ತುಮಕೂರು : ಮುಂಬರುವ 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ತುಮಕೂರು ನಗರ ಬಿಜೆಪಿ ಪಕ್ಷದಿಂದ ಜಿ.ಬಿ.ಜ್ಯೋತಿಗಣೇಶ್ ಆದ ನಾನೇ ಅಭ್ಯರ್ಥಿಯಾಗಿ ನಿಲ್ಲುವುದು ಖಚಿತವೆಂದು ಸ್ಪಷ್ಠಪಡಿಸಿದ್ದಾರೆ.
ನಗರದ ತಮ್ಮ ಕಛೇರಿಯಲ್ಲಿ ಈ ಕುರಿತು ಸುದ್ಧಿಗೋಷ್ಠಿ ನಡೆಸಿದ ಹಾಲಿ ಶಾಸಕರು ಮಾರ್ಚ್ 5 ರಂದು ತುಮಕೂರು ನಗರದಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ನಿರ್ಮಾಣವಾಗಿರುವ ಕಾಮಗಾರಿಗಳನ್ನು ಲೋಕಾರ್ಪಣೆಗೊಳಿಸಲು ಮುಖ್ಯಮಂತ್ರಿಗಳಾದಿಯಾಗಿ, ರಾಷ್ಟ್ರೀಯ ಮತ್ತು ರಾಜ್ಯದ ಪ್ರಮುಖ ಬಿಜೆಪಿ ನಾಯಕರುಗಳು ಆಗಮಿಸಲಿದ್ದಾರೆಂದು ತಿಳಿಸಿದರು.
ಶಿಕ್ಷಣದ ವಲಯದ ಅಭಿವೃದ್ಧಿ ಕಾಮಗಾರಿಗಳು, ಕ್ರೀಡಾ ವಲಯದ ಅಭಿವೃದ್ಧಿ ಕಾಮಗಾರಿಗಳು, ಜಲ ಸಂರಕ್ಷಣೆ ಹಾಗೂ ಕೆರೆಗಳ ಅಭಿವೃದ್ಧಿ ಕಾಮಗಾರಿಗಳು,ಕೊಳೆಗೇರಿ ಅಭಿವೃದ್ಧಿ ಕಾಮಗಾರಿಗಳು, ದೇವಾಲಯಗಳ ಜೀರ್ಣೋದ್ಧಾರ ಅಭಿವೃದ್ಧಿ, ಒಳಚರಂಡಿ ವ್ಯವಸ್ಥೆ, ಸಮುದಾಯ ಭವನಗಳ ನಿರ್ಮಾಣ ಸೇರಿದಂತೆ ಇನ್ನೂ ಅನೇಕ ಅಭಿವೃದ್ಧಿ ಕಾಮಗಾರಿಗಳು ನನ್ನ ಅವಧಿಯಲ್ಲಿ ಆಗಿರುವುದರಿಂದ ಬಿಜೆಪಿ ಪಕ್ಷದ ಎಲ್ಲಾ ಪ್ರಮುಖ ಮುಖಂಡರು ನನ್ನ ಹೆಸರನ್ನು ರಾಷ್ಟ್ರೀಯ ಚುನಾವಣಾ ಆಯ್ಕೆ ಸಮಿತಿಗೆ ಶಿಫಾರಸ್ಸು ಮಾಡಿರುತ್ತಾರೆಂಬ ವಿಷಯವನ್ನೂ ಸಹ ಬಹಿರಂಗ ಪಡಿಸದ್ದಾರೆ.
ನಾನು ತುಮಕೂರಿನಗರದಿಂದ 2018ರಲ್ಲಿ ನಗರ ಜನರ ಆಶೀರ್ವಾದದಿಂದ ಗೆಲುವು ಸಾಧಿಸಿ, ಅನೇಕ ಅಭಿವೃದ್ಧಿ ಕಾರ್ಯಗಳನ್ನು ನೆರವೇರಿಸಿದ್ದು, ಹೀಗಾಗಿ ಪಕ್ಷವು ಮತ್ತೊಮ್ಮೆ ನನಗೇ ಟಿಕೇಟ್ ನೀಡುವ ಭರವಸೆಯನ್ನು ನೀಡಿರುತ್ತಾರೆ. ಏಪ್ರಿಲ್ ತಿಂಗಳಲ್ಲಿ ಅಭ್ಯರ್ಥಿಗಳ ಪಟ್ಟಿಯಲ್ಲಿ ನನ್ನ ಹೆಸರೇ ಬರುವುದು ಬಹುತೇಖ ಖಚಿತವಾಗಿದೆ, ಯಾವುದೇ ಕಾರಣಕ್ಕೂ ಬೇರೆಯವರಿಗೆ ಟಿಕೇಟ್ ಬರುವುದಿಲ್ಲವೆಂದು ನಾನು ಈ ಮೂಲಕ ಸ್ಪಷ್ಠಪಡಿಸುತ್ತಿದ್ದೇನೆಂದರು.
ಮುಂದುವರೆದು, ಇತ್ತೀಚಿನ ದಿನಗಳಲ್ಲಿ ನಾನು ಕಾಂಗ್ರೆಸ್ ಪಕ್ಷಕ್ಕೆ ಹೋಗುತ್ತಿದ್ದೇನೆಂಬ ಊಹಾ ಪೋಹಗಳು ಹರಿದಾಡುತ್ತಿರುವುದು ನನ್ನ ಗಮನಕ್ಕೆ ಬಂದಿದ್ದು, ನಾನು ಯಾವುದೇ ವಿಧದಲ್ಲಿಯೂ ಬಿಜೆಪಿ ಪಕ್ಷವನ್ನು ಬಿಟ್ಟು ಹೋಗುವುದಿಲ್ಲವೆಂದು ಜೊತೆಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆಂಬ ಸುದ್ಧಿ ಹರಿದಾಡುತ್ತಿದ್ದು ಇವೆಲ್ಲವೂ ನನ್ನ ಗಮನಕ್ಕೆ ಬಂದಿದೆ, ಆದರೆ ನಾನು ಯಾವುದೇ ಕಾರಣಕ್ಕೂ ಲೋಕಸಭೆಗೆ ಸ್ಪರ್ಧಿಸುವುದಿಲ್ಲ, ಮುಂಬರುವ ಚುನಾವಣೆಯಲ್ಲಿ ನಾನು ತುಮಕೂರು ನಗರ ವಿಧಾನಸಭಾ ಕ್ಷೇತ್ರದಿಂದ ಮಾತ್ರವೇ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆಂದು ಸ್ಪಷ್ಠಪಡಿಸಿದರು.
ಇನ್ನುಳಿದಂತೆ ಜನರು ಯಾವುದೇ ಗೊಂದಲಕ್ಕೇ ಹೋಗಬಾರದು, ನಾನು ತುಮಕೂರು ನಗರ ಬಿ.ಜೆ.ಪಿ. ಅಭ್ಯರ್ಥಿಯೇ ಎಂದು ಗಂಟಾಗೋಷವಾಗಿ ಹೇಳಿದರು.