ಸ್ಮಾರ್ಟ್‌ ಸಿಟಿ ಕಳಪೆ ಕಾರ್ಯವನ್ನು ತನ್ನ ಮಹತ್‌ ಸಾಧನೆ ಎಂದು ಹೇಳಿಕೊಳ್ಳುತ್ತಿರುವ ಜ್ಯೋತಿ ಗಣೇಶ್‌ ವಿರುದ್ಧ ಪೇ ಎಂ.ಎಲ್.ಎ. ಪೋಸ್ಟರ್‌ ಅಭಿಯಾನ

ತುಮಕೂರು ನಗರದಲ್ಲಿ ಸದ್ದು ಮಾಡಿದ ಪೇ.ಎಂಎಲ್ಎ ಪೋಸ್ಟರ್

 

ತುಮಕೂರು: ಕಳೆದ ಕೆಲ ತಿಂಗಳುಗಳ ಹಿಂದೆ ರಾಜ್ಯದಲ್ಲಿ ಪೇ ಸಿಎಂ ಪೋಸ್ಟರ್ ಅಂಟಿಸಿದ್ದು ಬಾರೀ ಸುದ್ದಿಯಾಗಿತ್ತು. ಅದೇ ಮಾದರಿಯಲ್ಲಿ ಇದೀಗ ತುಮಕೂರು ನಗರದ ಪ್ರಮುಖ ರಸ್ತೆಗಳಲ್ಲಿ, ಗೋಡೆಗಳ ಮೇಲೆ ಪೇ ಎಂಎಲ್‌ಎ  ಪೋಸ್ಟರ್‌ ಅಂಟಿಸುವ ಮೂಲಕ ಬೃಹತ್ ಅಭಿಯಾನ ‌ವನ್ನು ಕಾಂಗ್ರೆಸ್‌ ಪಕ್ಷ ಶುರುವಾಗಿದೆ. ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್ ವಿರುದ್ಧ ಪೇ ಎಂಎಲ್‌ಎ ಪೋಸ್ಟರ್ ಅಭಿಯಾನ ಆರಂಭವಾಗಿದ್ದು.

 

ಕಾಂಗ್ರೆಸ್ ಮುಖಂಡ ಹಾಗೂ ನಗರ ಕಾಂಗ್ರೆಸ್‌ ಶಾಸಕ ಸ್ಥಾನದ ಆಕಾಂಕ್ಷಿ ಶಶಿ ಹುಲಿಕುಂಟೆ  ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಂದ ಪೋಸ್ಟರ್ ಅಭಿಯಾನ ಶುರುವಾಗಿದ್ದು, ಬಿಜೆಪಿ ಶಾಸಕ ಜ್ಯೋತಿ ಗಣೇಶ್ ಪೋಟೊ ಒಳಗೊಂಡಿರೋ ಪೇ ಎಂಎಲ್‌ಎ ಪೋಸ್ಟರ್‌ಗಳನ್ನು ಅಂಟಿಸಲಾಗಿದ್ದು.

 

 

 

ನಿಮಗೆ ಕೆಲಸ ಆಗಬೇಕೆ, ನನಗೆ ಪೇ ಮಾಡಿ. ಭ್ರಷ್ಟಚಾರ ನನ್ನ ಮೊದಲ ಆದ್ಯತೆ. ಈ ರೀತಿ ಸ್ಲೋಗನ್ ಬರೆದಿರೋ ಪೋಸ್ಟರ್‌ಗಳನ್ನು ತುಮಕೂರು‌ ನಗರದ ಟೌನ್ ಹಾಲ್ ಸರ್ಕಲ್‌, ಬಿ.ಎಚ್.ರಸ್ತೆ, ಹೊರಪೇಟೆಯಲ್ಲಿ ಸೇರಿದಂತೆ ಹಲವು ಭಾಗಗಳಲ್ಲಿ ಕಾಂಗ್ರೆಸ್ ಪೋಸ್ಟರ್ ಗಳನ್ನ ಅಂಟಿಸಲಾಗಿದೆ. ತುಮಕೂರು‌ ನಗರದ ಸ್ಮಾರ್ಟ್ ಸಿಟಿ ಕಾಮಗಾರಿ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಯಲ್ಲಿ ಲಂಚದ ಡೀಲ್ ಹಾಗೂ ಕಾಮಗಾರಿಯಲ್ಲಿ ಶಾಸಕ ಜ್ಯೋತಿ ಗಣೇಶ್ ಪರ್ಸೆಂಟೇಜ್‌ನ್ನು ಪಡೆಯುತ್ತಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪೋಸ್ಟರ್ ಅಂಟಿಸಿದೆ. ಇನ್ನು ಪೋಸ್ಟರ್‌ ಅಂಟಿಸಿದ ಹುಡುಗರನ್ನು ತಿಲಕ್ ಪಾರ್ಕ್ ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದ್ದಾರೆ.

 

 

 

ಇನ್ನು ತುಮಕೂರು ನಗರದಲ್ಲಿ ಪೇ ಎಂಎಲ್ಎ ಪೋಸ್ಟರ್ ಅಭಿಯಾನ ಶುರು ಆಗುತ್ತಿದ್ದಂತೆ ಬಿಜೆಪಿ ಪಾಳ್ಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

 

ಪೆ ಪೋಸ್ಟರ್ ಬಗ್ಗೆ ಕಾಂಗ್ರೆಸ್ ಮುಖಂಡ ಶಶಿಹುಲಿಕುಂಟೆ ಸ್ಪಷ್ಟನೆ.

