ಪಿಂಜಾರ ನದಾಫ್ ಸಮುದಾಯದವರಿಗೆ ಪ್ರವರ್ಗ-1ರ ಜಾತಿ ಪ್ರಮಾಣ ಪತ್ರ ವಿತರಿಸುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಪ್ರತಿಭಟನೆ

ತುಮಕೂರು : ಸರ್ಕಾರ ಹಿಂದುಳಿದ ವರ್ಗ ಅಲ್ಪಸಂಖ್ಯಾತ ಸಮುದಾಯಗಳು ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸಬಲೀಕರಣ ಗೊಳ್ಳಲಿ ಎಂಬ ದೃಷ್ಟಿಯಿಂದ ಅನೇಕ ಸೌಲಭ್ಯ ಸವಲತ್ತುಗಳನ್ನು ವಿತರಣೆ ಮಾಡುತ್ತಿದ್ದು ಮುಸ್ಲಿಂ ಸಮುದಾಯದ ಉಪಜಾತಿಗಳಲ್ಲಿ ಒಂದಾದ ಪಿಂಜಾರ ನದಾಫ್ ಸಮುದಾಯಗಳಿಗೆ ಪ್ರವರ್ಗ -1ರ ಅಡಿಯಲ್ಲಿ ಜಾತಿ ಪ್ರಮಾಣ ಪತ್ರವನ್ನು ವಿತರಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಲಾಗಿದ್ದು ಇತ್ತೀಚೆಗೆ ತಾಲೂಕು ಕಚೇರಿಗಳಲ್ಲಿ ಈ ಸಮುದಾಯಗಳಿಗೆ ಸರಿಯಾಗಿ ಜಾತಿ ಪ್ರಮಾಣ ಪತ್ರವನ್ನು ವಿತರಣೆ ಮಾಡುತ್ತಿಲ್ಲವೆಂದು ಪಿಂಜಾರ ನದಾಫ್ ಸಮುದಾಯದರಿಂದ ಪ್ರತಿಭಟನೆ ನಡೆಸಲಾಯಿತು.

 

 

 

ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪಿಂಜಾರ ನದಾಪ ಸಮುದಾಯದ ಜಿಲ್ಲಾಧ್ಯಕ್ಷ ಬಶೀರ್ ಅಹಮದ್ ಅವರ ನೇತೃತ್ವದಲ್ಲಿ ಸರಿಯಾಗಿ ಜಾತಿ ಪ್ರಮಾಣ ಪತ್ರ ವಿತರಣೆ ಮಾಡುವಂತೆ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಲಾಯಿತು.

 

 

 

 

 

ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಬಶೀರ್ ಅಹಮದ್ ಅವರು ಮಾತನಾಡಿ ಪಿಂಜಾರ ನದಾಫ್ ಸಮುದಾಯದವರಿಗೆ ಅಧಿಕಾರಿಗಳು ಪ್ರವರ್ಗ ಒಂದರ ಜಾತಿ ಪ್ರಮಾಣ ಪತ್ರ ವಿತರಣೆ ಮಾಡಲು ನಿರ್ಲಕ್ಷ ವಿಳಂಬ ಧೋರಣೆ ತೊರುತ್ತಿದ್ದು ಸಮುದಾಯದವರು ಅನೇಕ ಬಾರಿ ಕಚೇರಿಗಳಿಗೆ ವಿನಾಕಾರಣ ಅಲೆದು ತಿರುಗಿದರು ಪ್ರಮಾಣ ಪ್ರತ ವಿತರಣೆ ಮಾಡಲಾಗುತ್ತಿಲ್ಲ ಪ್ರಮಾಣ ಪತ್ರ ನೀಡುವಂತೆ ಸರ್ಕಾರದ ಆದೇಶವಿದ್ದರೂ ಈ ಆದೇಶವನ್ನು ಅಧಿಕಾರಿಗಳು ಗಾಳಿಗೆ ತೋರಿ ಪ್ರಮಾಣ ಪತ್ರ ವಿತರಣೆ ಮಾಡುವಲ್ಲಿ ವಿಫಲರಾಗಿದ್ದು ಕೂಡಲೇ ಜಿಲ್ಲಾಧಿಕಾರಿಗಳು ಎಲ್ಲಾ ತಾಲೂಕು ಕಚೇರಿಗಳಲ್ಲಿ ಪಿಂಜಾರ ನದಾಫ ಸಮುದಾಯದವರಿಗೆ ಪ್ರವರ್ಗ ಒಂದರ ಜಾತಿ ಪ್ರಮಾಣ ಪತ್ರ ವಿತರಣೆ ಮಾಡುವಂತೆ ಆದೇಶ ನೀಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸಮುದಾಯದವರಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸಮುದಾಯದವರಿಂದ ಅರಬೆತ್ತಲೆ ಪ್ರತಿಭಟನೆ ನಡೆಸಲಾಗುವುದೆಂದು ಅವರು ಹೇಳಿ ಎಚ್ಚರಿಕೆ ನೀಡಿದರು.

 

 

 

 

ತುಮಕೂರು ಪ್ರವರ್ಗ ಒಂದರ ಜಾತಿ ಪ್ರಮಾಣ ಪತ್ರ ನೀಡುವಂತೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಂತರ ಸಮುದಾಯದ ಜಿಲ್ಲಾಧ್ಯಕ್ಷ ಬಷೀರ್ ಅಹಮದ್ ರವರ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ್ ರವರಿಗೆ ಮನವಿ ಸಲ್ಲಿಸಲಾಯಿತು ಪಿಂಜಾರ ನದಾಫ್

 

 

 

 

ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಬಷೀರ್ ಅಹಮದ್, ಕಾರ್ಯದರ್ಶಿ ಮಹಬೂ ಪಾಷ, ನಿರ್ದೇಶಕರಾದ ಜಿಯಾ ವುಲ್ಲಾ, ಇಮ್ರಾನ್, ನಜೀರ ಅಹ್ಮದ್ ಹಜರತ್ ಸಾಹೇಬ್, ನದಾಫ್ ಜಾಫರ್ ಸಾಬ್, ಸೈಯದ್ ಸುಭಾನ್ ಜಾವೇದ್ ಇನ್ನೂ ಹಲವು ಮುಖಂಡರುಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!