ಭರತ ಖಂಡದಲ್ಲಿ
ಶ್ರೇಷ್ಠವದಂತಹ ದಾನಗಳು ನೂರಾರು.
ಅದರಲ್ಲಿಯೂ ಅತಿ ಶ್ರೇಷ್ಠವಾದ ದಾನ ವಿದ್ಯಾ. ದಾನ ಜ್ಞಾನ. ದಾನ ಅನ್ನದಾನ. ಈ ಮೂರು ಸಂಗಮವು ಸೇರಿ ಕಲ್ಪತರು ನಾಡಿನಲ್ಲಿ ಶೈಕ್ಷಣಿಕ ನಾಡು ಬೀಡಾಗಿ ಪ್ರಕಾಶಮಾನವಾಗಿ ಪ್ರಜ್ವಲಿಸುತ್ತಿದೆ.
ಹಸಿದವರಿಗೆ ಅನ್ನ ವಾಗಿ ದಣಿದವರಿಗೆ ನೆರಳಾಗಿ ಮುಮುಕ್ಷ ಗಳಿಗೆ ಮಹಾಮನೆಯಾಗಿ ಆಧ್ಯಾತ್ಮ ಚಿಂತಕರಿಗೆ ಅಮೋಘ ಆಶ್ರಯ ಸ್ಥಾನವಾಗಿ ಇಹಪರ ಗಳೆರಡನ್ನು ಸಮೀಕರಿಸಿಕೊಂಡು ಸಮನ್ವಯ ದೇವಾಲಯವೇ ಶಿಕ್ಷಣ ಕ್ಷೇತ್ರದ ವಿಶ್ವವಿದ್ಯಾಲಯವೇ ತುಮಕೂರು ವಿಶ್ವವಿದ್ಯಾಲಯ.
ಈ ಪ್ರಕಾಶಮಾನದ ಬೆಳಕು ನಮ್ಮ ಸಮಾಜದ ಒಳತಿಗಾಗಿ ಪರಿಷ್ರಮಿಸಿದ ಹಿರಿಯ ಮಹಾನುಚೇತನಗಳು ಬಸವಣ್ಣನವರು ಸಿದ್ದಲಿಂಗೇಶ್ವರರು ಶಂಕರಾಚಾರ್ಯರು ರಾಮಾನುಜಾಚಾರ್ಯರು ಕನಕದಾಸರು ಪುರಂದರದಾಸರು ಅಕ್ಕಮಹಾದೇವಿ
ಮಹಾತ್ಮ ಗಾಂಧಿ, ವಿನೋಬಾ ಬಾವೆ, ಸ್ವಾಮಿ ವಿವೇಕಾನಂದರು ರಾಮಕೃಷ್ಣ ಪರಮಹಂಸರು ಶಾರದಾ ದೇವಿ, ಸಾವಿತ್ರಿ ಬಾಯಿ ಫುಲ್
ಹೀಗೆ ಸಾಧು ಸಂತರ ಸಮಾಾಗಮ ಸಮಾಜದಲ್ಲಿ ಅವರ ಆದರ್ಶ ತತ್ವಗಳು ಇಂದಿನ ಯುವ ಚೇತನಗಳ ಮಾರ್ಗದರ್ಶನವು ನಮ್ಮ ತುಮಕೂರು ವಿಶ್ವವಿದ್ಯಾಲಯದ ಬೆಳಕನ್ನು ಚೆಲ್ಲುವ ಕಾರ್ಯವೇ ನಮ್ಮ ಗುರಿ ನಾಡಿನ ಹೊಳತಿಗಾಗಿ ಈ ಯುವ ವಿದ್ಯಾರ್ಥಿನಿ ವಿದ್ಯಾರ್ಥಿಗಳು ಶಕ್ತಿಶಾಲಿಗಳಾಗಿ ಸಮಾಜದ ಒಳತಿಗಾಗಿ ಪರಿಶ್ರಮಿಸಿ ಸಮಾನತೆಯನ್ನು ಕಾಣುವ ಬೆಳಕು ಚೆಲ್ಲುವ ಶಕ್ತಿಗಳಾಗಬೇಕು. ನಮ್ಮ ದೇಶದಲ್ಲಿ ಹೆಚ್ಚು ಮಂದಿ ಒಪ್ಪತ್ತಿನ ಊಟಕ್ಕಿಲ್ಲದವರು ಮೈತುಂಬ ಬಟ್ಟೆ ಇಲ್ಲದವರು ಇಂಥವರಲ್ಲಿ ದೇಶಭಕ್ತಿ ನೀಡಬೇಕಾದರೆ ಹೇಗೆ ಸಾಧ್ಯ ಎಲ್ಲದಕ್ಕೂ ಮೊದಲು ಹೊಟ್ಟೆ ಬಟ್ಟೆ ನಂತರ ಸಮಾಚಾರ ಇವುಗಳ ಹಿತ ಚಿಂತನೆ ಭರತ ಭೂಮಿಯಲ್ಲಿ ವರುಷಕ್ಕೆ ಕೋಟ್ಯಾಂತರ ರೂಪಾಯಿಗಳನ್ನು ಶಿಕ್ಷಣಕ್ಕಾಗಿ ವೆಚ್ಚ ಮಾಡುತ್ತಿದ್ದರು ದೇಶದಲ್ಲಿ ಅಕ್ಷರಸ್ಥರ ಸಂಖ್ಯೆ ಶೇಕಡ 70 ಮೀರಿಲ್ಲ ಎಂಬುದು ತುಂಬಾ ಶೋಚನೆಯ ವಿಚಾರವಾಗಿದೆ. ಈ ಶಿಕ್ಷಣ ಕ್ರಮವು ರಾಷ್ಟ್ರದ ಅಕ್ಷರತೆಯ ಸಮಸ್ಯೆಯನ್ನು ಬಹಳ ಸುಲಭವಾಗಿ ಪರಿಹರಿಸಲು ಸರಕಾರಕ್ಕೆ ಹೆಚ್ಚು ಖರ್ಚಿಲ್ಲದೆ ಹಳ್ಳಿಗಾಡಿನ ಹಾಗೂ ಎಲ್ಲಾ ವರ್ಗದ ಜನತೆಯ ವಿದ್ಯಾರ್ಥಿಗಳು ಜ್ಞಾನ ದೀಪವನ್ನು ಹತ್ತಿಸಿದಾಗ ಮಾತ್ರ ಸಾಧ್ಯ
ಈ ರಾಷ್ಟ್ರವು ಪ್ರೀತಿ ಸತ್ಯ ನ್ಯಾಯ ಇವುಗಳ ತಳಹದಿಯ ಮೇಲೆ ಕಟ್ಟಿದ ಮಹಾ ಸಹಕಾರ ಕಾರ್ಯವೇ ಶಿಕ್ಷಣ ನೀತಿಯಿಂದ ಇಂದಿನ ಯುವ ಪ್ರತಿಭೆಗಳು ಸಮಾಜದಲ್ಲಿ ಬೆಳೆಗಳು ಸಾಧ್ಯ ಎಂದು ತಿಳಿಸಿದರು.
ತುಮಕೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ದುರ್ಬಲ ವರ್ಗದ ಬಡವಿದ್ಯಾರ್ಥಿಗಳು (ಹಣಕಾಸಿನ ವ್ಯವಸ್ಥೆಯಲ್ಲಿ) ತುಮಕೂರು ಜಿಲ್ಲೆಯ ಗಡಿ ಭಾಗಗಳಿಂದ, ಜಿಲ್ಲೆಯ ಹಲವಾರು ಹಾಗೂ ಹೊರ ಜಿಲ್ಲೆಯ ತಾಲೂಕುಗಳ ಗಡಿ ಭಾಗಗಳಿಂದಲೂ ವಿದ್ಯಾರ್ಥಿಮಕ್ಕಳು ಬೆಳಗಿನ ಜಾವ ಬಂದವರು ಊಟ ತಿಂಡಿ ಯ ಗಮನ ಹರಿಸಿದೆ ಆರೋಗ್ಯದಲ್ಲಿ ಏರುಪೇರುಗಳಾಗಿ ಹಲವಾರು ಸಮಸ್ಯೆಗಳನ್ನು ಮನಗೊಂಡಿದ್ದ ಇದರ ಬಗ್ಗೆ ಮನಸ್ಸು ಕರಾಗಿ ಉತ್ತಮವಾದ ಕಾರ್ಯವನ್ನು ಕೈಗೊಳ್ಳಬೇಕೆಂದು ಈ ರೀತಿಯ ಮಧ್ಯಾಹ್ನದ ಬಿಸಿಯೂಟ ದ ಕಾರ್ಯಕ್ರಮದ ಯೋಜನೆ ಕ ರಾಷ್ಟ್ರದಲ್ಲಿಯೇ ಪ್ರಪ್ರಥಮ ಬಾರಿಗೆ ನಡೆಯುತ್ತಿದೆ.