 

ಕಾಂಗ್ರೆಸ್‌ ಪಕ್ಷದ  ವತಯಿಂದ ತುಮಕೂರು ನಗರದಲ್ಲಿ ಪೇ ಎಂ.ಎಲ್. ಎ ಪೋಸ್ಟರ್ ಅಭಿಯಾನ ಶುರುಮಾಡಿದ್ದು ತುಮಕೂರು ನಗರದಲ್ಲಿ ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಸಾಕಷ್ಟು ಕಳಪೆ ಕಾಮಗಾರಿಗಳು ನಡೆದಿರುವುದಲ್ಲದೇ ಕೇಂದ್ರದ ಅನುದಾನವಾದ ಸ್ಮಾರ್ಟ್‌ ಸಿಟಿ ಅನುದಾನದಲ್ಲಿ ತುಮಕೂರು ನಗರ ಹಾಲಿ ಶಾಸಕರು ಬಹಳಷ್ಟು ಅಮೇಧ್ಯ ತಿಂದಿದ್ದಾರೆಂದು ಪರೋಕ್ಷವಾಗಿ ಹೇಳಿದ್ದಾರೆ.

 

 

 

 

ಇನ್ನುಳಿದಂತೆ ಈ ಸ್ಮಾರ್ಟ್‌ ಸಿಟಿ ಕಾಮಗಾರಿಗಳು ಈ ಹಿಂದೆ ತುಮಕೂರು ನಗರದಲ್ಲಿ ಕಾಂಗ್ರೆಸ್‌ ಶಾಸಕರಾಗಿದ್ದ ರಾಫೀಕ್‌ ಅಹ್ಮದ್‌ ಅವರ ಕಾಲದಲ್ಲಿ ಪ್ರಾರಂಭಗೊಂಡಿದ್ದು, ಸಾಕಷ್ಟು ಕಾಮಗಾರಿಗಳು ಆ ಸಮಯದಲ್ಲಿಯೇ ಪ್ರಾರಂಭವಾಗಿದ್ದವು, ಆದರೆ ರಫೀಕ್‌ ಅಹಮ್ಮದ್‌ ಅವರ ಕಾಲದಲ್ಲಿ ಸರಿಯಾಗಿ ಅನುದಾನವು ಬಿಡುಗಡೆಗೊಳ್ಳದೇ ಮುಲ್ಕಿಯಲ್ಲಿದ್ದವು, ಕಾರಣ ಕಾಂಗ್ರೆಸ್‌ ಆಡಳಿತದಲ್ಲಿದೆ ಎಂಬ ಕಾರಣಕ್ಕೆ ತದ ನಂತರ ತುಮಕೂರು ನಗರದಲ್ಲಿ ಬಿಜೆಪಿ ಆಡಳಿತಕ್ಕೆ ಬಂದ ನಂತರ ಕ್ರಮೇಣ ಅನುದಾನ ಬಿಡುಗಡೆಗೊಂಡು ಕಳಪೆ ಮಟ್ಟದ ಕಾಮಗಾರಿಗಳು ನಡೆದು ಇದೀಗ ಪೂರ್ಣಗೊಳ್ಳುತ್ತಿವೆ, ಇದನ್ನೇ ತಮ್ಮ ಮಹತ್ತರ ಸಾಧನೆ ಎಂದು ಬಿಂಬಿಸಿಕೊಂಡು ಓಡಾಡುತ್ತಿದ್ದಾರೆ ಎಂಬ ಆಕ್ರೋಷವನ್ನು ವ್ಯಕ್ತಪಡಿಸಿದರು.

 

 

 

 

 

ಮುಂದುವರೆದು ತಮ್ಮ ಶಾಸಕರ ಅನುದಾನದಲ್ಲಿ ಯಾವ ಯಾವ ಕಾಮಗಾರಿಗಳನ್ನು ಮಾಡಿದ್ದಾರೆ ಎಂಬ ಶ್ವೇತ ಪತ್ರ ಹೊರಡಿಸಲಿ, ಅದನ್ನು ಬಿಟ್ಟು ಕೇಂದ್ರದ ಅನುದಾನವನ್ನೇ ತಮ್ಮ ಅನುದಾನದ ರೀತಿಯಲ್ಲಿ ಹೇಳಿಕೊಂಡು ಓಡಾಡುತ್ತಿರುವ ಶಾಸಕರಿಗೆ ಏನು ಹೇಳುಬೇಕು, ಈ ಕುರಿತು ಸಂಪೂರ್ಣ ತನಿಖೆಯಾಗಬೇಕು ಎಂದು ಒತ್ತಾಯಿಸದರಲ್ಲದೇ, ಎಲ್ಲಾ ಕಾಮಗಾರಿಗಳಲ್ಲಿ ತನಗೆ ಇಂತಿಷ್ಟು ಪಡೆದೇ ಕಾಮಗಾರಿಗಳನ್ನು ಮಾಡಿದ್ದಾರೆಂದು ಗಂಭೀರ ಆರೋಪವನ್ನೂ ಸಹ ಮಾಡಿದ್ದಾರೆ.

 

 

ಭ್ರಷ್ಟಾಚಾರಕ್ಕೆ ಹಿಡಿದಿರುವ ಕೈಗನ್ನಡಿಯಾಗಿದೆ ಹಾಗಾಗಿ ಸಾರ್ವಜನಿಕರಿಗೆ ಭ್ರಷ್ಟಾಚಾರದ ಬಗ್ಗೆ ಅರಿವು ಮೂಡಿಸುವ ಹಿನ್ನಲೆಯಲ್ಲಿ ಪೇ ಎಂ.ಎಲ್. ಎ ಪೋಸ್ಟರ್ ಅಭಿಯಾನ ಆರಂಭಿಸಿದ್ದು ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯಲಿದೆ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!