ಮೋದಿ ಆಗಮನದ ಹಿನ್ನಲೆಯಲ್ಲಿ ತುಮಕೂರಿನ ಹೆಚ್.ಎ.ಎಲ್.‌ ಘಟಕದಲ್ಲಿ ಲಕ್ಷ ಜನರನ್ನು ಸೇರಿಸಲಿರುವ ಬಿಜೆಪಿ

ಕಲ್ಪತರುನಾಡು ತುಮಕೂರಿಗೆ ಪ್ರಧಾನಿ ನರೇಂದ್ರಮೋದಿ “ಮೇನಿಯ” HAL ಕಾರ್ಖಾನೆ ಉದ್ಘಾಟನೆ ಮತ್ತು ಜಲ ಜೀವನ್ ಮಿಷನ್ ಯೋಜನೆಯ ಶಂಕುಸ್ಥಾಪನೆಗೆ ಫೆಬ್ರವಲ 6 : ಗುಣ್ಣಗೆ ಪ್ರಧಾನಿ ನರೇಂದ್ರಮೋದಿ ಆಗಮನ

 

 

 

ತುಮಕೂರು : ಪ್ರಧಾನಿ ನರೇಂದ್ರಮೋದಿರವರು ಗುಬ್ಬಿಯ ಬಿದರೆಹಳ್ಳಿ ಕಾವಲ್‌ ನಲ್ಲಿ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್‌ನ ಲಘು ಹೆಲಿಕ್ಯಾಪ್ಟರ್ ಕಾರ್ಖಾನೆ ಉದ್ಘಾಟನೆ ಮತ್ತು ಚಿಕ್ಕನಾಯಕನಹಳ್ಳಿ ಹಾಗೂ ತಿಪಟೂರು ತಾಲ್ಲೂಕಿನ ವ್ಯಾಪ್ತಿಯ ಮನೆ ಮನೆಗೆ ಗಂಗೆ ಹರಿಸುವ “ಜಲ್ ಜೀವನ್ ಮಿಷನ್ ಯೋಜನೆಗೆ ಶಂಕುಸ್ಥಾಪನೆಯ ಸರ್ಕಾರಿ ಪ್ರಯೋಜಿತ ಕಾರ್ಯಕ್ರಮ ನಡೆಸುವ ಸಂಬಂಧ ಇದೇ ಫೆಬ್ರವರಿ 6ರ ಸೋಮವಾರ ಪ್ರಧಾನಿ ನರೇಂದ್ರಮೋದಿರವರು ಆಗಮಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸುಮಾರು 1 ಲಕ್ಷ ಜನರು ಸೇರುವ ಸಂಭವವಿದೆ.

 

 

 

 

ಪ್ರಧಾನಿ ನರೇಂದ್ರ ಮೋದಿರವರು ಗುಬ್ಬಿ ಮಧ್ಯಾಹ್ನ 3.30ಕ್ಕೆ ಆಗಮಿಸಿ, ಮಧ್ಯಾಹ್ನ 4.30ರವರೆಗೆ ಸುಮಾರು 70 ನಿಮಿಷಗಳ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ದೇಶಕ್ಕೆ ಮಹತ್ತರ ಸಂದೇಶ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ರಕ್ಷಣಾ ಇಲಾಖೆ, HAL ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಪ್ರಧಾನಿ ನರೇಂದ್ರಮೋದಿರವರು ತಾವೇ ಶಂಕುಸ್ಥಾಪನೆ ಮಾಡಿ, ತಾವೇ ಉದ್ಘಾಟನೆಗೆ ಚಾಲನೆ ನೀಡುವ, ಮಾಡುವಲ್ಲಿ ಸಿದ್ಧಹಸ್ತರಾಗಿದ್ದಾರೆ., ದೇಶದ ಪ್ರಧಾನಿಯಾಗಿ 9 ವರ್ಷಗಳ ಅವಧಿಯಲ್ಲಿ ಹಲವಾರು ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸುವ ಮೂಲಕ ನುಡಿದಂತೆ ನಡೆಯುವ, ಅಭಿವೃದ್ಧಿಯ ಹರಿಕಾರರಾಗಿದ್ದಾರೆ.

