ತುಮಕೂರು: ಸಂಕೀರ್ಣವಾದ ಹೃದಯದ, ಜನ್ಮಜಾತ ಹೃದಯರೋಗ ಸಮಸ್ಯೆ (TAPVC) ಹಾಗೂ ಟ್ರಂಕಸ್ (Truncus) ರೋಗಕ್ಕೆ ತುತ್ತಾಗಿದ್ದ ಇಬ್ಬರು ಮಕ್ಕಳಿಗೆ ಹೃದಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮುಗಿಸಿ, ಆ ಮಕ್ಕಳಿಗೆ ಮರುಹುಟ್ಟು ನೀಡಿರುವ ನಗರದ ಶ್ರೀ ಸಿದ್ದಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ‘ಸಿದ್ಧಾರ್ಥ ಅಡ್ವಾನ್ಸ್ ಹಾರ್ಟ್ ಸೆಂಟರ್ ವೈದ್ಯರ ತಂಡ ಇನ್ನೊಂದು ಮೈಲಿಗಲ್ಲು ಸ್ಥಾಪಿಸಿದೆ.
TAPVC ಸಮಸ್ಯೆಯಿಂದ ಬಳಲುತ್ತಿದ್ದ 20 ದಿನಗಳ ಹಸುಗೂಸು ಹೈದರಾಬಾದ್ ನಗರದ ನಿವಾಸಿ, ಟಂಕಸ್(Truncus) ರೋಗಕ್ಕೆ ತುತ್ತಾಗಿರುವ 3 ತಿಂಗಳಿನ ಮಗು ಹಾಗೂ ತುಮಕೂರು ಗ್ರಾಮಾಂತರ ಪ್ರದೇಶದ ನಿವಾಸಿ, ಈ ಇಬ್ಬರು ಮಕ್ಕಳಿಗೆ ಆಗಿರುವ ಹೃದಯ ಶಸ್ತ್ರಚಿಕಿತ್ಸೆ ಅತೀಸೂಕ್ಷ್ಮವಾಗಿದ್ದು, ಯಶಸ್ವಿಯಾಗಿದೆ. ಮುಂದೆ ಆ ಮಕ್ಕಳ ಭವಿಷ್ಯದಲ್ಲಿ ಬದುಕಿನ ಬೆಳಕು ಮೂಡಲಿದೆ ಎಂಬ ಸಂದೇಶವನ್ನು ಸಿದ್ಧಾರ್ಥ ಆಸ್ಪತ್ರೆಯ ವೈದ್ಯರ ತಂಡ ನೀಡಿದೆ. ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಸರಿಸಾಟಿಯಾಗಬಲ್ಲ ಆಧುನಿಕ ಉಪಕರಣಗಳ ಅಳವಡಿಕೆ, ತಜ್ಞ ವೈದ್ಯರ ತಂಡ ತುಮಕೂರಿನಂತಹ ಪ್ರದೇಶದಲ್ಲಿಯೂ, ಅತೀ ಸೂಕ್ಷ್ಮ ರೀತಿಯ ಹೃದಯ ಶಸ್ತ್ರ ಚಿಕಿತ್ಸೆಗಳನ್ನು ಮಾಡಬಹುದು ಎಂಬುದನ್ನು ‘ಕಾರ್ಡಿಯಾಕ್ ಫ್ರಾಂಟಿಡಾ ಹಾಗೂ ಸಿದ್ಧಾರ್ಥ ಹಾರ್ಟ್ ಸೆಂಟರ್’ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರ ತಂಡ ಸಾಬೀತು ಪಡಿಸಿದೆ ಎಂದು ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿಗಳು ಮತ್ತು ಶ್ರೀ ಸಿದ್ಧಾರ್ಥ ವೈದ್ಯಕೀಯ ಆಸ್ಪತ್ರೆ ಮತ್ತು ಕಾಲೇಜಿನ ನಿರ್ದೇಶಕರು ಆದ ಡಾ.ಜಿ.ಪರಮೇಶ್ವರ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಭಾರತದಿಂದ ವಿದೇಶಕ್ಕೆ ಹೋಗಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವ ಬದಲಾಗಿ, ವಿದೇಶದ ರೋಗಿಗಳು ತುಮಕೂರಿನಂತ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಮಟ್ಟದ ವೈದ್ಯಕೀಯ ಸೌಲಭ್ಯ ಪಡೆದುಕೊಳ್ಳಬಹುದು ಎಂಬುದನ್ನು ಕಳೆದ ಅಕ್ಟೋಬರ್‌ನಲ್ಲಿ ಆಸ್ಪತ್ರೆಯ ವೈದ್ಯರ ತಂಡ ಸಾಬೀತು ಪಡಿಸಿತ್ತು.
(ಕಳೆದ ವರ್ಷ’ಸಿದ್ಧಾರ್ಥ ಅಡ್ವಾನ್ಸ್ ಹಾರ್ಟ್ ಸೆಂಟರ್‌ನಲ್ಲಿ ‘ಛಾಯ’ ಹೆಸರಿನಲ್ಲಿ ಮಕ್ಕಳ ಹೃದಯ ಶಸ್ತ್ರಚಿಕಿತ್ಸಾ ಕೇಂದ್ರ, ವಿದೇಶಿ ಗುಣಮಟ್ಟದ ಆಧುನಿಕ ಸಲಕರಣೆಗಳನ್ನು ಒಳಗೊಂಡ ನುರಿತ ವೈದ್ಯರ ತಂಡದಿಂದ ಆರಂಭಗೊಂಡಿದ್ದು, ಸಾಹೇ ವಿಶ್ವವಿದ್ಯಾಲಯದ ಸಮೂಹ ತಂಡ ಈ ಯೋಜನೆಯ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದೆ. ತುಮಕೂರು ಸುತ್ತಮುತ್ತಲ ಜಿಲ್ಲೆಗಳಲ್ಲಿರುವ ಸಮಾಜದ ಕಟ್ಟಕಡೆಯ ಬಡವರ ಮಕ್ಕಳಿಗೆ ಈ ಆರೋಗ್ಯ ಸೇವೆ ದೊರಕಿಸಲು ಸಂಸ್ಥೆ ಈ ಕೈಂಕರ್ಯ ಕೈಗೊಂಡಿರುವುದನ್ನು ಇಲ್ಲಿ ಸ್ಮರಿಸಬಹುದು).
ಈಗ ಎರಡು ಮಕ್ಕಳಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ‘ಕಾರ್ಡಿಯಾಕ್ ಫ್ರಾಂಟಿಡಾ ಹಾಗೂ ಸಿದ್ಧಾರ್ಥ ಹಾರ್ಟ್ ಸೆಂಟರ್’ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಸಹ ಅಂತಾರಾಷ್ಟ್ರೀಯ ಗುಣಮಟ್ಟದ “ಹೃದಯ ತಜ್ಞರ ತಂಡ” ಮಾಡಿಕೊಂಡು, ವಿಶೇಷ ಮಾರ್ಗಸೂಚಿಗಳನ್ನು ಅಳವಡಿಸಿಕೊಂಡು ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡುತ್ತಾರೆಂಬದನ್ನು ಘೋಷಿಸಲು ನಮಗೆ ತುಂಬಾ ಸಂತೋಷವಾಗುತ್ತಿದೆ ಎನ್ನುತ್ತಾರೆ. ನಿರ್ದೇಶಕರು ಆದ ಡಾ.ಜಿ.ಪರಮೇಶ್ವರ ಅವರು. ಸೂಕ್ಷ್ಮವಾದ ಹೃದಯಶಸ್ತ್ರ ಚಿಕಿತ್ಸೆಯನ್ನು ತುಮಕೂರಿನಂತಹ ಶ್ರೇಣಿಯ ನಗರದಲ್ಲಿ ಮಾಡಿರುವುದು ದೊಡ್ಡ ಸಾಧನೆಯಾಗಿದೆ. ಇದು ಭವಿಷ್ಯದ ಪಥಕ್ಕೆ ಮುನ್ನುಡಿಯಾಗಲಿದೆ. ಸಂಕೀರ್ಣವಾದ ಮತ್ತು