ಮುಂಬರುವ ಚುನಾವಣೆಗಳಲ್ಲಿ ಮುಸ್ಲಿಂರಿಗೆ ಟಿಕೆಟ್ ನೀಡಲು ಒತ್ತಾಯ

ತುಮಕೂರು: ಮುಂಬರುವ ಚುನಾವಣೆಗಳಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷವು ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂದು ದಲಿತ ಸಂಘಟನೆಗಳು ಹಾಗೂ ಪ್ರಗತಿಪರ ಸಂಘಟನೆಗಳು ಕಾಂಗ್ರೆಸ್ ಪಕ್ಷವನ್ನು ಒತ್ತಾಯಿಸಿವೆ.

 

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಸಂಘಟನೆಗಳು, ಕಾಂಗ್ರೆಸ್ ಪಕ್ಷವು ಇಡೀ ರಾಷ್ಟ್ರದಲ್ಲಿ ತನ್ನದೇ ಆದ ತತ್ವ, ಸಿದ್ಧಾಂತ, ನನ್ನ, ಪ್ರಾಮಾಣಿಕತೆ ಹಾಗೂ ಕಟ್ಟಕಡೆಯ ಸಾಮಾನ್ಯ ಕಾರ್ಯಕರ್ತರು ಸರಿಸಮಾನರಾಗಿ ನಿಂತು ತಮ್ಮ ಅನಿಸಿಕೆ ಅಭಿಪ್ರಾಯವನ್ನು ವ್ಯಕ್ತಪಡಿಸಲು ಮುಕ್ತ ಬೇಧಿಕೆಗಳನ್ನು ನೀಡಿದ ಪಕ್ಷ, ಹಾಗೆ ಕಾಂಗ್ರೆಸ್ ಪಕ್ಷವು ದಲಿತರ, ದಮನಿತರ, ಶೋಷಿತರ ಪರ ನಿಂತು ಗಟ್ಟಿಧ್ವನಿಯಲ್ಲಿ ಶೋಷಣೆಯ ವಿರುದ್ಧ ನಿಲುವುಗಳನ್ನು ತೆಗೆದುಕೊಂಡ ಹಲವು ಘಟನೆಗಳು ಇತಿಹಾಸದಲ್ಲಿ ಇನ್ನೂ ಜೀವಂತವಾಗಿವೆ. ಭಾರತದಂತಹ ರಾಷÀ್ಟ್ರದಲ್ಲಿ ದಲಿತರ ಮತ್ತು ಅಲ್ಪಸಂಖ್ಯಾತರರು ನಿರ್ಭೀತಿಯಿಂದ ಸಮಾಜದಲ್ಲಿ ಜೀವನ ನಡೆಸಲು ಹಾಗೂ ಅತಿಸಣ್ಣ ಸಮುದಾಯದಿಂದ ಹಿಡಿದು ಅತೀದೊಡ್ಡ ಸಮುದಾಯದ ಕಡುಬಡವರು ಒಂದು ಘನತೆಯ ಜೀವನವನ್ನು ನಡೆಸಲು ಹಿಂದೆ ಇದ್ದ ಕಾಂಗ್ರೆಸ್ ಪಕ್ಷವು ಬಡವರ ಪರವಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಬಡತನವನ್ನು ನಿರ್ಮೂಲನೆ ಮಾಡಲು ಶ್ರಮಿಸುತ್ತಿರುವ ಪಕ್ಷ ಕಾಂಗ್ರೆಸ್ ಎಂದು ತಿಳಿಸಿದ್ದಾರೆ.

 

 

 

 

