ತುಮಕೂರು ಉತ್ತರ ಜಿಲ್ಲೆಯ ಗುಬ್ಬಿ ತಿಪಟೂರು ತುರುವೇಕೆರೆ ಚಿಕ್ಕನಾಯಕನಹಳ್ಳಿ, ಕುಣಿಗಲ್ ಭಾಗದ ವಿವಿಧ ಸರ್ಕಾರಿ ಶಾಲೆಗಳು ಹಾಗೂ ತುಮಕೂರು ಜಿಲ್ಲೆಯ ಸುಮಾರು 50 ಹೆಚ್ಚು ಶಾಲೆಗಳನ್ನು ದೂರ ತರಂಗ ಶಿಕ್ಷಣ ಕಾರ್ಯಕ್ರಮದಲ್ಲಿ ಆಯೋಜಿಸಲಾಗಿದೆ ಎಂದು ತಿಳಿಸಿದರು ಈ ಕಾರ್ಯಕ್ರಮವು ಇನ್ಫೋಸಿಸ್ ಸಂಸ್ಥೆಯ ಸಹಯೋಗದೊಂದಿಗೆ ಶ್ರೀ ರಾಮಕೃಷ್ಣಾಶ್ರಮ ಪಾವಗಡ ಕಾರ್ಯರೂಪವನ್ನು ಯಶಸ್ವಿಗೊಳಿಸಲು ಕೈಗೊಂಡಿದ್ದಾರೆ.
ಗ್ರಾಮೀಣ ಭಾಗದ ಕಡು ಬಡತನದ ವಿದ್ಯಾರ್ಥಿಗಳಿಗೆ ಆಧುನಿಕ ತಂತ್ರಜ್ಞಾನದ ಮೂಲಕ ನಗರ ವ್ಯಾಪ್ತಿಯಲ್ಲಿ ಬರುವ ಶಿಕ್ಷಣದ ಗುಣಮಟ್ಟಕ್ಕೆ ಸಮನಾಗಿ ಗ್ರಾಮಾಂತರ ಭಾಗದ ಹಳ್ಳಿಗಾಡಿನ ಮಕ್ಕಳಿಗೆ ಸಮಾನತೆಯ ಶಿಕ್ಷಣ ದೊರೆಯಲು ದೂರ ತರಂಗ ಶಿಕ್ಷಣದ ಮೂಲಕ ಸಾಧ್ಯ ಎಂದು ಜಪಾನಂದ ಸ್ವಾಮೀಜಿಯವರು ತಿಳಿಸಿದ್ದಾರೆ.
ವಿದ್ಯಾರ್ಜನೆಯು ಹಿಂದಿನ ಯುವ ಶಕ್ತಿಗಳಿಗೆ ಅತ್ಯವಶ್ಯಕವಾಗಿದೆ ಯುವ ಪ್ರತಿಭೆಗಳು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರ ಸಮಾನತೆಯನ್ನು ಹೆಚ್ಚಿಸಲು ಇನ್ಫೋಸಿಸ್ ಸಂಸ್ಥೆಯ ಮೂಲಕ ಕಾರ್ಯ ರೂಪ ಯಶಸ್ವಿಯಾಗುತ್ತಿದೆ ಎಂದು ತಿಳಿಸಲು ಹರ್ಷ ವ್ಯಕ್ತಪಡಿಸುತ್ತೇನೆ. ರಾಜ್ಯದ ಗಡಿಭಾಗ ದಿಂದ ಹಿಡಿದು ಸುಮಾರು 50 ಹೆಚ್ಚು ಶಾಲೆಗಳನ್ನು ಈ ಕಾರ್ಯ ರೂಪಕ್ಕೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು ಈ ಶಾಲೆಯ ಮುಖ್ಯಪದ್ಯಾಯರು ಹಾಗೂ ಶಾಲೆಯ ಶಿಕ್ಷಕರು ಮತ್ತು ಹಲವಾರು ವಿದ್ಯಾರ್ಥಿಗಳು ಇದರಿಂದ ನಮಗೆ ಉತ್ತಮವಾದ ಶಿಕ್ಷಣ ಪಡೆಯಲು ಸ್ವಾಮೀಜಿಯವರು ಮಾಡಿರುವುದು ತುಂಬಾ ಸಂತೋಷದ ವಿಷಯ ಎಂದು ತಿಳಿಸಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯುತ ಶಕ್ತಿ ತುಂಬಲು ಸರ್ಕಾರಿ ಪ್ರೌಢಶಾಲೆಯ ಮೂಲಕ ಚಾಲನೆ ನೀಡಿದ್ದಾರೆ.