ಮಾರಣಾಂತಿಕವಾದ ಸಮಸ್ಯೆಯನ್ನು ಕಂಡುಹಿಡಿದು ಅದನ್ನು ಗುಣಪಡಿಸಬಹುದೆಂಬ ಇಲ್ಲಿನ ವೈದ್ಯರ ಸಾಹಸ ಮತ್ತು ಕರ್ತವ್ಯ ಪ್ರಜ್ಞೆಯನ್ನು” ‘ಕಾರ್ಡಿಯಾಕ್ ಫ್ರಾಂಟಿಡಾ’ ಹಾಗೂ ‘ಸಿದ್ಧಾರ್ಥ ಹಾರ್ಟ್ ಸೆಂಟರ್’ನ ಮುಖ್ಯಸ್ಥರಾದ ಡಾ. ತಮೀಮ್ ಅಹಮ್ಮದ್ ನೇತೃತ್ವದ ವೈದ್ಯ ಸಮೂಹಕ್ಕೆ ಮತ್ತು ತಾಂತ್ರಿಕ ತಜ್ಞರಿಗೆ ಹೃತ್ತೂರ್ವಕ ಧನ್ಯವಾದಗಳನ್ನು ಸಲ್ಲಿಸಿರುವ ಡಾ.ಜಿ.ಪರಮೇಶ್ವರ ಅವರು, ಗ್ರಾಮಾಂತರ ಪ್ರದೇಶಕ್ಕೆ ಈ ವೈದ್ಯ ತಂಡದ ಸೇವೆ ಇನ್ನುಷ್ಟು ದೊರೆಯಲಿ ಎಂದು ಆಶಿಸಿದ್ದಾರೆ.
ಮಕ್ಕಳ ರೋಗ ಪತ್ತೆಯ ಹಿನ್ನೆಲೆ:
ತುಮಕೂರು ಜಿಲ್ಲೆಯ ಗ್ರಾಮಾಂತರ ಪ್ರದೇಶದ ಕೃಷಿಕ ಕುಟುಂಬವೊಂದರ 90 ದಿನಗಳ ಮಗುವಿಗೆ (ಕುಟುಂಬದ ಕೋರಿಕೆಯಂತೆ ಹೆಸರು ಮತ್ತು ವಿಳಾಸವನ್ನು ಬಹಿರಂಗಗೊಳಿಸುತ್ತಿಲ್ಲ) ಸಮಸ್ಯೆ ಕಂಡು ಬಂದ ನಂತರ ತುಮಕೂರಿನ ‘ಸಿದ್ಧಾರ್ಥ ಅಡ್ವಾನ್ಸ್ ಹಾರ್ಟ್ ಸೆಂಟರ್’ನಲ್ಲಿ ಚಿಕಿತ್ಸೆ ದೊರೆಯುವ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ನಂತರ ಡಾ. ತಮೀಮ್ ಅಹಮ್ಮದ್ ಅವರ ಸಂಪರ್ಕ ಪಡೆದುಕೊಂಡು ಮಗುವಿಗೆ ಉಂಟಾಗಿರುವ ಹೃದಯರೋಗದ ಮೂಲವನ್ನು ಪತ್ತೆ ಹಚ್ಚಲಾಯಿತು. ಹುಟ್ಟಿನಿಂದಲೇ ಟ್ರಂಕಸ್(Truncus) ರೋಗಕ್ಕೆ ತುತ್ತಾಗಿರುವ ಮಗು 3 ತಿಂಗಳಿನದ್ದು. (ಜನ್ಮಜಾತ) ಹೃದಯ ರೋಗಕ್ಕೆ ಹಸುಳೆ ತುತ್ತಾಗಿತ್ತು. ಆದರೆ ಚಿಕಿತ್ಸೆ ಪಡೆದುಕೊಂಡಿರಲಿಲ್ಲ. ಶ್ವಾಸಕೋಸದಲ್ಲಿ ಉಸಿರಾಟಕ್ಕೆ ತೊಂದರೆಯಾಗಿ ಸಮಸ್ಯೆ ಉಲ್ಬಣಗೊಂಡಿದ್ದರ ಹಿನ್ನೆಲೆಯಲ್ಲಿ ತಪಾಸಣೆಗೆ ಒಳಗಾದಾಗ ರೋಗದ ಸಂಕೀರ್ಣತೆ ಮತ್ತು ತೀಕ್ಷತೆಯನ್ನು ಅರಿತ ಡಾ. ತಮೀಮ್ ಅಹಮ್ಮದ್ ನೇತೃತ್ವದ ತಂಡ ಹಸುಳೆಗೆ ಚಿಕಿತ್ಸೆ ನೀಡಿದೆ. ರಕ್ತದ ಹರಿಯುವಿಕೆಯಲ್ಲಿ ಒತ್ತಡ ಉಂಟಾಗಿ ಹೃದಯಕ್ಕೆ ತೊಂದರೆಯಾಗುತ್ತಿತ್ತು. ಈ ರೀತಿ ಕಾಂಜೆನೈಟಲ್ ಸಮಸ್ಯೆಯನ್ನು ಕುರಿತು ಆಸ್ಪತ್ರೆಯ ವೈದ್ಯರ ತಂಡ, ಸುದೀರ್ಘ ಅವಧಿ ಸಮಾಲೋಚನೆ ನಡೆಸಿ ಉನ್ನತ ತಂತ್ರಜ್ಞಾನ ಮತ್ತು ಆಧುನಿಕ ಉಪಕರಣದ ಮೂಲಕ ಶಸ್ತ್ರಚಿಕಿತ್ಸೆಯನ್ನು ಮಾಡಿ ಜನ್ಮಜಾತ ರೋಗವನ್ನು ಗುಣಪಡಿಸಿದ್ದಾರೆ. ಈ ಚಿಕಿತ್ಸೆಯಿಂದ ಮಗುವಿನ ಮುಂದಿನ ಬೆಳವಣಿಗೆ ಉತ್ತಮವಾಗಿದೆ. ಅಲ್ಲದೆ ಸಾಮಾನ್ಯರಂತೆ ಮುಂದಿನ ಭವಿಷ್ಯ ಕಂಡುಕೊಳ್ಳಲಿದೆ ಎಂದು ‘ಕಾರ್ಡಿಯಾಕ್ ಫ್ರಾಂಟಿಡಾ’ ಹಾಗೂ ‘ಸಿದ್ಧಾರ್ಥ ಹಾರ್ಟ್ ಸೆಂಟರ್’ ಮುಖ್ಯಸ್ಥರಾದ ಡಾ. ಡಾ.ತಮೀಮ್ ಅಹಮ್ಮದ್ ಹೇಳುತ್ತಾರೆ.
ಅದೇ ರೀತಿ 20 ದಿನಗಳ ಮತ್ತೊಂದು ಪುಟ್ಟ ಹಸುಳೆ ಹೈದರಾಬಾದ್ ಪ್ರಸಿದ್ಧ ಆಸ್ಪತ್ರೆಯಲ್ಲಿ ದಾಖಲಾಗಿ, ಅಲ್ಲಿ ಚಿಕಿತ್ಸೆ ಸಾಧ್ಯವಾಗದೆ ತುಮಕೂರಿನ ನಮ್ಮ ಆಸ್ಪತ್ರೆಗೆ ಬಂದಾಗ TAPVC ಸಮಸ್ಯೆಯಿಂದ ಬಳಲುತ್ತಿರುವುದನ್ನು ಪತ್ತೆ ಹಚ್ಚಲಾಯಿತು. ನಂತರ ಈ ಮಗುವಿನ ಶಸ್ತ್ರಚಿಕಿತ್ಸೆಯಲ್ಲಿ ಬಳಸುವ ಅತ್ಯಾಧುನಿಕ ಯಂತ್ರ ಮತ್ತು ವೈದ್ಯಕೀಯ ಸಾಧನಗಳನ್ನು ಬಳಸಿ ನಡೆಸಲಾದ ಅಪರೂಪದ ಶಸ್ತ್ರಚಿಕಿತ್ಸೆ ಇದಾಗಿದೆ. ಮಗು ಗುಣಮುಖ ಹೊಂದಿದ್ದು, ಎಲ್ಲರಂತೆ ಜೀವನ ನಡೆಸಬಹುದು ಎಂದು ಡಾ.ತಮೀಮ್ ಅಹಮ್ಮದ್ ಅವರು ಹೇಳಿದರು.