 

 

 

 

 

ತುಮಕೂರು ಜಿಲ್ಲೆ ಇಂದು ಜಗತ್ತಿನ ಭೂಪಟದಲ್ಲಿ ಗುರುತಿಸುವ ಸ್ಥಳವಾಗಿ ಮಾರ್ಪಟಾಗಿದ್ದು, ಲಘು ಹೆಲಿಕ್ಯಾಪ್ಟರ್ ನಿರ್ಮಾಣದ ಗುಬ್ಬಿಯ HAL ಕಾರ್ಖಾನೆ 2ನೇ ಅತೀ ದೊಡ್ಡ ಪ್ರಾಜೆಕ್ಟ್ ಆಗಿದ್ದು, ಆತ್ಮನಿರ್ಭರ ಯೋಜನೆಯಡಿಯಲ್ಲಿ ನಿರ್ಮಾಣವಾಗುತ್ತಿರುವ ಬಹುದೊಡ್ಡ ಯೋಜನೆ ಇದಾಗಿದೆ.

 

 

ಬಿಜೆಪಿಯಿಂದ ಶೋಭಾಯಾತ್ರೆ ಹಾಗೂ ಬೈಕ್‌ ರಾಲಿ

ತುಮಕೂರು ಸಂಘಟನಾತ್ಮಕ ಜಿಲ್ಲೆಯ ತುಮಕೂರು ನಗರ, ತುಮಕೂರು ಗ್ರಾಮಾಂತರ, ಗುಬ್ಬಿ, ತುರುವೇಕೆರೆ, ಚಿಕ್ಕನಾಯನಹಳ್ಳಿ, ಕುಣಿಗಲ್, ತಿಪಟೂರು ಮಂಡಲಗಳ ಪದಾಧಿಕಾರಿಗಳು, ಪ್ರಮುಖರು, ಕಾರ್ಯಕರ್ತರು, ಸಾರ್ವಜನಿಕರು ಪಕ್ಷದ ಹಿತೈಷಿಗಳು ತಮ್ಮಗಳ ವ್ಯಾಪ್ತಿಯಲ್ಲಿ ಪ್ರಮುಖ ರಸ್ತೆಗಳಲ್ಲಿ ಸಂಭ್ರಮದ ಶೋಭಾಯಾತ್ರೆ ಹಾಗೂ ಬೃಹತ್ ಬೈಕ್‌ ರಾಲಿಗಳ ಮೂಲಕ ಗುಬ್ಬಿಯ ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಲಿದ್ದಾರೆ.

 

 

 

