ರಾಜಕೀಯಕ್ಕೆ ಸಂಪೂರ್ಣ ವಿದಾಯ ಹೇಳಿದ್ರಾ : ರಾಜಾಹುಲಿ ಬಿ.ಎಸ್.ವೈ.

ಬೆಂಗಳೂರು: ವಿಧಾನಸಭೆಯಲ್ಲಿದು ನನ್ನ ಕೊನೆಯ ಭಾಷಣ. ಇನ್ನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಇನ್ನೆಂದೂ ವಿಧಾನಸಭೆ ಪ್ರವೇಶಿಸುವುದಿಲ್ಲ ಎಂದು ಬಿಜೆಪಿ ಶಾಸಕ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಭಾವುಕರಾಗಿ ನುಡಿದರು.

 

 

 

ಬಜೆಟ್ ಅಧಿವೇಶನದಲ್ಲಿ ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಈಗಾಗಲೇ ಹೇಳಿದ್ದೇನೆ. ಮತ್ತೆ ನಾನು ಸದನದ ಒಳಗೆ ಬರುವ ಪ್ರಶ್ನೆಯೇ ಇಲ್ಲ ಎಂದು ದೃಢವಾಗಿ ಹೇಳಿದರು.

 

 

 

 

ಈ ವೇಳೆ ಯಡಿಯೂರಪ್ಪ ತುಸು ಭಾವುಕರಾಗಿರುವುದು ಕಂಡುಬAತು. ಯಡಿಯೂರಪ್ಪ ಅವರು ವಿಧಾನಸಭೆಯಲ್ಲಿದು ಕೊನೆಯ ಭಾಷಣ ಎಂದು ಹೇಳುತ್ತಿದ್ದಂತೆಯೇ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ, ಜೆಡಿಎಸ್ ಶಾಸಕ ಶಿವಲಿಂಗೇಗೌಡ ಸೇರಿದಂತೆ ಪ್ರತಿಪಕ್ಷಗಳ ನಾಯಕರು ಅವರ ಮನವೊಲಿಸುವಂತೆ ಮಾತನಾಡಿದರು. ನೀವು ಹಿರಿಯ ನಾಯಕರು, ಮತ್ತೆ ಸದನ ಪ್ರವೇಶಿಸಬೇಕು ಎಂದರು.

Leave a Reply

Your email address will not be published. Required fields are marked *

error: Content is protected !!