ಸಿದ್ಧಾರ್ಥ ಅಡ್ವಾನ್ಸ್ ಹಾರ್ಟ್‌ಸೆಂಟರ್’ನ ಮೇಲ್ವಿಚಾರಕರಾದ ಹಾಗೂ “ಕಾರ್ಡಿಯಾಕ್ ಫ್ರಾಂಟಿಡಾ” ಸಂಸ್ಥೆಯ ನಿರ್ದೇಶಕ ಡಾ.ತಮೀಮ್ ಅಹಮ್ಮದ್ ನೇತೃತ್ವದಲ್ಲಿ ಡಾ.ಶ್ರೀನಿವಾಸ್, ಡಾ.ವಿಕಾಸ್, ಡಾ.ಸುರೇಶ್, ಡಾ.ತಹೂರ್, ಡಾ.ವಾಂಗ್ಲುಕ್, ಡಾ.ಮಸ್ತಾನ್, ವಿವೇಕ್, ಜಾನ್ ಹಾಗೂ ತಾಂತ್ರಿಕ ಸಿಬ್ಬಂದಿಗಳನ್ನು ಒಳಗೊಂಡ ತಂಡ ಸರ್ವಸನ್ನದ್ಧವಾಗಿ ಕೆಲಸ ಮಾಡುತ್ತಿದೆ ಎನ್ನುತ್ತಾರೆ ಹಾರ್ಟ್ ಸೆಂಟರ್‌ನ ಸಿಇಓ ಹಾಗೂ ಉಪಪ್ರಾಂಶುಪಾಲರಾದ ಡಾ.ಪ್ರಭಾಕರ್.
ಆಸ್ಪತ್ರೆಯ ಸೌಲಭ್ಯಗಳು:
‘ಕಾರ್ಡಿಯಾಕ್ ಫ್ರಾಂಟಿಡಾ ಹಾಗೂ ಸಿದ್ಧಾರ್ಥ ಹಾರ್ಟ್ ಸೆಂಟರ್’ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿದ್ದು, 24 ಗಂಟೆ ತುರ್ತು ನಿಗಾ ಘಟಕ, ಪ್ರಯೋಗಾಲಯಗಳು, ವಿಕಿರಣ ಘಟಕ, ಸಿ ಟಿ ಸ್ಕ್ಯಾನ್, ಎಂಆರ್‌ಐ ಸ್ಕ್ಯಾನರ್ ಸೌಲಭ್ಯ ಒಳಗೊಂಡಿದೆ. ಪೂರ್ಣ ಪ್ರಮಾಣದ ಹೃದಯ ರೋಗಗಳ ಪತ್ತೆ, ಆಂಜಿಯೋಗ್ರಾಂ, ಆಂಜಿಯೋಪ್ಲಾಸ್ಟಿ, ಶಾಶ್ವತ ಪೇಸ್ಟೇಕರ್ ಅಳವಡಿಕೆ, ವಾಲ್‌ವೋಪ್ಲಾಸ್ಟಿ ಸೌಲಭ್ಯ ದೊರೆಯಲಿದೆ.
ಹೃದಯದ ಜನ್ಮ ಶತ್ರ ದೋಷ ರೋಗಕ್ಕೆ ತುತ್ತಾಗಿ ಜನಿಸಿದ ಮಗುವಿಗೆ ತಕ್ಷಣ ಶಸ್ತ್ರಚಿಕಿತ್ಸೆ ಮಾಡಿ, ಹೃದಯರೋ ಸರಿಪಡಿಸಿದರೆ, ಭವಿಷ್ಯದಲ್ಲಿ ಆರೋಗ್ಯವಂತ ಸಾಮಾನ್ಯ ವ್ಯಕ್ತಿಯಾಗಿ ಬೆಳೆಯಬಹುದು, ಹಣಕಾಸು, ಸೌಲಭ್ಯಗಳ ಕೊರತೆ ಮತ್ತು ಅಗತ್ಯವಿರುವ ವೈದ್ಯರ ಸಂಪರ್ಕದ ಕೊರತೆಯಿಂದ ಕನ್ನಚಿಕಿತ್ಸೆಯಿಂದ ದೂರ ಉಳಿದು ರೋಗ, ಸಂಪಡಿಸದಿದ್ದರೆ ರೋಗಿ ಬದುಕುಳಿಯುವುದಿಲ್ಲ ಎನ್ನುತ್ತಾರೆ ಹೃದಯ ರೋಗ ತಜ ಉದ ಡಾ. ಶಮೀಮ್ ಅಹಮ್ಮದ್, ಟೋಟಲ್ ಅನಾಲಸ್ ಪಲ್ಮನರಿ ವೇಯ್ಡ್ ರಿಟರ್ನ್ (TAPVR) ಹೃದಯದ ಜನ್ಮಜಾತ ದೋಷವಾಗಿದೆ. TAPVR ಹೊಂದಿರುವ ಮಗುವಿನಲ್ಲಿ, `ಅಮ್ಲಜನಕ -ಛಂತ ರಕ್ತವು ಶ್ವಾಸಕೋಶದಿಂದ ಎಡ ಹೃತ್ಕರ್ಣಕ್ಕೆ ಹಿಂತಿರುಗುವುದಿಲ್ಲ. ಇದಕ್ಕೆ ಬದಲಾಗಿ, ಆಮ್ಲಜನಕ~ ಶುದ್ಧ ರಕ್ತವು ಹೃದಯದ ಬಲಭಾಗಕ್ಕೆ ಮರಳುತ್ತದೆ. ಆಗ ಆಮ್ಲಜನಕ ಶುದ್ಧ ರಕ್ತವು ಅಮ್ಲಜನಕದ ಅಶುದ್ಧ ರಕ್ತದೊಂದಿಗೆ ಬೆರೆಯುತ್ತದೆ, ಇದರಿಂದ ಮಗುವಿನ ದೇಹಕ್ಕೆ ಅಗತ್ಯಕ್ಕಿಂತ ಕಡಿಮೆ ಅಮ್ಲಜನಕ ಪೂರೈಕೆಯಾಗುತ್ತದೆ, ಈ ದೋಷದೊಂದಿಗೆ ಬದುಕಲು, TAPVR ಹೊಂದಿರುವ ಶಿಶುಗಳು ಸಾಮಾನ್ಯವಾಗಿ ಬಲಾತ್ಕರ್ಣ ಮತ್ತು ಎಂಡ ಹೂಗಳಿದ ನಡುವೆ ರಂಧ್ರವನ್ನು ಹೊಂದಿರುತ್ತವೆ. (ಹೃತ್ಕರ್ಣದ ಸೆಪ್ಪಲ್ ದೋಷ) ಇದು ಅಶುದ್ಧ ರಕ್ತವನ್ನು ಹೃದಯದ ಎಡಭಾಗಕ್ಕೆ ಮತ್ತು ದೇಹದ ಉಳಿದ ಭಾಗಗಳಿಗೆ ಪಂಪ್ ಮಾಡುತ್ತದೆ. ಕೆಲವು ಮಕ್ಕಳು ಹೃತ್ಕರ್ಣದ ಸೆಲ್ ದೋಷವನ್ನು ಹೊರತುಪಡಿಸಿ TAPVR ಜೊತೆಗೆ ಇತರ ಹೃದಯ ದೋಷಗಳನ್ನು ಹೊಂದಿರಬಹುದು. ಈ ದೋಷವನ್ನು ಹೊಂದಿರುವ ಮಗುವಿಗೆ ಜನನದ ನಂತರ ಶೀಘ್ರದಲ್ಲೇ ಶಸ್ತ್ರಚಿಕಿತ್ಸೆ ಅಥವಾ ಇತರ ಕಾರ್ಯವಿಧಾನಗಳು ಬೇಕಾಗಬಹುದು, TAPVR ಅನ್ನು ನಿರ್ಣಾಯಕ ಜನ್ಮಜಾತ ಹೃದಯ ದೋಷವೆಂದು ಪರಿಗಣಿಸಲಾಗುತ್ತದೆ. ಅಮೇರಿಕಾದಲ್ಲಿ ಪ್ರತಿ ವರ್ಷ ಸುಮಾರು 504 ಶಿಶುಗಳು ಜನ್ಮಜಾತ ಹೃದಯ ದೋಷವನ್ನು ಒಳಗೊಂಡು ಜನಿಸುತ್ತವೆ ಎಂದು ಸಂಶೋಧಕರು ಅಂದಾಜಿಸಿದ್ದಾರೆ. ಭಾರತದಲ್ಲಿ ಅಂದಾಜು 1.7 ಮಿಲಿಯನ್ ಜನನ ದೋಷಗಳು 9,6 ನವಜಾತ ಮಕ್ಕಳ ಮರಣಕ್ಕೆ ಕಾರಣವಾಗಿವೆ. 