ತುಮಕೂರು ಜಿಲ್ಲಾ ಬಂಧಿಖಾನೆಯಲ್ಲಿ ಹಣ ನೀಡಿದರೆ ಏನೂ ಬೇಕಾದರೂ ಲಭ್ಯ !!!!

ಸಾಮಾನ್ಯ ಜ್ಞಾನ ಕೊರತೆ ಇರುವವರ ಮುಂದೆ ಜೈಲು ಎಂಧಾಕ್ಷಣ ಏನೋ ಒಂದು ರೀತಿಯ ಕೀಳರಿಮೆ ಮೂಡುವುದು ಸಹಜ. ವಾಸ್ತವದಲ್ಲಿ ಜೈಲು ಎಂದರೆ ಮನ ಪರಿವರ್ತನಾ ಕೇಂದ್ರ. ಪೈಶಾಚಿಕ ಮನಸ್ಥಿತಿ ಅಪರಾಧ ಮನೋಭಾವವುಳ್ಳವರ ಮನಸ್ಸು ಪರಿವರ್ತನೆಗಾಗಿ ಇರುವ ಒಂದು ವ್ಯವಸ್ಥಿತ ಸ್ಥಳ. ಇಲ್ಲಿರುವವರೆಲ್ಲರೂ ಅಪರಾಧಿಗಳಲ್ಲ. ಪ್ರತಿಶತ 50ಕ್ಕೂ ಅಧಿಕ ಆಪಾದಿತರುಗಳು ಇರುತ್ತಾರೆ. ಆಪಾದಿತರು ಆರೋಪಿಗಳಲ್ಲ. ಗುರುತರವಾದ ಆಪಾದನೆಗಳು  ಬಂದಾಗ ನ್ಯಾಯಾಲಯದ ಜಾಮೀನು ಸಿಗುವವರೆಗೂ ಬಂದಿಖಾನೆಯಲ್ಲಿರುವವರು ಇದ್ದಾರೆ.

 

 

 

ಅಪರಾಧಿಗಳಿರಲಿನಿರಪರಾಧಿಯೇ ಆಗಿರಲಿ ಅವನ ಮನಸ್ಸು ಪರಿವರ್ತನೆಯನ್ನಾಗಿ ಮಾಡುವ ಒಂದು ವ್ಯವಸ್ಥೆಯನ್ನು ಕಲ್ಪಿಸುವುದೇ ಬಂದಿಕಾನೆಯ ಮೂಲ ಉದ್ದೇಶ. ಇಲ್ಲಿನ ಖೈದಿಗಳಿಗೆ ಓದಲು ಲೈಬ್ರರಿ , ಬರೆಯಲು ಪುಸ್ತಕ ಎಲ್ಲಾ ವ್ಯವಸ್ತೆಯನ್ನ ಮಾಡಲಾಗಿದೆ. ಆದರೆ ಬಳಕೆಯಾಗುತ್ತಿಲ್ಲ . ಅಂದರೆ ಬಳಸಲು ಬಿಡುತ್ತಿಲ್ಲ. ತುಮಕೂರು ಜಿಲ್ಲಾ ಕಾರಾಗೃಹದ ಪರಿಸ್ಥಿತಿಯನ್ನ ನೋಡಿದರೆ ಇಲ್ಲಿ ನಿಜಕ್ಕೂ ಮನ ಪರಿವರ್ತನೆ ಸಾದ್ಯವೇ ಎಂಬ ಪ್ರೆಶ್ನೆ ಮೂಡುತ್ತದೆ.  

 

 

 

 