ಮಹಾತ್ಮ ಗಾಂಧೀಜಿ ಅಂಬೇಡ್ಕರ್ ಗೌತಮ ಬುದ್ಧ ಮಹಾವೀರ ಲಾಲ್ ಬಹುದ್ದೂರ್ ಶಾಸ್ತ್ರಿ ರಾಮಕೃಷ್ಣ ಪರಮಹಂಸರು ಶಾರದಾದೇವಿ ಸ್ವಾಮಿ ವಿವೇಕಾನಂದರು ಆದರ್ಶ ತತ್ವಗಳು . ಕಲ್ಪತ್ತುರು ನಾಡು ಶೈಕ್ಷಣಿಕ ನಗರದ ಬೀಡು. ಈ ಜಿಲ್ಲೆಯ ಸಿದ್ದಗಂಗಾ ಶಿಕ್ಷಣ ಸಂಸ್ಥೆ ಸಿದ್ದಾರ್ಥ ಶಿಕ್ಷಣ ಸಂಸ್ಥೆ ಹೀಗೆ ಇನ್ನೂ ಹಲವಾರು ಶಿಕ್ಷಣ ಸಂಸ್ಥೆಗಳು ತುಮಕೂರು ಜಿಲ್ಲೆಗೆ ಬೆಳಕನ್ನು ಚೆಲ್ಲುತಾ ಬಂದಿರುತ್ತದೆ ಆದರೆ ಶಿಕ್ಷಣ ಕ್ಷೇತ್ರದ ಮಹತ್ವವನ್ನು ಗ್ರಾಮೀಣ ಭಾಗದ ಹಿಂದುಳಿದ ಪ್ರದೇಶಗಳಲ್ಲಿ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಅವರ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳು ಗ್ರಾಮೀಣ ಭಾಗದ ಮೂಲಕ ಬೆಳಕಿಗೆ ಬಂದಿರುವುದು ತುಂಬಾ ಸಂತೋಷದ ವಿಷಯ ಈ ವಿಷಯವನ್ನು ಅರಿತ ಇನ್ಫೋಸಿಸ್ ಸಂಸ್ಥೆಯು ಈ ಕಾರ್ಯ ರೂಪವನ್ನು ಪಾವಗಡ ಶ್ರೀರಾಮಕೃಷ್ಣಾಶ್ರಮದ ಜಪಾನಂದ ಮಹಾ ಸ್ವಾಮೀಜಿಯವರು ಕಾರ್ಯಕ್ರಮ ಯಶಸ್ವಿಗೊಳಿಸಲು ಎಲ್ಲಾ ರೀತಿಯ ಸಹಕಾರವನ್ನು ಶಿಕ್ಷಣ ಇಲಾಖೆಯು ನೀಡಿದರೆ ಇದು ಇಡೀ ರಾಜ್ಯಕ್ಕೆ ಮಾದರಿಯಾಗುತ್ತದೆ ಎಂದು ಶಾಲಾ ಶಿಕ್ಷಕರ ಅಭಿಪ್ರಾಯ ತಿಳಿಸಿದರು.
ಈ ಯೋಜನೆಯು ತುಮಕೂರು ಜಿಲ್ಲೆಯಲ್ಲಿ ಹಾಲಿ ಮಧುಗಿರಿ ಪಾವಗಡ ಕೊರಟಗೆರೆ ಹಾಗೂ ಶಿರಾ ತಾಲೂಕುಗಳಲ್ಲಿ ಹಲವಾರು ಸರ್ಕಾರಿ ಶಾಲೆಗಳಲ್ಲಿ ದೂರ ತರಂಗ ಶಿಕ್ಷಣ ಉಪಯೋಗ ಪಡೆದಂತಹ ವಿದ್ಯಾರ್ಥಿಗಳು ತಮ್ಮ ಅನುಭವದ ಜ್ಞಾನಾರ್ಜನೆಯ ಕೊಡುಗೆ ಶ್ರೀ ಜಪಾನಂದ ಮಹಾರಾಜ್ ಕೊಡುಗೆ ಎಂದು ತಿಳಿಸಿದರು.