2011 ರ ಜನಗಣತಿ ವರದಿಯು ಭಾರತದಲ್ಲಿ 78,64,636 ಮಕ್ಕಳು ಜನ್ಮಜಾತ ಹೃದಯ ದೋಷದಿಂದ ಏಕಲಾಂಗತೆಯೊಂದಿಗೆ ಜೀವಿಸುತ್ತಿದ್ದಾರೆ, ಇದು ಒಟ್ಟು ಮಕ್ಕಳ ಜನಸಂಖ್ಯೆಯ 1.7% ರಷ್ಟಿದೆಯೆಂದು ಸಂಶೋಧನೆಗಳು ಹೇಳುತ್ತವೆ. ದುಬಾರಿ ಚಿಕಿತ್ಸಾ ವೆಚ್ಚ TAPVC ಚಿಕಿತ್ಸೆಯ ವೆಚ್ಚವೂ ತೆರೆದ ಹೃದಯ ಶಸ್ತ್ರಚಿಕಿತ್ಸೆಯಂತೆಯೇ ಇರುತ್ತದೆ. ಬೆಂಗಳೂರು, ಚೆನ್ನೈ, ಹೈದರಾಬಾದ್ ಮತ್ತು ಮುಂಬೈ ನಗರಗಳಲ್ಲಿ ಕನಿಷ್ಠ 4 ಲಕ್ಷದಿಂದ ರೂ.ಯಿಂದ 8 ಲಕ್ಷ ರೂಪಾಯಿ ತನಕ ಚಿಕಿತ್ಸೆಗೆ ವೆಚ್ಚವಾಗುತ್ತದೆ. ತಜ್ಞರು ಮತ್ತು ಕಾರ್ಯ ವಿಧಾನಗಳ ವ್ಯತ್ಯಾಸದಿಂದಲೂ ಖರ್ಚು-ವೆಚ್ಚಗಳಲ್ಲಿ ಏರಿಳಿತಗಳನ್ನು ಕಾಣಬಹುದು.
ಟ್ರಂಕಸ್ ಆರ್ಟರಿಯೊಸಸ್ ಹೃದಯದ ಜನ್ಮ ದೋಷವಾಗಿದೆ. ಬೆಳೆಯುತ್ತಿರುವ ಮಗುವಿನ ಹೃದಯದಿಂದ ಹೊರಬರುವ ರಕ್ತನಾಳವು ಬೆಳವಣಿಗೆಯ ಸಮಯದಲ್ಲಿ ಸಂಪೂರ್ಣವಾಗಿ ಬೇರ್ಪಡಲು ವಿಫಲವಾದಾಗ ಈ ರೋಗ ಸಂಭವಿಸುತ್ತದೆ, ಮಹಾಪಧಮನಿ ಮತ್ತು ಶ್ವಾಸಕೋಶದ ಅಪಧಮನಿಯ ನಡುವಿನ ಸಂಪರ್ಕವನ್ನು ಬಿಟ್ಟುಬಿಡುತ್ತದೆ. ಆಗ ರಕ್ತಸಂಚಲನದಲ್ಲಿ ಆಗುವ ಏರು-ಪೇರಿನಿಂದ ಹೃದಯ ಕೆಲಸಕ್ಕೆ ತೊಂದರೆಯುಂಟಾಗಿ ಈ ರೋಗ ಉಲ್ಬಣಿಸುತ್ತದೆ, ಸಾಮಾನ್ಯ ಟ್ರಂಕಸ್’ ಎಂದೂ ಕರೆಯಲ್ಪಡುವ ಟ್ರಂಕಸ್ ಆರ್ಟಿರಿಯೊಸಸ್ TRUNG-kus ahr-teer-e-O-sus ಎಂದು ಉಚ್ಚರಿಸಲಾಗುತ್ತದೆ, ಇದು ಹೃದಯದ ಅಪರೂಪದ ದೋಷವಾಗಿದ್ದು, ಸಾಮಾನ್ಯ ಎರಡು ನಾಳಗಳ ಬದಲಿಗೆ ಒಂದೇ ಸಾಮಾನ್ಯ ರಕ್ತನಾಳವು ಹೃದಯದಿಂದ ಹೊರಬರುತ್ತದೆ. ಇದರ ಮೂಲಕ ರಕ್ತಸಂಚಾರವಾಗುತ್ತದೆ. ಎಂದು ಪತ್ರಿಕಾ ಗೋಷ್ಟಿಯಲ್ಲಿ ತಿಳಿಸಿದರು.