ತುಮಕೂರು: ಆಕಸ್ಮಿಕವಾಗಿ ಕೆನರಾ ಬ್ಯಾಂಕ್ ಖಾತೆಗೆ ಜಮೆಯಾಗಿದ್ದ 2.50 ಲಕ್ಷ ಹಣವನ್ನು ಪತ್ರಕರ್ತ ಹಿಂತಿರುಗಿಸಿ ಮಾದರಿಯಾಗಿದ್ದಾರೆ.
ಮಾ.31ರಂದು ಶುಕ್ರವಾರ ಸಂಜೆ ವಿಶ್ವವಾಣಿ ಜಿಲ್ಲಾ ವರದಿಗಾರ ರಂಗನಾಥ ಕೆ.ಮರಡಿ ಅವರ ಕೆನರಾ ಬ್ಯಾಂಕ್ ಖಾತೆಗೆ 2.50 ಲಕ್ಷ ಜಮೆಯಾಗಿತ್ತು.
ಎರಡು ದಿನ ಬ್ಯಾಂಕ್ ರಜೆಯಿದ್ದ ಕಾರಣ ಏ.3ರಂದು ಸೋಮವಾರ ಬ್ಯಾಂಕ್ ಮೂಲಕ ಹಣ ಕಡಿತವಾಗಿದ್ದ ಖಾತೆಗೆ 2.50 ಲಕ್ಷ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಕೆಲ ತಿಂಗಳ ಹಿಂದೆ ಇದೇ ರೀತಿ 32 ಸಾವಿರ ರುಪಾಯಿ ಖಾತೆಗೆ ಜಮೆ ಆಗಿತ್ತು. ಅದನ್ನೂ ಸಹ ವಾಪಾಸ್ ನೀಡಿದ್ದರು.