ಎರಡು ಸುತ್ತಿನ ಕೋಟೆ ತುಮಕೂರು ಜೈಲು. ಮೊದಲ ಸುತ್ತಿನ ಕೋಟೆಯನ್ನು ಪ್ರವೇಶಿಸಿದರೆ ತೀರಾ ವಿಶಾಲವಾಗಿ ಇಲ್ಲದಿದ್ದರೂ ಸುಮರಾದ ಮೈದಾನ. ಎಡಕ್ಕೆ ಆರೋಪಿಗಳನ್ನು ನೋಡಲು ಬರುವವರು ಕುಳಿತುಕೊಳ್ಳಲು ಕಲ್ಲಿನ ಬೆಂಚು. ಅದರ ಪಕ್ಕದಲ್ಲಿ ಸಾರ್ವಜನಿಕ ಶೌಚಾಲಯ. ಬಲಭಾಗದಲ್ಲಿ ಕುಡಿಯುವ ನೀರಿಗಾಗಿ ಈಗ ಕೆಲವು ವರ್ಷಗಳ ಹಿಂದಷ್ಟೇ ಅಚ್ಚು ಕಟ್ಟಾಗಿ ತೊಳೆದ ಸಿಸ್ಟನ್ ಟ್ಯಾಂಕ್. ಅದಕ್ಕೆ ತಿರುಗಿಸಿದರು ನೀರು ಬಾರದ ಎರಡು ಮೂರು ನಲ್ಲಿಗಳು. ಪ್ರತಿನಿತ್ಯ ಆಪಾದಿತರುಗಳನ್ನು ನೋಡಲು ನೂರಾರು ಮಂದಿ ಬರುತ್ತಾರೆ. ಸಾರ್ವಜನಿಕರ ಶೌಚಾಲಯದ ಪರಿಸ್ಥಿತಿಯನ್ನ ಹೇಳುವಂತು ಇಲ್ಲಕಣ್ಣಿನಲ್ಲಿ ನೋಡುವಂತು ಇಲ್ಲ. ಎರಡನೇ ಗೋಡೆಗೆ ಹಾಕಿರುವ ಬೃಹತ್ ಕಬ್ಬಿಣದ ಗೇಟುಗಳನ್ನು ದಾಟಿ ಹೋದರೆ ಜೈಲಿನ ಅಧೀಕ್ಷಕಿ ಶಾಂತ ಶ್ರೀ ಯ ಅಕ್ರಮಗಳ ಸಂಸ್ಥಾನ. ಈ ಸಂಸ್ಥಾನದ ಕಾರ್ಯ ವೈಖರಿ , ಇಲ್ಲಿಯ ನರಕ ಯಾತನೆಯ ಬಗ್ಗೆ ಒಳಗೆ ಅನುಭವಿಸಿದ ಮತ್ತು ಅನುಭವಿಸುತ್ತಿರುವ  ಖೈದಿಗಳು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ದೂರು ನೀಡಿದ್ದಾರೆ. 

 

 

 

 

ಇಲ್ಲಿಗೆ ಭೇಟಿ ನೀಡುವ ಎಲ್ಲಾ ಉನ್ನತ ಅಧಿಕಾರಿಗಳಿಗೆ ಮಾಸಿಕವಾಗಿ ಒಂದು ಲಕ್ಷಎರಡು ಲಕ್ಷ ರೂ.ಗಳನ್ನು ಅಧಿಕಾರಿಗಳ ದರ್ಜೆಗೆ ತಕ್ಕಂತೆ ಲಂಚ ನೀಡಲಾಗುತ್ತಿದೆಯಂತೆ! ಇದನ್ನು ಪ್ರಶ್ನಿಸುವ ಕೈದಿಗಳು ನೀವು ಏನೂ ಮಾಡಲು ಸಾಧ್ಯವಿಲ್ಲ ಎಂದು ಜೈಲಿನ ಅಧೀಕ್ಷಕಿ ಶಾಂತ ಶ್ರೀ ಯವರು ಧಮ್ಕಿ ಹಾಕುತ್ತಾರಂತೆ!!!!

 

 

 

 

ತಾನು ಮಾಡಿದ್ದೇ, ಮಾಡುತ್ತಿರುವುದೇ ತಪ್ಪು, ಅಂತಹದರಲ್ಲಿ ಈಕೆ ಬೇರೊಬ್ಬರನ್ನೂ ಇದರೊಳಗೆ ಸಿಲುಕಿಸಲು ಹೊರಟಿರುವುದನ್ನು ನೋಡಿದರೇ ಬೆಚ್ಚಿ ಬೀಳುಸುವಂತಹ ಸ್ಥಿತಿ ಕಣ್ಣ ಮುಂದೆ ಬರುತ್ತದೆ.

 

 

 

ಹೌದು ಆಕೆಯೇ ಹೇಳಿಕೊಂಡಂತೆ ಎಲ್ಲಾ ಅಧಿಕಾರಿಗಳು ಇಲ್ಲಿಗೆ ಬರುವುದು ಮಾಮೂಲಿ ಲಂಚ ಪಡೆಯಲೇ ಹೊರತು ನಿಮ್ಮ ಯೋಗಕ್ಷೇಮ ವಿಚಾರಿಸಲು ಅಲ್ಲ. ಯಾವನಾದರೂ ದೂರು ನೀಡುವ ಸಾಹಸ ಮಾಡಿದರೇ ಬಾಲಬಿಚ್ಚಿದರೆ ಅಂತಹವರ ಮನೆ ಮಠ ಮಾರಿಸುತ್ತೇನೆ. ಹೆಂಡತಿ ಮಕ್ಕಳನ್ನು ಅಡಮಾನ ಇರಿಸುತ್ತೇನೆ. ನೀವುಗಳು ಸಾಯುವವರೆಗೂ ಜೈಲಿನಲ್ಲೇ ಕೊಳೆಯವಂತೆ ಮಾಡುತ್ತೇನೆ ಹೀಗೆಂದು ಖೈದಿಗಳಿಗೆ ಬೆದರಿಸಿದ್ದಾರೆ. ಎಂಬ ಗುರುತರವಾದ ಆರೋಪಕ್ಕೆ ತುಮಕೂರು ಜಿಲ್ಲಾ ಕಾರಾಗೃಹದ ಅಧೀಕ್ಷಕಿ ಶಾಂತ ಶ್ರೀ ಗುರಿಯಾಗಿದ್ದಾರೆ.

