ಲಾರಿ ಆಟೋ ನಡುವೆ ಡಿಕ್ಕಿ : ಮಗು ಸಾವು ನಾಲ್ವರಿಗೆ ತೀವ್ರ ಗಾಯ

ಕುಣಿಗಲ್ : ಲಾರಿ ಹಾಗೂ ಆಟೋ ನಡುವೆ ಸಂಬವಿಸಿದ ಭೀಕರ ಅಪಘಾತದಲ್ಲಿ ಮಗು ಮೃತಪಟ್ಟು ನಾಲ್ವರು ತೀವ್ರವಾಗಿ ಗಾಯಗೊಂಡಿದ್ದು ಹಲವರ ಸ್ಥಿತಿ ಚಿಂತಾಜನಕವಾಗಿರುವ ಘಟನೆ ರಾಜ್ಯ ಹೆದ್ದಾರಿ 33 ಟಿ.ಎಂ ರಸ್ತೆ ಗವಿಮಠ ಸಮೀ‌ಪ ಶನಿವಾರ ಸಂಬವಿಸಿದೆ

 

 

 

ಬೆಂಗಳೂರಿನ ಹೆಗ್ಗರೆ ಮೂಲದ ತನ್ವಿಕ(3) ಮೃತ ಮಗು ಐಶ್ವರ್ಯ , ಸರಸ್ವತಿ, ಮುನಿಯಮ್ಮ, ಸೌಮ್ಯ, ಶಿವರಾಜು ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ,

 

 

 

 

 

 

ಘಟನೆ ವಿವರ : ಮಕರ ಸಂಕ್ರಾಂತಿ ಹಬ್ಬಕ್ಕೆದು ಬೆಂಗಳೂರಿನ ಹೆಗ್ಗರೆಯಿಂದ ಆಟೋ ರಿಕ್ಷದಲ್ಲಿ ಕುಣಿಗಲ್ ತಾಲೂಕಿನ ಮೋದೂರು ಗ್ರಾಮಕ್ಕೆ ಬರುತ್ತಿರಬೇಕಾದರೆ, ಮದ್ದೂರು ಕಡೆಯಿಂದ ಬಂದ ಟಿಪ್ಪರ್ ಲಾರಿ ಆಟೋ ಗೆ ಡಿಕ್ಕಿ ಹೊಡೆದ ಪರಿಣಾಮ ಆಟೋ ಪಲ್ಟಿಯಾಗಿದೆ ಎನ್ನಲಾಗಿದ್ದು ಘಟನೆಯಲ್ಲಿ ಐದು ಮಂದಿ ಗಾಯಗೊಂಡಿದ್ದಾರೆ, ತೀವ್ರವಾಗಿ ಗಾಯಗೊಂಡ ತನ್ವಿಕ ಹಾಗೂ ಇತರರನ್ನು ಕುಣಿಗಲ್ ಪಟ್ಟಣದ ಸರ್ಕಾರಿ ಆಸ್ಪತ್ರೆ ಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆಗಾಗಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಕರೆದ್ಯೋಯಲಾಗಿತ್ತು ಚಿಕಿತ್ಸೆ ಫಲಕಾರಿಯಾಗದೇ ಮಗು ಮೃತಪಟ್ಟಿದೆ, ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ,

Leave a Reply

Your email address will not be published. Required fields are marked *

error: Content is protected !!