ದಿನಂಪ್ರತಿ ಹೆಚ್ಚುತ್ತಲೇ ಇದೆ ಸಾಲಬಾದೆ ತಾಳಲಾರದೆ ರೈತ ಆತ್ಮಹತ್ಯೆ ಪ್ರಕರಣಗಳು

 

ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಬೆಂಡೋಣಿ ಗ್ರಾಮದ ಸಿದ್ದರಾಜು ಬಿ ಎನ್ ಬಿನ್ ನರಸಿಂಹಯ್ಯ (45) ಎಂಬ ಬಡರೈತ ಸಾಲಬಾದೆ ತಾಳಲಾರದ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.

 

 

 

 

 

ಬೆಂಡೋಣಿ ಗ್ರಾಮದ ಸರ್ವೆ ನಂಬರ್ 22/2 ರ ತನ್ನ ಜಮೀನಿನ ತುಗಲಿ ಮರಕ್ಕೆ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕೊರಟಗೆರೆ ಕೆನರಾ ಬ್ಯಾಂಕ್ ಶಾಖೆಯಲ್ಲಿ ಜಮೀನಿನ ಅಭಿವೃದ್ಧಿಗೆ ಸುಮಾರು 5 ಲಕ್ಷಕ್ಕೂ ಹೆಚ್ಚು ಸಾಲವನ್ನು ಪಡೆದಿದ್ದರು

ವಿಎಸ್ಎಸ್ಎನ್ ಬೆಂಡೋಣಿ ಶಾಖೆಯಲ್ಲಿ 1 ಲಕ್ಷ ಸಾಲ ಪಡೆದಿದ್ದರು ನಂತರ ಖಾಸಗಿ ಫೈನಾನ್ಸ್ ಸಂಸ್ಥೆಯಾದ ಸಮಸ್ತ ಫೈನಾನ್ಸ್ ನಲ್ಲಿ 70,000 ರೂ ಗಳನ್ನೂ ಹೈನುಗಾರಿಕೆಗಾಗಿ ಸಾಲ ಪಡೆದಿದ್ದರು .

 

 

 

 

ತನ್ನ ಮಗನ ಆರೋಗ್ಯದ ಕಾರಣದಿಂದ ಸ್ಥಳೀಯ ಸಾರ್ವಜನಿಕರೊಂದಿಗೆ ಕೈಸಾಲವನ್ನು ಸಹ ಮಾಡಿಕೊಂಡಿದ್ದರು.

ಸಾಲವನ್ನು ತೀರಿಸಲಾಗದೆ ಪ್ರತಿನಿತ್ಯ ಪರದಾಡುತ್ತಿದ್ದ ವ್ಯಕ್ತಿಗೆ ಕೆನರಾ ಬ್ಯಾಂಕ್ ಸಾಲವನ್ನು ತೀರಿಸುವಂತೆ ನೋಟಿಸನ್ನು ನೀಡಲಾಗಿತ್ತು.

ಹೀಗಾಗಿ ಸಾಲವನ್ನು ತೀರಿಸಲಾಗದೆ ಮಕ್ಕಳ ವಿದ್ಯಾಭಾಸವನ್ನು ಮಾಡಿಸಲಾಗದೆ ಜೀವನದಲ್ಲಿ ಜಿಗುಪ್ಸೆಗೊಂಡ ಈ ಬಡ ರೈತ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.

 

 

 

 

 

ಸ್ಥಳಕ್ಕೆ ಕೊರಟಗೆರೆ ಪೊಲೀಸ್ ಠಾಣೆಯ ಪಿಎಸ್ಐ ಚಂದ್ರಕಾಲ ಮತ್ತು ಸಿಬ್ಬಂದಿಗಳ ಬೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ಗ್ರಾಮಸ್ಥರ ಮತ್ತು ಅಕ್ಕ ಪಕ್ಕದ ಜಮೀನಿನ ಮಾಲೀಕರ ಮಹಜರ್ ನಡೆಸಿ ಪ್ರಕರಣ
ದಾಖಲಿಸಿಕೊಂಡು ಕೊರಟಗೆರೆಯ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಮೃತ ದುರ್ದೈವಿಯ ಶವವನ್ನು ದಾಖಲು ಮಾಡಲಾಗಿದೆ.

 

 

 

 

ಇನ್ನಾದರೂ ಸರ್ಕಾರ ಎಚ್ಚೆತ್ತು ಬಡವರ ಕಲ್ಯಾಣಕ್ಕಾಗಿ ಮತ್ತು ಬಡವರ ಏಳಿಗೆಗಾಗಿ ಸಾಲ ಮನ್ನ ಮಾಡಬೇಕಾಗಿದೆ…

Leave a Reply

Your email address will not be published. Required fields are marked *

error: Content is protected !!