ಒಂದು ವಿಶ್ವವಿದ್ಯಾಲಯದ ಆರ್ಥಿಕವಾಗಿ ದುರ್ಬಲರಾದ 1500 ವಿದ್ಯಾರ್ಥಿಗಳಿಗೆ (ಸ್ನಾತಕಪೂರ್ವ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು, ತುಮಕೂರು ವಿಶವಿದ್ಯಾಲಯ) ಆಹಾರ ಪೂರೈಕೆ ಕಾರ್ಯಕ್ರಮ, ಕ್ರಮದ ದಿವ್ಯ ಸಾನಿಧ್ಯವನ್ನು ಬರದ ನಾಡಿನ ವರವ ನೀಡುವ ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಶ್ರೀ ಜಪಾನಂದ ಮಹಾರಾಜ್ ಸ್ವಾಮೀಜಿಯವರು ದೂರದ ಯೋಚನೆಯ ಮೇರೆಗೆ ಗಡಿಭಾಗದ ವಿದ್ಯಾರ್ಥಿಗಳು ಹಳ್ಳಿಗಾಡಿನಿಂದ ಬಂದು ವಿದ್ಯಾಭ್ಯಾಸ ಮಾಡಿ ನಂತರ ಮನೆಗೆ ತಲುಪುತ್ತಿರುವಾಗ ಆ ಸಂದರ್ಭದಲ್ಲಿ ಆರೋಗ್ಯದಲ್ಲಿ ಏರುಪೇರುಗಳಾಗಿ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಒಂದು ಸಮಿತಿಯನ್ನು ರಚನೆ ಮಾಡಿ ಈ ಸಮಿತಿಯ ಪೂರ್ಣ ಜವಾಬ್ದಾರಿಯನ್ನು ಶ್ರೀಗಳವರು ಮನಪೂರ್ವಕವಾಗಿ ಕೊಡುಗೈ ಧಾನಿಗಳ ಮೂಲಕ ಈ ಕಾರ್ಯಕ್ರಮದ ಜವಾಬ್ದಾರಿಯನ್ನು ಕುಲಪತಿಗಳು ಹಾಗೂ ತಂಡ ಚಾಲನೆ ನೀಡಿದೆ.
ಕಳೆದ ನಾಲ್ಕು ತಿಂಗಳುಗಳಿಂದ ಏಕಪ್ರಕಾರವಾಗಿ ನಾನಾ ರೀತಿಯಲ್ಲಿ ಪೂಜ್ಯ ಸ್ವಾಮಿ ಜಪಾನಂದಜೀ ಮಹಾರಾಜ್ ರವರ ನೇತೃತ್ವದಲ್ಲಿ ರಾಷ್ಟ್ರದಲ್ಲಿಯೇ ಪ್ರಪ್ರಥಮ ಬಾರಿಗೆ ಒಂದು ವಿಶ್ವವಿದ್ಯಾಲಯದ ಆರ್ಥಿಕವಾಗಿ ದುರ್ಬಲರಾದ ವಿದ್ಯಾರ್ಥಿಗಳಿಗೆ ಆಹಾರದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಇಂದು ಅದರ ಮುಂದುವರಿದ ಭಾಗವಾಗಿ ಉಪಕುಲಪತಿಗಳ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಮತ್ತು ಶ್ರೀ ಅನ್ನಪೂರ್ಣೇಶ್ವರಿ ಆಹಾರ ವಿತರಣಾ ಸಮಿತಿಯ ಸದಸ್ಯರುಗಳು ಯೋಜನೆಯ ಅಧ್ಯಕ್ಷರಾದ ಸ್ವಾಮಿ ಜಪಾನಂದಜಿ ರವರಿಂದ ಪರಿಶೀಲಿಸಲಾಯಿತು. ಸದ್ಯದಲ್ಲಿಯೇ ಈ ಯೋಜನೆ ತುಮಕೂರು ವಿಶ್ವವಿದ್ಯಾಲಯದ ಪ್ರಾಂಗಣದಲ್ಲಿ ಅನೇಕ ಪ್ರಸಿದ್ಧ ವ್ಯಕ್ತಿಗಳ ಸಮ್ಮುಖದಲ್ಲಿ ಆರಂಭವಾಗುತ್ತಿದೆ.