ತುಮಕೂರು ಜಿಲ್ಲೆಯಲ್ಲಿ ಸುಮಾರು 3.20 ಲಕ್ಷÀ ಮತದಾರರನ್ನು ಹೊಂದಿರುವ ಅಲ್ಪಸಂಖ್ಯಾತರ ಸಮುದಾಯವು ಕಳೆದ ಜಿಲ್ಲಾ ಪರಿಷತ್ ಮತ್ತು ಜಿಲ್ಲಾ ಪಂಚಾಯಿತಿ ಅವಧಿಗಳಲ್ಲಿ ಇಲ್ಲಿಯವರೆಗೂ ಕೇವಲ ಒಬ್ಬ ವ್ಯಕ್ತಿ ಆಯ್ಕೆಯಾಗಿರುವ ನಿದರ್ಶನ ಇಲ್ಲ, ಹಾಗೆ, ತುಮಕೂರು ನಗರದ ತುಮಕೂರು ತಾಲ್ಲೂಕು ವಿಧಾನಸಭಾ ಕ್ಷೇತ್ರದಲ್ಲಿ 1989ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ಅಭ್ಯರ್ಥಿ ಗೆಲುವು ಸಾಧಿಸಿದ್ದು, ಹೊರತುಪಡಿಸಿದರೆ 2013 ರಲ್ಲಿ ಮತ್ತೊಂದು ಅವರಿಗೆ ಅಲ್ಪಸಂಖ್ಯಾತ ಅಭ್ಯರ್ಥಿ ಆಯ್ಕೆಯಾಗಿದ್ದಾರೆ, ಆದರೆ 1993-94 ರ ನಂತರ ಸುಮಾರು 20 ವಷÀðಗಳ ಮೇಲೆ 2018ರ ಚುನಾವಣೆಯಲ್ಲಿ ದಲಿತರ ಅಲ್ಪಸಂಖ್ಯಾತರ ಪರಿಸ್ಥಿತಿಗಳು ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ನಿರ್ಲಕ್ಷö್ಯಕ್ಕೆ ಒಳಗಾಗಿದ್ದಾರೆ. ಹಾಗೂ ಸರ್ಕಾರದ ನಾಮ ನಿರ್ದೇಶನ ಮಾಡುವುದರಲ್ಲಿಯೂ ಅನ್ಯಾಯಕ್ಕೆ ಒಳಗಾಗಿದ್ದಾರೆ. ಈ ಮೇಲಿನ ಅಂಶಗಳನ್ನು ಪರಿಗಣಿಸಿ, ಮುಂದೆ ನಡೆಯಲಿರುವ ೨೦೨೩ರ ಚುನಾವಣೆಯಲ್ಲಿ ಸ್ಥಳೀಯ ಅಲ್ಪಸಂಖ್ಯಾತ (ಮುಸ್ಲಿಂ) ಸಮುದಾಯದ ವ್ಯಕ್ತಿಗಳು ಪಕ್ಷಕ್ಕಾಗಿ ಪಕ್ಷವನ್ನು ಸಂಘಟಿಸಿ, ಶೋಷಿತರ ಪರವಾಗಿ ಧ್ವನಿ ಎತ್ತಿ ಜನರ ಕಷÀ್ಟ ಸುಖಗಳಿಗೆ ಸ್ಪಂದಿರುವ ವ್ಯಕ್ತಿಗಳಿಗೆ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಘೋಷಿಸಲು ಒತ್ತಾಯಿಸುತ್ತೇವೆ. ಒಂದು ವೇಳೆ ಹೊರಗಿನವರಿಗೆ ಇತರೆ ಸಮುದಾಯದವರಿಗೆ ಕಾಂಗ್ರೆಸ್ ಪಕ್ಷವು ಟಿಕೆಟ್ ಘೋಷಿಸಿದಲ್ಲಿ, ಇದರ ಪರಿಣಾಮ ತುಮಕೂರು ಜಿಲ್ಲೆಯ 1 ವಿಧಾನಸಭಾ ಕ್ಷೇತ್ರಗಳಲ್ಲಿ ಕೆಟ್ಟ ಪರಿಣಾಮ ಬೀರುವುದು ಖಂಡಿತ. ಆದ್ದರಿಂದ ಮುಂದೇ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವೇ ರಾಜ್ಯವನ್ನು ಆಳುವ ಎಲ್ಲಾ ಲಕ್ಷಣಗಳು ಕಾಣುತ್ತಿರುವುದರಿಂದ ಪಕ್ಷದ ಬಿ. ಫಾರಂ ಪಡೆಯಲು ಎಲ್ಲರೂ ತುದಿಗಾಲಲ್ಲಿ ನಿಂತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪಕ್ಷವು ನಮ್ಮೆಲ್ಲರ ಕೋರಿಕೆಯಂತೆ. ತುಮಕೂರು ನಗರದಲ್ಲಿ ಸ್ಥಳೀಯವಾಗಿ ಚಿರಪರಿಚಿತರಾಗಿರುವ ಕಾಂಗ್ರೆಸ್ ಪಕ್ಷದ ತತ್ವ, ಸಿದ್ಧಾಂತವನ್ನು ಮೈಗೂಡಿಸಿಕೊಂಡಿರುವ ಅಭ್ಯರ್ಥಿಗಳಿಗೆ ತಾವು ಜವಾಬ್ದಾರಿಯನ್ನು ನೀಡಬೇಕು ಹಾಗೂ ಮೊದಲಿ£ಂದ ಇಲ್ಲಿಯವರೆಗೆ ಕಾಂಗ್ರೆಸ್ ಪಕ್ಷದಲ್ಲಿ ಪಕ್ಷಕ್ಕೋಸ್ಕರ ದುಡಿದವರಿಗೆ ಪಕ್ಷವು ಅವಮಾನಿಸದೆ ಅವರನ್ನು ಅವರ ಸೇವೆ, ತ್ಯಾಗಗಳನ್ನು ಗಂಭೀರವಾಗಿ ಪರಿಗಣಿಸಿ ಅಲ್ಪಸಂಖ್ಯಾತರ ಸಮುದಾಯದ (ಮುಸ್ಲಿಂ) ವ್ಯಕ್ತಿಗಳಿಗೆ ಟಿಕೇಟ್ ನೀಡಬೇಕೆಂದು ನಮ್ಮ ಎಲ್ಲಾ ಸಂಘಟನೆಗಳ ಪರವಾಗಿ ಈ ನಿರ್ಣಯದ ಮನವಿಯನ್ನು ತಮಗೆ ಗೌರವಪೂರ್ವಕವಾಗಿ ನೀಡುತ್ತಿದ್ದೇವೆ.

 

 

 

ಈ ಸಂದರ್ಭದಲ್ಲಿ ರಾಮಯ್ಯ ಟಿ ಸಿ.ಸಿದ್ದೇಶ್ ನ್ಯೂಸ್ ರಾಜಣ್ಣ ಗೂಳೂರು ಅಮರ್ ರಂಗಸ್ವಾಮಿ hಶೇಖರ್ ಛಲವಾದಿ ಮಾರುತಿ s ಹರೀಶ್ ಮಲ್ಲಿಕಾರ್ಜುನ ಸುರೇಶ್ ಸೇರಿದಂತೆ ಮತ್ತಿತರರಿದ್ದರು.

Leave a Reply

Your email address will not be published. Required fields are marked *

error: Content is protected !!