸಂಘಟನಾತ್ಮಕ ಕಾರ್ಯಗಳನ್ನು ನಾನು ನನ್ನ ಸ್ವಂತ ಖರ್ಚಿನಿಂದ ನಿಭಾಯಿಸಿದ್ದೇನೆ, ಅಲ್ಲದೇ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ, ತುಮಕೂರು ನಗರದಲ್ಲಿನ ರಸ್ತೆ ಗುಂಡಿಗಳ ಅವ್ಯವಸ್ಥೆಯ ಬಗ್ಗೆ ಹೋರಾಟ ಸೇರಿದಂತೆ ಹಲವಾರು ಕಾರ್ಯಗಳಲ್ಲಿ ತೊಡಗಿಸಿಕೊಂಡಿರುತ್ತೇನೆ.

 

 

 

 

 

 

ಕೋವಿಡ್‌ ಮಹಾಮಾರಿಯ ಸಂದರ್ಭದಲ್ಲಿಯೂ ಸಹ ಬಹಳಷ್ಟು ನಿರ್ಗತಿಕರಿಗೆ ಆಹಾರ ಧಾನ್ಯ ವಿತರಣೆ, ಔಷಧಿಗಳ ವಿತರಣೆ ಸೇರಿದಂತೆ ಹತ್ತು ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡಿರುತ್ತೇನೆ ಆದರೆ ಅವುಗಳನ್ನು ನಾನು ಎಲ್ಲಿಯೂ ಹೇಳಿಕೊಂಡಿಲ್ಲ ಕಾರಣ ಮಾಡಿರುವ ಸಹಾಯ ಸಹಕಾರವನ್ನು ತೋರಿಸಿಕೊಳ್ಳಬಾರದು ಎಂದು ದೊಡ್ಡವರು ಹೇಳುತ್ತಾರೆ ಅದನ್ನು ನಾನು ಇದುವರೆವಿಗೂ ಎಲ್ಲಿಯೂ ಹೇಳಿಕೊಂಡು ಓಡಾಡಿರಲಿಲ್ಲ, ಆದರೆ ಇದೆಲ್ಲವೂ ನಮ್ಮ ಪಕ್ಷದ ವರಿಷ್ಠರು, ಜಿಲ್ಲಾ ಮುಖಂಡರ ಗಮನಕ್ಕೆ ಇತ್ತು ಎಂದು ಹೇಳಿದರು.

 

 

 

 

 

 

ಇನ್ನು ಪಕ್ಷ ನಡೆಸಿದ್ದ ಸರ್ವೇ ಕಾರ್ಯದಲ್ಲಿಯೂ ಸಹ ನನ್ನ ಹೆಸರೇ ಮುಂಚೂಣಿಯಲ್ಲಿತ್ತು, ಅದಲ್ಲದೇ ಮುಖಂಡರುಗಳಾದ ಪರಮೇಶ್ವರ್‌, ಸಿದ್ಧರಾಮಯ್ಯ, ಡಿ.ಕೆ.ಶಿವಕುಮಾರ್‌ ಹಾಗೂ ಇನ್ನು ಹಲವಾರು ರಾಜ್ಯದ ನಾಯಕರು ಸಹ ಟಿಕೇಟ್‌ ನನಗೇ ನೀಡುತ್ತಿರುವುದಾಗಿಯೂ ಸಹ ಭರವಸೆಯನ್ನು ಮತ್ತು ವಿಶ್ವಾಸವನ್ನು ನೀಡಿದ್ದರು, ಅಲ್ಲದೇ ಕೊನೆ ಘಳಿಗೆಯ ಸ್ಕ್ರೀನಿಂಗ್‌ ಸಮಿತಿಯ ಸಭೆಯಲ್ಲಿಯೂ ಸಹ ನನ್ನ ಹೆಸರೇ ಮುಂಚೂಣಿಯಲ್ಲಿತ್ತು, ಆದರೆ ಕೆಲವು ಕಾಣದ ಕೈಗಳು ನನಗೆ ಟಿಕೇಟ್ ದೊರೆಯದಂತೆ ಆಟ ಆಡಿರುತ್ತಾರೆಂದು ಗಂಭೀರವಾಗಿ ಆರೋಪಿಸಿದರು.

 

 

 

 

 

 

ಇನ್ನುಳಿದಂತೆ ನಾನು ತುಮಕೂರು ನಗರದ ಎಲ್ಲಾ ವರ್ಗದ ಜನರೊಂದಿಗೆ, ಎಲ್ಲಾ  ಸಮುದಾಯಗಳ ಮುಖಂಡರೊಂದಿಗೆ ಸಾಮರಸ್ಯದಿಂದ ಒಡನಾಟ ಹೊಂದಿದ್ದು ಈ ವಿಷಯವೂ ಸಹ ಪಕ್ಷದ ಎಲ್ಲಾ ವರಿಷ್ಠರ ಗಮನಕ್ಕೆ ಇದ್ದರೂ ಸಹ ನನಗೆ ಟಿಕೇಟ್‌ ನೀಡದೇ ನಂಬಿಕೆ ದ್ರೋಹವನ್ನು ಮಾಡಿರುತ್ತಾರೆ, ಆದರೆ ನನಗೆ ಬೇಸರವಾಗಿಲ್ಲ, ಇನ್ನೂ ಕಾಲವಕಾಶವಿದೆ ಯಾವುದೇ ಸಮಯದಲ್ಲಿಯಾದರೂ ಟಿಕೇಟ್‌ ನೀಡಿರುವುದನ್ನು ಹಿಂಪಡೆದು, ನನಗೆ ಮರು ಟಿಕೇಟ್‌ ನೀಡಬೇಕೆಂದು ಒತ್ತಾಯಿಸಿದರಲ್ಲದೇ, ಒಂದು ವೇಳೆ ಪಕ್ಷ ನನಗೆ ಟಿಕೇಟ್‌ ನೀಡದೇ ಇದ್ದ ಪಕ್ಷದಲ್ಲಿ ನಾನು ಮತ್ತು ನನ್ನ ಅಪಾರ ಬೆಂಬಲಿಗರು ತಟಸ್ಥ ನಿಲುವನ್ನು ತಾಳುತ್ತೇವೆ ಎಂದರಲ್ಲದೇ ಪಕ್ಷವು ನಮ್ಮ ಸಹಕಾರವನ್ನು ಕೋರಬಾರದೆಂದು ಹೇಳಿಕೆಯನ್ನು ನೀಡಿದರು.

 

 

 

 

 

 

ಇನ್ನು ಈ ಸಭೆಯಲ್ಲಿ ಕಾಂಗ್ರೆಸ್‌ ಮುಖಂಡರು ಹಾಗೂ ಮಾಜಿ ಟೂಡಾ ಅಧ್ಯಕ್ಷರಾದ ಸಿದ್ಧಲಿಂಗೇಗೌಡ, ಶಿವಾಜಿ, ಗುರುಪ್ರಸಾದ್‌, ಗುರು, ಸಲೀಂ, ಕರೀಂ ಹಾಗೂ ಇನ್ನಿತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!