ಶ್ರೀ ಅನ್ನಪೂರ್ಣೇಶ್ವರಿ ಆಹಾರ ವಿತರಣಾ ಸಮಿತಿ , ತುಮಕೂರು ವಿಶ್ವವಿದ್ಯಾಲಯ ದ ಅಧ್ಯಕ್ಷರಾದ ಪರಮಪೂಜ್ಯ ಸ್ವಾಮಿ ಜಪಾನಂದಜಿ ಮಹಾರಾಜ್ ರವರು ಸದ್ಯದಲ್ಲಿಯೇ ಆರಂಭವಾಗುವ ಆಹಾರ ವಿತರಣಾಕೇಂದ್ರ ದ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಇದೆ ಸಂದರ್ಭದಲ್ಲಿ ಸಮಿತಿಯಸಭೆಯನ್ನು ನಡೆಸಿ ವಿಶ್ವವಿದ್ಯಾಲಯದ ಎಲ್ಲ ಪ್ರಾಂಶುಪಾಲರುಗಳು ಹಾಗೂ ಅಧಿಕಾರಿವರ್ಗದವರನ್ನು ಕಾರ್ಯಕ್ರಮ ಯಶಸ್ಸಿಗೆ ಎಲ್ಲರೂ ಶ್ರಮಿಸಲು ತಿಳಿಸಿದರು .
ಈ ಕಾರ್ಯಕ್ರಮದ ಚಾಲನೆಯನ್ನು ಚಾಲನೆಯನ್ನು ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿಗಳಾದ ಸಂತೋಷ ಹೆಗಡೆಯವರು ಚಾಲನೆ ನೀಡಲಿದ್ದಾರೆ ಹಾಗೂ ಮೈಸೂರು ಮಹಾಸಂಸ್ಥಾನದ ಯದು ವಂಶದ ಮಹಾರಾಜರಾದ ಶ್ರೀಕಂಠ ದತ್ತ ಯದುವೀರ್ ಒಡೆಯರ್ ಭಾಗವಹಿಸಲಿದ್ದಾರೆ. ತುಮಕೂರು ಜಿಲ್ಲೆಯ ಇತಿಹಾಸದಲ್ಲಿ ಅನ್ನದಾಸೋಹ ಜ್ಞಾನದಾಸೋಹ ವಿದ್ಯೆದಾಸೋಹ ಪ್ರಸಿದ್ಧ ಶ್ರೀ ಸಿದ್ದಗಂಗಾ ಮಠ ಅಧ್ಯಕ್ಷರಾದ ಲಿಂಗೈಕ್ಯ ಡಾಕ್ಟರ್ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ಒಂದು ಕನಸು ಬಡ ವಿದ್ಯಾರ್ಥಿಗಳಿಗೆ ಪ್ರಸಾದ ವ್ಯವಸ್ಥೆ ಅವರ ಕನಸು. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸಿದ್ದಗಂಗಾ ಮಠ ಅಧ್ಯಕ್ಷರಾದ ಸಿದ್ದಲಿಂಗ ಮಹಾಸ್ವಾಮಿಗಳು ವಹಿಸಲಿದ್ದಾರೆ ಇಂದು ತುಮಕೂರು ನಗರದ ವಿಶ್ವವಿದ್ಯಾಲಯದ ಮೂಲಕ ಮಾದರಿ ಕಾರ್ಯಕ್ರಮವಾಗಲು ಸಹಕಾರಿಯಾಗುತ್ತಿದೆ.
ತುಮಕೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾದ ವೆಂಕಟೇಶ್ವರಲ್ ಆಗು ರೆಡ್ ಕ್ರಾಸ್ ಸಂಸ್ಥೆ ಹಾಗೂ ತುಮಕೂರು ಜಿಲ್ಲೆಯ ಹಲವಾರು ದಾನಿಗಳು ಭಾಗಿಗಳಾಗಿದ್ದಾರೆ ಈ ವ್ಯವಸ್ಥೆಗೆ ಕೊಡುವಂತ ಧಾನ್ಯಗಳು 80 G ಅಡಿಯಲ್ಲಿ ಹಣ ಸಂದ ರಸೀತಿಗಳ ಮೂಲಕ ಹಮ್ಮಿಕೊಳ್ಳಲಾಗಿದೆ.