ಗುಬ್ಬಿ HAL ಹೆಲಿಕ್ಯಾಪ್ಟರ್ ಘಟಕದ ನಿರ್ಮಾಣಕ್ಕೆ 610 ಎಕರೆ ಪ್ರದೇಶದಲ್ಲಿ ಆರಂಭಗೊಳ್ಳಲಿರುವ ತಯಾರಿಕಾ ಘಟಕದ ಭೂಮಿ ಪೂಜೆಯನ್ನು 2016ರಂದು ಪ್ರಧಾನಿ ನರೇಂದ್ರಮೋದಿರವರು ಮಾಡಿದ್ದರು. ಈ ಘಟಕದಲ್ಲಿ ಇಂಡೋ- ರಷ್ಯನ್ ಜಂಟಿ ಯೋಜನೆಯಾಗಿರುವ KA 226T ಅವಳಿ ಇಂಜಿನ್ ಹೆಲಿಕ್ಯಾಪ್ಟರ್ ಮತ್ತು 3 ಟನ್ ಸಾಮಥ್ಯದ ಹೊಸ ಪೀಳಿಗೆ ಲೈಟ್ ಯುಟಿಲಿಟಿ ಹೆಲಿಕ್ಯಾಪ್ಟರ್ (LUH)ಗಳನ್ನು “ಮೇಕ್ ಇನ್ ಇಂಡಿಯಾ” ಮತ್ತು “ವೋಕಲ್ ಫಾರ್ ಲೋಕಲ್” ಎಂಬ ಘೋಷಣೆಯ ಅಡಿಯಲ್ಲಿ ತಯಾರಿಸುವ ಯೋಜನೆ ಇದಾಗಿದೆ. ಇಲ್ಲಿ ಮುಂದಿನ 15 ವರ್ಷಗಳಲ್ಲಿ 600 ಹೆಲಿಕ್ಯಾಪ್ಟರ್ ಉತ್ಪಾದನೆಯ ಗುರಿ ಇದೆ. ಈಗಾಗಲೇ HAL ರಕ್ಷಣಾ ಇಲಾಖೆ ಹಾಗೂ ವಿವಿಧ ಖಾಸಗಿ ಕಂಪನಿಗಳು ಮುಂಗಡವಾಗಿ ಆರ್ಡರ್ ಪಡೆದಿರುವುದು ಸಂತಸದ ವಿಷಯವಾಗಿದೆ.

 

 

 

 

 

 

 

ಗುಬ್ಬಿ ಸ್ಥಾವರವು ಜಿಲ್ಲೆ ಮತ್ತು ರಾಜ್ಯಾದ್ಯಾಂತ ಕೈಗಾರಿಕಾ ಬೆಳವಣಿಗೆಯನ್ನು ವಿಕೇಂದ್ರಿಕರಿಸುವ ಗುರಿಯನ್ನು ಹೊಂದಿದ್ದು, ಅಭಿವೃದ್ಧಿ, ಉದ್ಯೋಗ ಸೃಷ್ಟಿಯ ಜೊತೆಗೆ ಸ್ಥಳೀಯ ಮಟ್ಟದಲ್ಲಿ ಕೌಶಲ್ಯ ಪೂರ್ಣ ಕಾರ್ಮಿಕ ಹಾಗೂ ತಾಂತ್ರಿಕ ಪರಿಣತಿಯ ಬಳಕೆಯನ್ನು ಉತ್ತೇಜಿಸಿ, ಸ್ಥಳೀಯ ಮತ್ತು ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಂದ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಡೆಗಟ್ಟುತ್ತದೆ. ಸ್ಥಳೀಯ ಪ್ರದೇಶದ ವ್ಯಾಪ್ತಿಯಲ್ಲಿ ಆರ್ಥಿಕತೆಯ ಬೆಳವಣಿಗೆ ಹೊಂದಿ, ಜನ ಸಮಾನ್ಯರಿಗೆ ಅನುಕೂಲಕರ ವಾತಾವರಣ ಸೃಷ್ಠಿಯಾಗುತ್ತದೆ.

 

 

 

 

ಈ ಹೆಲಿಕ್ಯಾಪ್ಟರ್ ಘಟಕದಿಂದ ಎಂಜಿನಿಯರಿಂಗ್ ಕಾಲೇಜು, ಡಿಪ್ಲೋಮಾ ಶಿಕ್ಷಣ ಅಥವ ಕೋರ್ಸ್‌ನಿಂದ ಹೊರ ಬರುವ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ಪಡೆದ Skilled ವೃತ್ತಿಪರರಿಗೆ ಅನುಕೂಲವಾಗಲಿದೆ. ಹೊಸ ತಂತ್ರಜ್ಞಾನದ ಹರಿವಿನೊಂದಿಗೆ, ನಿರಂತರ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಈ ಘಟಕದಲ್ಲಿ ವಿಶೇಷ ತಾಂತ್ರಿಕ ಪರಿಣಿತಿ, ಅರ್ಹತೆ ಇರುವುವವರಿಗೆ ಆದ್ಯತೆ ಸಿಗಲಿದೆ. ಇದಲ್ಲದೆ, ಸ್ಥಳೀಯ, ಜಿಲ್ಲೆ, ರಾಜ್ಯಗಳ ವಿವಿಧ ಭಾಗಗಳಲ್ಲಿ ಪೂರಕ ಘಟಕ (Ancilary Unit)ಗಳು ಆರಂಭಗೊಂಡು, ಉದ್ಯಮವು ಬೆಳೆದು ಉದ್ಯೋಗ ಸೃಷ್ಠಿಯಾಗಲಿದೆ.