 

 

 

 

 

ಇದೇ ವಾರ್ಡನ್ ಶಾಂತಿನಾಥ್ ಭರತೇಶ್ ಕುರ್ದ ಮತ್ತು ಅಸಿಸ್ಟೆಂಟ್ ಜೈಲರ್ ಬಸಪ್ಪ ಬಿಜ್ಜೂರು ರವರುಗಳೇ ಜೈಲಿನ ಖೈದಿಗಳ ಪಾಲಿನ ಯಮಕಿಂಕರರು. ಖೈದಿಗಳನ್ನು ನೋಡಲು ಅವರ ಬಂಧುಗಳು , ಸ್ನೇಹಿತರು ಯಾರೇ ಬರಲಿ ಅವರ ಜೇಬಿನ ತೂಕವನ್ನ ಕರಗಿಸುತ್ತಿರುವವರು ಇದೇ ಯಮ ಕಿಂಕರರುಗಳು. ಇವರುಗಳು ಒಳಗಿನ ಖೈದಿಗಳನ್ನ ಮತ್ತು ಅವರನ್ನು ನೋಡಲು ಬರುವವರ ರಕ್ತ ಹೀರುವ ಕಲೆಯನ್ನು ಪಾರಂಗತ ಮಾಡಿಕೊಂಡಿದ್ದಾರೆ.

 

 

 

 

 

 

 

ಶಾಂತ ಶ್ರೀ ಖೈದಿಗಳ ಕೈಯಿಂದ ಬೀಡಿ ಸಿಗರೇಟ್ ಮಾರಾಟ ಮಾಡಿಸುತ್ತಿದ್ದಾರೆ ಅಂತಾ ಜಾಮೀನಿನ ಮೇಲೆ ಬಿಡುಗಡೆಯಾದ ಖೈದಿಗಳು ಆರೋಪಿಸುತ್ತಾರೆ. ಅಡ್ಮಿಷನ್ , ರಿಲೀಸ್ , ಎಕ್ಸ್ಟಟ್ರಾ … ಎಕ್ಸಟ್ರಾ ಎಲ್ಲದಕ್ಕೂ ಸುಲಿಗೆ ಮಾಡುವದನ್ನೇ ಜೈಲಿನ ಸಿಬ್ಬಂದಿಗಳು ಕಾಯಾಕ ಮಾಡಿಕೊಂಡಿದ್ದಾರೆ. ಜೈಲಿನ ಒಳಗೆ ಕ್ಯಾಂಟಿನ್ ವ್ಯವಸ್ತೆ ಮಾಡಲಾಗಿದೆ. ಈ ಕ್ಯಾಂಟಿನ್ ವ್ಯವಸ್ಥೆ ಮುಂಚೆ ಇರಲಿಲ್ಲ. ಇದನ್ನ ಯಾರು ಯಾವ ಕಾಲದಲ್ಲಿ ಮಾಡಿದರೋ ಗೊತ್ತಿಲ್ಲ. ಈ ಕ್ಯಾಂಟಿನ್ ಖೈದಿಗಳನ್ನ ಸುಲಿಗೆ ಮಾಡಲು ರಾಜ ಮಾರ್ಗ. ಕ್ಯಾಂಟಿನ್ ನಿಂದ ಪ್ರತಿ ತಿಂಗಳು 1 ಲಕ್ಷ ಮಾಮೂಲಿ ವಸೂಲಾಗುತ್ತಿದೆ. ದಿನಸಿ , ಹಾಲು , ಮೊಟ್ಟೆ , ಮಾಂಸ , ಹೌಸ್ ಕೀಪಿಂಗ್  ಸರಬರಾಜುದಾರರಿಗೆ ಸುವರ್ಣ ಯುಗ. ಶಾಂತಮ್ಮ ನ ಜೇಬು ಬರ್ತಿ ಮಾಡಿದರೆ ಇವರುಗಳ ಚೀಲ ಭರ್ತಿ ಮಾಡಿಕೊಳ್ಳಲು ಶಾಂತಮ್ಮ ಸಹಿ ಹಾಕುತ್ತಾರೆ. ಖೈದಿಗಳಿಗೆ ತಿಂಗಳಿನಲ್ಲಿ ಎರಡುಬಾರಿ ಚಿಕನ್ ಮತ್ತು ಒಂದು ಬಾರಿ ಮಟನ್ ಕೊಡಬೇಕೆಂಬ ನಿಯಮವಿದೆಯಂತೆ. ಆದರೆ ಮಟನ್ ನೀಡಿ ಎಷ್ಟೋ ವರ್ಷಗಳೇ ಆಗಿದೆ. ಆದರೆ ಮಟನ್ ಸರಬರಾಜುದಾರನಿಗೆ ಬಿಲ್ ಮಾತ್ರ ತಪ್ಪದೆ ಪಾವತಿಯಾಗಿದೆ ಎಂದು ಹೇಳಲಾಗುತ್ತಿದೆ. 

