ಪೇ ಎಂ.ಎಲ್.ಎ ಪೋಸ್ಟರ್‌ ಆವಂತರ : ಅರೆಸ್ಟ್‌ ಆದ ಕಾಂಗ್ರೆಸ್‌ ಮುಖಂಡ ಶಶಿಹುಲಿಕುಂಟೆ

ತುಮಕೂರು : ತುಮಕೂರು ನಗರದ ತಿಲಕ್ ಪಾರ್ಕ್ ಠಾಣೆಯ ಮಹಿಳಾ ಪಿಎಸ್​ಐ ರತ್ನಮ್ಮರವರ ಮುಂದೆ ಹೀರೋಯಿಸಂ ತೋರಿಸಲು ಹೋದ ಕಾಂಗ್ರೆಸ್ ಮುಖಂಡ ಜೈಲು ಪಾಲಾದ ಘಟನೆ ನಡೆದಿದೆ.

 

 

 

ಮಹಿಳಾ ಪಿಎಸ್​ಐ ರತ್ನಮ್ಮ ಜೊತೆ ಅಸಭ್ಯ ವರ್ತಿಸಿದ್ದಲ್ಲದೆ, ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಇನ್ನೂ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ತುಮಕೂರಿನ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಶಿ ಹುಲಿಕುಂಟೆಯನ್ನು ಬಂಧಿಸಲಾಗಿದೆ.

 

 

 

ಶಶಿ ಹುಲಿಕುಂಟೆ ಅವರು ಎರಡು ದಿನಗಳ ಹಿಂದೆ ಕಾಪೌಂಡ್ ಗೋಡೆಗಳ ಮೇಲೆ ಶಾಸಕ ಜ್ಯೋತಿ ಗಣೇಶ್ ಭಾವಚಿತ್ರವಿರುವ ಪೇ ಎಂಎಲ್‌ಎ ಪೋಸ್ಟರ್ ಅಂಟಿಸಿದ್ದರು. ಈ ಹಿನ್ನೆಲೆಯಲ್ಲಿ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

 

 

 

ಆರೋಪಿಗಳನ್ನು ಬಿಡುಗಡೆ ಮಾಡುವಂತೆ ಶಶಿ ಹುಲಿಕುಂಟೆ ಒತ್ತಡ ಹಾಕಿದ್ದರು. ಇದಕ್ಕೊಪ್ಪದ ಪೊಲೀಸರ ಜೊತೆ ದರ್ಪದಿಂದ ಮಾತನಾಡಿ, ಅಸಭ್ಯವಾಗಿ ವರ್ತಿಸಿದ್ದರು. ಅಲ್ಲದೆ ಪಿಎಸ್​ಐ ರತ್ನಮ್ಮ ಹಾಗೂ ಪೇದೆಗಳಿಗೆ ಆವಾಜ್ ಹಾಕಿದ್ದರು.

 

 

ಇಷ್ಟೇ ಅಲ್ಲದೆ ಪೊಲೀಸರ ವಶದಲ್ಲಿದ್ದ ನಾಲ್ವರು ಆರೋಪಿಗಳನ್ನು ಸಿನಿಮೀಯ ರೀತಿಯಲ್ಲಿ ಠಾಣೆಯಿಂದಲೇ ಶಶಿ ಎಸ್ಕೇಪ್  ಮಾಡಿಸಿದ್ದನು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ತಿಲಕ್​ ಪಾರ್ಕ್​ ಠಾಣಾ ಪೊಲೀಸರು, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಶಿಹುಲಿಕುಂಟೆ ಹಾಗೂ ನಾಲ್ವರು ಯುವಕರನ್ನು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!