 

 

ಈ ಘಟಕವು ಅತ್ಯಂತ ಸುಸಜ್ಜಿತ, ವ್ಯವಸ್ಥಿತವಾದ ಸಮಗ್ರ ಪ್ಯಾಕೇಜ್‌ಗಳಿಂದ ಕೂಡಿದ್ದು, ಮೂಲ ಸೌಕರ್ಯಗಳು ಮತ್ತು ಸಹಾಯಕ ಘಟಕಗಳನ್ನು ಬೆಂಬಲಿಸಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿಶಂಕರ್‌ ರವರು ತಿಳಿಸಿದರು.

 

 

 

 

 

ಈ ಸಂಧರ್ಭದಲ್ಲಿಯೇ ಪ್ರಧಾನಿ ನರೇಂದ್ರಮೋದಿರವರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಹಾಗೂ ತಿಪಟೂರು ತಾಲ್ಲೂಕುಗಳ ಪ್ರತಿ ಗ್ರಾಮ ಮನೆ-ಮನೆಗಳಿಗೆ ನಲ್ಲಿ ಮೂಲಕ ಕುಡಿಯುವ ನೀರು ಪೂರೈಕೆಯ “ಜಲ್ ಜೀವನ್ ಮಿಷನ್” ಕಾಮಗಾರಿಗಳ ಶಂಕುಸ್ಥಾಪನೆಯನ್ನು ನೆರವೇರಿಸಲಿದ್ದಾರೆ, ದೇಶಾದ್ಯಂತ 9 ಕೋಟಿ ಮನೆಗಳಿಗೆ ಮನೆ ಮನೆಗೆ ನೀರು ಹರಿಯುವಂತೆ ಕಾರ್ಯಕ್ರಮ ಜಾರಿಗೊಳಿಸಿ, ಸುಮಾರು 11 ಕೋಟಿ ಮನೆಗಳಿಗೆ ಕುಡಿಯುವ ನೀರು ಪೂರೈಸುವ ಮಹಾತ್ವಾಂಕ್ಷೆಯ ಯೋಜನೆ ಜಾರಿಗೆ ಪ್ರಧಾನಿ ಮುಂದಾಗಿದ್ದು, ಗ್ರಾಮೀಣ ಪ್ರದೇಶದ ಜನರಿಗೆ ಆರೋಗ್ಯ-ಸುರಕ್ಷೆ ದೃಷ್ಠಿಯಿಂದ ಕೈಗೊಂಡಿರುವ ಕಾರ್ಯಕ್ರಮ ದಿಟ್ಟ, ಐತಿಹಾಸಿಕ ನಿರ್ಧಾರವಾಗಿದ್ದು, ದೇಶದೆಲ್ಲಡೆ ಪ್ರಶಂಸೆಗೆ ಪಾತ್ರವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿಶಂಕರ್‌ ರವರು ತಿಳಿಸಿದರು.

 

 

 

ಪತ್ರಿಕಾಗೋಷ್ಠಿಯಲ್ಲಿ ಸಂಸದ ಜಿ.ಎಸ್.ಬಸವರಾಜು, ಬಿ.ಎಸ್.ನಾಗೇಶ್‌ (ಬಾವಿಕಟ್ಟೆ ನಾಗಣ್ಣ) ಸದಾಶಿವಯ್ಯ, ಹೆಚ್.ಎನ್.ಚಂದ್ರಶೇಖರ್ ಹಾಗೂ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!