 

 

 

 

 

 

ತುಮಕೂರು ಜಿಲ್ಲಾ ಬಂಧಿಖಾನೆಯಲ್ಲಿರುವವರನ್ನು ನೋಡಲು ಬಂದವರಿಂದ ಜೈಲಿನ ಸಿಬ್ಬಂದಿ ಹಣ ಪಡೆಯುತ್ತಾರೆ ಎಂಬ ಆರೋಪ ಕೇಳಿಬಂದಿದೆ,ಈ ಮಧ್ಯೆ ಜೈಲಿನ ಸಿಬ್ಬಂದಿ‌ ಸಾರ್ವಜನಿಕರಿಂದ ಹಣ ಪಡೆಯುತ್ತಿರುವ ವಿಡಿಯೋ ವೈರಲ್ ಆಗಿದೆ.

 

 

 

 

 

ಜಿಲ್ಲಾ ಕಾರಾಗೃಹದಲ್ಲಿನ ಅವ್ಯವಸ್ಥೆ ಬಗ್ಗೆ ಬಂಧೀಖಾನೆ ನಿವಾಸಿಗಳು ಜಿಲ್ಲಾಧಿಕಾರಿ, ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಎ.ಡಿ.ಜಿ.ಪಿ, ಲೋಕಾಯುಕ್ತ, ಮಾನವಹಕ್ಕುಗಳ ಆಯೋಗ ಹಾಗೂ ಗೃಹಸಚಿವರಿಗೆ ದೂರು ನೀಡಿದ್ದಾರೆ.

40 ಕ್ಕೂ ಹೆಚ್ಚು ಬಂಧೀಖಾನೆ ನಿವಾಸಿಗಳು ನಾಲ್ಕೈದು ಪುಟಗಳಲ್ಲಿ ಬಂಧಿಖಾನೆ ಸಮಸ್ಯೆಗಳ ವಿಸ್ಕೃತ ವಿವರಣೆಯನ್ನು ದೂರಿನಲ್ಲಿ ವಿವರಿಸಿದ್ದಾರೆ.

 

 

 

 

ತುಮಕೂರು ತಾಲೂಕಿನ ಊರುಕೆರೆ ಬಳಿಯಿರುವ ಜಿಲ್ಲಾಕಾರಾಗೃಹದಲ್ಲಿ  ಸಮರ್ಪಕವಾಗಿ ಊಟ ನೀಡದ ಬಗ್ಗೆ ಅಧೀಕ್ಷಕರ ವಿರುದ್ದ ಆರೋಪ ಕೇಳಿಬಂದಿದೆ ಈ ಸಂಬಂಧ ಕಳೆದ ವಾರ ವಿಚಾರಣಾಧಿನ ಖೈದಿಗಳು ಕಳಪೆ ಗುಣಮಟ್ಟದ ಆಹಾರ ಹಾಗೂ ಜೈಲಿನ ಅಕ್ರಮಗಳ ಬಗ್ಗೆ ಜೈಲಿನ ಅಧೀಕ್ಷಕಿ ಶಾಂತಶ್ರೀ ವಿರುದ್ದ ಅಸಮಾಧಾನ ವ್ಯಕ್ತಪಡಿಸಿ ಜೈಲಿನಲ್ಲಿಯೇ ಪ್ರತಿಭಟನೆ ನಡೆಸಿದ್ದರು.

 

 

 

 

ದೂರಿನ ಆಧಾರದ ಮೇರೆಗೆ ಸ್ಥಳಕ್ಕೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ . ತುಮಕೂರು ಜೈಲಿನಲ್ಲಿ ಇಷ್ಟೆಲ್ಲಾ ಅದ್ವಾನ ನಡೆಯುತ್ತಿದ್ದರೂ ಜೈಲು ಅಧೀಕ್ಷಕಿ ಹಾಗೂ ಸಿಬ್ಬಂದಿ ವಿರುದ್ದ ಉನ್ನತಾಧಿಕಾರಿಗಳು ಕ್ರಮಕ್ಕೆ ಮುಂದಾಗದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

Leave a Reply

Your email address will not be published. Required fields are marked *

error: Content is protected !!