ಮಹಾವೀರ ತೀರ್ಥಂಕರರ ದಿವ್ಯಾಕಾಶ ಸಮವಶರಣ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವ ಸಮಾರಂಭ

ತುಮಕೂರು : ನಗರದ ಹೊರವಲಯದಲ್ಲಿರುವ ಶ್ರೀ ಅತಿಶಯ ಕ್ಷೇತ್ರ ಮಂದರಗಿರಿಯಲ್ಲಿ ಭಾರತದಲ್ಲೇ ಪ್ರಪ್ರಥಮವಾದ ವಿಶಿಷ್ಟ ವಾಸ್ತು ರಚನೆಯೊಂದಿಗೆ ಮಹಾವೀರ ತೀರ್ಥಂಕರರ ದಿವ್ಯಾಕಾಶ ಸಮವಶರಣ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ದಿಗಂಬರ ಜೈನ ಶ್ರೀ ಪಾರ್ಶ್ವನಾಥ ಜಿನಾಮಂದಿರ ಸಮಿತಿಯ ಅಧ್ಯಕ್ಷ ಎಸ್ ಜೆ ನಾಗರಾಜ್ ತಿಳಿಸಿದರು.

 

 

 

ನಗರದ ಜೈನ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸಮವಶರಣ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವ ಸಮಾರಂಭವು ದಿನಾಂಕ ಮಾರ್ಚ್ 8 ರಿಂದ 13 ರವರೆಗೆ ನಡೆಯಲಿದ್ದು, ಸಮಾರಂಭದಲ್ಲಿ ಸಹಸ್ರಾರು ಭಕ್ತರು, ಜೈನ ಮುನಿಗಳು, ಮಾತಾಜಿಗಳು, ಹಾಗೂ ದಕ್ಷಿಣ ಭಾರತದ ವಿವಿಧ ಜೈನ ಮಠಗಳ ಪೀಠಾಧೀಶರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

 

 

 

 

 

ಪ್ರಮುಖವಾಗಿ ದಿಗಂಬರ ಜೈನ ಮುನಿಗಳಾದ ಶ್ರೀ ಅಮೋಘ ಕೀರ್ತಿ ಮಹಾರಾಜ್ ಮತ್ತು ಅಮರಕೀರ್ತಿ ಮಹಾರಾಜ್ ರವರ ನೇತೃತ್ವದಲ್ಲಿ ವಿಭಿನ್ನವಾದ ಶ್ರೀ ದಿವ್ಯಾಕಾಶ ಸಮವಶರಣ ನಿರ್ಮಾಣಗೊಂಡಿದ್ದು, ಮೂರು ವರ್ಷಗಳಿಂದ ನಿರಂತರವಾಗಿ ನೂರಾರು ನುರಿತ ಕುಶಲಕರ್ಮಿಗಳು ಕಾಮಗಾರಿ ಕೆಲಸ ಮಾಡಿದ್ದಾರೆ. ವಿಶೇಷವಾಗಿ ಒರಿಸ್ಸಾದಿಂದ ಬಂದಿರುವ ನುರಿತ ಕುಶಲಕರ್ಮಿಗಳು ಧ್ಯಾನಸ್ತ ಮುಖ ಹೊಂದಿರುವ 4 ಸುಂದರವಾದ 5 ಬರೋಬ್ಬರಿ ಟನ್ ತೂಕವಿರುವ ಮಹಾವೀರ ತೀರ್ಥಂಕರ ಮೂರ್ತಿಗಳನ್ನು ಮಾಡಿದ್ದಾರೆ ಎಂದು ತಿಳಿಸಿದರು.

 

 

 

ಮಾರ್ಚ್ 8 ರಿಂದ ಆರಂಭವಾಗಲಿರುವ ಪಂಚಕಲ್ಯಾಣ ಮಹೋತ್ಸವ ಉದ್ಘಾಟನಾ ಕಾರ್ಯಕ್ರಮದ‌ ಅಧ್ಯಕ್ಷತೆಯನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿ ವೈ ವಿಜಯೇಂದ್ರ ವಯಸ್ಸಲ್ಲಿದ್ದಾರೆ. ಶ್ರೀ ಅಮೋಗಕೀರ್ತಿ ಮಹಾರಾಜ್ ಮತ್ತು ಶ್ರೀ ಅಮರ ಕೀರ್ತಿ ಮಹಾರಾಜ್ ಹಾಗೂ ವಿವಿಧ ಮಠಗಳ ಭಟ್ಟಾಕರ ಪಟ್ಟಾಚಾರ್ಯರು ಸಾನಿಧ್ಯ ವಹಿಸಲಿದ್ದಾರೆ.

 

 

 

 

ಮಾರ್ಚ್ 8 ರಿಂದ ಶುರುವಾಗುವ ಮಂಗಳ ಕಾರ್ಯಕ್ರಮಗಳು 8 ರಂದು ಆದಿಮಂಗಲ, 9 ರಂದು ಗರ್ಭ ಕಲ್ಯಾಣ, 10 ರಂದು ಜನ್ಮ ಕಲ್ಯಾಣ, 11ರಂದು ದೀಕ್ಷಕಲ್ಯಾಣ, 12ರಂದು ಕೇವಲ ಜ್ಞಾನ ಕಲ್ಯಾಣ ಹಾಗೂ 13ರಂದು ಮೋಕ್ಷ ಕಲ್ಯಾಣ ನಡೆಯಲಿದ್ದು ಜೊತೆಗೆ ಪ್ರತಿ ಸಂಜೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಕಾರ್ಯಕ್ರಮದಲ್ಲಿ ಶ್ರೀ ಸುರೇಂದ್ರ ಕುಮಾರ್ ರಾಕೇಶ್ ಜೈನ್ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಜೈನ ಸಮಾಜದ ಅಧ್ಯಕ್ಷರಾದ ಎಸ್ ಜೆ ನಾಗರಾಜ್ ತಿಳಿಸಿದರು.

 

 

 

 

ಪತ್ರಿಕಾಗೋಷ್ಠಿಯಲ್ಲಿ ಶ್ರೀ ದಿಗಂಬರ ಜೈನ ಶ್ರೀ ಪಾರ್ಶ್ವನಾಥ ಜಿನಮಂದಿರ ಸಮಿತಿಯ ಅಧ್ಯಕ್ಷ ಎಸ್. ಜೆ ನಾಗರಾಜ್, ಕರ್ನಾಟಕ ಜೈನ ಅಸೋಸಿಯೇಷನ್ ನಿರ್ದೇಶಕ ಆರ್. ಜೆ ಸುರೇಶ್ ಹಾಗೂ ಅಜಿತ್ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!