ಕಾಲೇಜ್ ಶುಲ್ಕ ಕಟ್ಟಲಿಲ್ಲ ಎಂದು ವಿದ್ಯಾರ್ಥಿಗಳಿಗೆ ಪರೀಕ್ಷೆ ನಿರಾಕರಿಸಿದ ಖಾಸಗಿ ಕಾಲೇಜು.
ತುಮಕೂರಿನಲ್ಲಿ ಖಾಸಗಿ ಕಾಲೇಜು ಒಂದು ವಿದ್ಯಾರ್ಥಿಗಳಿಗೆ ಕಾಲೇಜು ಶುಲ್ಕ ಕಟ್ಟಿಲ್ಲ ಎಂದು ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ನಿರಾಕರಿಸಿರುವ ಘಟನೆ ವರದಿಯಾಗಿದೆ.
ತುಮಕೂರಿನ ಎಸ್.ಎಸ್ ಪುರಂ ನ ಆಕಾಶ್ ಕಾಲೇಜಿನಲ್ಲಿ ಘಟನೆ ನಡೆದಿದ್ದು ಪರೀಕ್ಷೆಗೆ ಎಂದು ಹಾಜರಾಗಿದ್ದ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ ಶಾಕ್ ನೀಡಿದ್ದು ವಿದ್ಯಾರ್ಥಿಗಳಿಗೆ ಹಣ ಕಟ್ಟುವಂತೆ ಒತ್ತಡ ಹಾಕಿ ವಿದ್ಯಾರ್ಥಿಗಳಿಗೆ ಇಂದು ನಡೆಯಬೇಕಿದ್ದ ಕನ್ನಡ ಪರೀಕ್ಷೆಯಿಂದ ಹೊರಹಾಕಿ ವಿದ್ಯಾರ್ಥಿಗಳಿಗೆ ವಂಚಿಸಿರುವ ಘಟನೆ ವರದಿಯಾಗಿದೆ.
ಘಟನೆ ತಿಳಿಯುತ್ತಿದ್ದಂತೆ ವಿದ್ಯಾರ್ಥಿಗಳ ಪೋಷಕರು ಕಾಲೇಜಿಗೆ ದೌಡಾಯಿಸಿ ಆಡಳಿತ ಮಂಡಳಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಕೂಡಲೇ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ನೀಡುವಂತೆ ಒತ್ತಡ ಹೇರಿದರೂ ಸಹ ಕಾಲೇಜಿನ ಆಡಳಿತ ಮಂಡಳಿ ಕೆಲ ವಿದ್ಯಾರ್ಥಿಗಳಿಗೆ ಪರೀಕ್ಷೆ ನೀಡದೇ ಇದ್ದುದ್ದರಿಂದ ವಿದ್ಯಾರ್ಥಿಗಳು ಕಂಗಾಲಾಗಿ ಕಾಲೇಜಿನಲ್ಲಿ ಸಮಯ ಕಳೆಯುವಂತಾಯಿತು.
ಇನ್ನು ಕೆಲ ಪೋಷಕರು ಕಾಲೇಜಿನ ಆಡಳಿತ ಮಂಡಳಿಯ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕಿದ್ದು ರಾತ್ರಿಯಲ್ಲ ಹಗಲಿರುಳು ಓದಿದ ಮಕ್ಕಳಿಗೆ ಕಾಲೇಜಿನ ಆಡಳಿತ ಮಂಡಳಿ ಶುಲ್ಕದ ಹೆಸರಿನಲ್ಲಿ ಪರೀಕ್ಷೆಯನ್ನ ನೀಡದೆ ವಂಚಿಸಿರುವುದು ನಿಜಕ್ಕೂ ಪೋಷಕರು ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು ಆಡಳಿತ ಮಂಡಳಿಯನ್ನ ಕೆಲ ಪೋಷಕರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಇದುವರೆಗೂ ಏಟ್ರಿಯ ಎಂಬ ಹೆಸರಿನಲ್ಲಿ ಕಾಲೇಜು ನಡೆಯುತ್ತಿದ್ದು ಈಗ ಹಟಾತ್ತನೆ ಆಕಾಶ್ ಎಂದು ಕಾಲೇಜಿನ ಹೆಸರು ಹಾಗೂ ಆಡಳಿತ ಮಂಡಳಿ ಬದಲಾಗಿದ್ದು ಹಿಂದಿನ ಆಡಳಿತ ಮಂಡಳಿ ಹಾಗೂ ಈಗ ಕಾಲೇಜು ನಡೆಸುತ್ತಿರುವ ಆಕಾಶ್ ಕಾಲೇಜಿನ ಆಡಳಿತ ಸಿಬ್ಬಂದಿಗೂ ಹಣದ ವಿಷಯದಲ್ಲಿ ಗೊಂದಲ ಉಂಟಾಗಿದ್ದು ಅದನ್ನು ಬಗೆಹರಿಸುವ ಬದಲು ವಿದ್ಯಾರ್ಥಿಗಳಿಗೆ ಶುಲ್ಕದ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಿರಾಕರಿಸಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಇನ್ನಾದರೂ ಸಂಬಂಧ ಪಟ್ಟ ಇಲಾಖೆಗಳು ಇಂತಹ ಕಾಲೇಜುಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇನ್ನು ಸ್ಥಳದಲ್ಲಿ ಕೆಲ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲೆಂದು ಹಗಲಿರುಳು ಶ್ರಮ ಹಾಕಿ ಓದಿದ್ದ ವಿದ್ಯಾರ್ಥಿಗಳು ಪರೀಕ್ಷೆ ನೀಡದೆ ಇದ್ದುದರಿಂದ ಕಂಗಾಲಾಗಿ ನಿಂತಿದ್ದು ವಿದ್ಯಾರ್ಥಿಗಳ ಆತಂಕಕ್ಕೆ ಕಾರಣವಾಗಿದೆ.